Advertisement

Bidar:ಪಾರ್ಕ್ ನಲ್ಲಿ ಅನ್ಯಕೋಮಿನ ಪುರುಷನೊಂದಿಗೆ ಇದ್ದ ಮಹಿಳೆ ಮೇಲೆ ಹಲ್ಲೆ

01:45 PM May 12, 2024 | Vishnudas Patil |

ಬೀದರ್ : ಜಿಲ್ಕೆಯ ಬಸವಕಲ್ಯಾಣದಲ್ಲಿ ನೈತಿಕ ಪೊಲೀಸ್​ಗಿರಿ ಘಟನೆ ನಡೆದಿದ್ದು, ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜತೆ ಕುಳಿತಿದ್ದಕ್ಕೆ ಮುಸ್ಲಿಂ ಧರ್ಮೀಯ ಮಹಿಳೆ ಮೇಲೆ ಅದೇ ಧರ್ಮದ ಕೆಲ ಯುವಕರು ಹಲ್ಲೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ವ್ಯಕ್ತಿ ಆಟೋ ಚಾಲಕನಾಗಿದ್ದು, ಈತನ ಜತೆಗೆ ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ನಿಂದಿಸಿ,  ನಮ್ಮ ಧರ್ಮದ ಹೆಸರು ಹಾಳು ಮಾಡುತ್ತೀಯಾ ಎಂದು ಕೆಲ ಯುವಕರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ನೈತಿಕ ಪೊಲೀಸ್ ಗಿರಿ ನಡೆಸಿದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next