Advertisement

ಭೂಕಂಪನದ ಅನುಭವ: ಬೆಚ್ಚಿಬಿದ್ದ ಗ್ರಾಮಸ್ಥರು

06:23 PM Sep 20, 2021 | Team Udayavani |

ಹುಮನಾಬಾದ:  ತಾಲೂಕಿನ ಹುಣಸನಾಳ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಭೂಕಂಪದ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಭೂಮಿಯಿಂದ ಕೇಳಿಬಂದ ಸದ್ದಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

Advertisement

ಭಾನುವಾರ ಮಧ್ಯಾಹ್ನ 2.40 ಸಂಜೆ 5:05ಕ್ಕೆ ಭೂಮಿಯಿಂದ ದೊಡ್ಡಪ್ರಮಾಣದಲ್ಲಿ ಸದ್ದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಕೂಡ ಜನರು ಹೇಳುತ್ತಿದ್ದು, ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸಂಜೆ ಹೊತ್ತಿಗೆ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ್ದಾರೆ. ತಹಶೀಲ್ದಾರ್ ನಾಗಯ್ಯಾ ಹಿರೇಮಠ, ಪಿಎಸ್ಐ ರವಿಕುಮಾರ ನಾಯ್ಕೋಡಿ, ಡಾ। ಗೋವಿಂದ್ ಸೇರಿದಂತೆ  ಭೂಗರ್ಭ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಿಗ್ಗೆ ನುರಿತ ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ತಹಶೀಲ್ದಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತಂದೆ-ತಾಯಿ ವಿರುದ್ಧ ದೂರು ನೀಡಿದ ನಟ ದಳಪತಿ ವಿಜಯ್ ​​

ಗ್ರಾಮದಲ್ಲಿನ ಜನರು ಮನೆ ಹೊರಗಡೆ ಸಮಯ ಕಳೆಯುತ್ತಿದ್ದು ಮತ್ತೆ ಯಾವಾಗ ಭೂಕಂಪದ ಅನುಭವ ಆಗುತ್ತೋ ಎನ್ನುವ  ಆತಂಕದಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ಎರಡು ಸಮಯದಲ್ಲಿ ಸಂಭವಿಸಿದ ಘಟನೆಯ ಕುರಿತು ಅಧಿಕಾರಿಗಳಿಗೆ ಗ್ರಾಮಸ್ಥರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next