Advertisement

Bidar; ಸುಳ್ಳು ಮಾಹಿತಿ ನೀಡಿ ದುರ್ನಡತೆ: ಇಬ್ಬರು ಪೊಲೀಸ್ ಸಿಬಂದಿ ಅಮಾನತು

08:47 PM Mar 01, 2024 | Team Udayavani |

ಬೀದರ್ : ಪೇದೆ ಹುದ್ದೆಗಳ ಭರ್ತಿಗಾಗಿ ದೇಹ ದಾರ್ಡ್ಯತೆ ಪರೀಕ್ಷೆ ವೇಳೆ ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದುರ್ನಡೆತೆ ತೋರಿದ ಹಿನ್ನಲೆ ಪೊಲೀಸ್ ಇಲಾಖೆಯ ಇಬ್ಬರು ಸಿಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.

Advertisement

ಡಿಎಆರ್ ಎಪಿಸಿ ಐವಾನ್ ಮತ್ತು ಜನವಾಡಾ ಠಾಣೆಯ ಸಿಪಿಸಿ ಶಫಿಕ್ ಅಮಾನತ್ತುಗೊಂಡ ಸಿಬ್ಬಂದಿಗಳು. ಪೊಲೀಸ್ ಪೇದೆ ಭರ್ತಿಗಾಗಿ ಶುಕ್ರವಾರ ನಗರದ ಕವಾಯಿತು ಮೈದಾನದಲ್ಲಿ ದೇಹ ದ್ರಾಡ್ಯತೆ ಮತ್ತು ದೇಹ ಸಹಿಷ್ಣುತೆ (ಪಿಎಸ್‌ಟಿ-ಪಿಇಟಿ) ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಐವಾನ್ 1600 ಮೀ. ಓಟವನ್ನು 6.30 ನಿಮಿಷದಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಇವರ ಓಟದ ಸಮಯ ನಿರೀಕ್ಷೆಗಾಗಿ ಸಿಪಿಸಿ ಶಫಿಕ್ ಅವರನ್ನು ನೇಮಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿ ಐವಾನ್ ಓಟದ ವಿಷಯದಲ್ಲಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ದುರ್ನಡತೆ ತೋರಿದ್ದು, ಇತರ ಓಟದ ಸಮಯ ನಿರೀಕ್ಷೆಗಾಗಿ ನಿಗದಿಪಡಿಸಿದ್ದ ಶಫಿಕ್ ಅವರು ಸಹ ಐವಾನ್ ಅವರು ಓಟ್ ಪೂರ್ಣಗೊಳಿಸಿದ್ದಾರೆಂದು ಸುಳ್ಳು ಮಾಹಿತಿ ನೀಡಿ ಕರ್ತವ್ಯ ನಿರ್ವಹಣೆಯಲ್ಲಿ ಬೇಜಬ್ದಾರಿತನ ತೋರಿದ್ದಾರೆ. ಈ ಕುರಿತು ಡಿಎಆರ್ ಡಿಎಸ್‌ಪಿ ವರದಿ, ಸಿಸಿಟಿವಿ ಮತ್ತು ವಿಡಿಯೋ ರಿಕಾರ್ಡಿಂಗ್ ಪರಿಶೀಲಿಸಿದಾಗ ಸಿಬಂದಿಗಳ ದುರ್ನಡತೆ ಬಯಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next