ಸುನಾಮಿಯಾಗಿದ್ದು, ಅದರ ರಭಸಕ್ಕೆ ಮೈತಿ ಅಭ್ಯರ್ಥಿಗಳು ಹೇಳ ಹೆಸರಿಲ್ಲದೇ ಕೊಚ್ಚಿಕೊಂಡು ಹೋಗುತ್ತಾರೆ ಎಂದು
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಭವಿಷ್ಯ ನುಡಿದರು.
Advertisement
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಹೆಚ್ಚು ಸ್ಥಾನ ಗೆದ್ದ ಕಾಂಗ್ರೆಸ್ ಅತ್ಯಲ್ಪ ಸ್ಥಾನ ಗೆದ್ದ ಜೆಡಿಎಸ್ ಜೊತೆಗೆ ಒಲ್ಲದ ಮನಸ್ಸಿಂದ ಮದುವೆಯಾಗಿ ಜೆಡಿಎಸ್‌ಗೆ
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟಿದೆ. ಮೈತ್ರಿ ಮಧ್ಯ ಈಗಾಗಲೇ ಭಾರೀ ಪ್ರಮಾಣದ ಬಿರುಕುಬಿಟ್ಟಿದೆ. ಲೋಸಭೆ ಚುನಾವಣೆ
ಫಲಿತಾಂಶ ನಂತರ 24ಗಂಟೆ ಒಳಗಾಗಿ ವಿಚ್ಛೇದನ ಆಗುವುದು ಖಚಿತ ಎಂದು ತಿಳಿಸಿದರು.
ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಕೋಲಿ ಸಮಾಜಕ್ಕೆ ಸೇರಿದ ರಾಮನಾಥ ಕೋವಿಂದ ಅವರಿಗೆ ನೀಡಿದೆ
ಎಂದರು. ಪುತ್ರ ವ್ಯಾಮೋಹ: ಪಕ್ಷಕ್ಕಾಗಿ ನಿರಂತರ ಶ್ರಮಿಸಿದವರನ್ನು ಕಡೆಗಣಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ
ಪುತ್ರನ ಮೇಲಿನ ವ್ಯಾಮೋಹದಿಂದಾಗಿ ಹಿರಿಯರನ್ನು ಕಡೆಗಣಿಸಿದ್ದಾರೆ. ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್,
ಡಾ|ಎ.ಬಿ.ಮಲಕರೆಡ್ಡಿ ಮತ್ತು ನಾವು ಖರ್ಗೆ ಸೋಲಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಖರ್ಗೆ ಅವರಿಗೆ ಕೋಲಿ ಸಮಾಜದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
Related Articles
ತೆಗೆದುಕೊಂಡು ಹೋಗುವ ವಿದ್ಯಾವಂತ ಅಭ್ಯರ್ಥಿ ಡಾ|ಉಮೇಶ ಜಾಧವ್ ಗೆಲುವು ಖಚಿತ. ವಿಶೇಷವಾಗಿ ಕೋಲಿ ಸಮಾಜದ
ಶೇ.95ರಷ್ಟು ಮತಗಳನ್ನು ಬಿಜೆಪಿಗೆ ನೀಡಲು ನಿರ್ಧರಿಸಿದ್ದು, ಅವರ ಗೆಲುವು ಕಟ್ಟಿಟ್ಟ ಬುತ್ತಿ ಎಂದರು. ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದಾಗ ಲಕ್ಷಾಂತರ ಜನ ಸಮುದಾಯ ಮಧ್ಯ ನನ್ನನ್ನು ಉದ್ದೇಶಿಸಿ, ಬಿಜೆಪಿಗೆ ಕೋಲಿ ಸಮಾಜದ ವ್ಯಕ್ತಿಯೊಬ್ಬರು
ಬಂದಿದ್ದರಿಂದ ಪಕ್ಷದ ಶಕ್ತಿ ವೃದ್ಧಿಯಾಗಿದೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮತ್ತು ಸಮುದಾಯವನ್ನು ಯಾವತ್ತೂ ಮರೆಯಲ್ಲ. ಆ ಜನರ ಬೇಡಿಕೆಯನ್ನು ಖಂಡಿತ ಈಡೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು ಎಂದು ಹೇಳಿದರು.
Advertisement
ದೇಶದ ಪ್ರಧಾನಿಯಿಂದ ನಮ್ಮ ಸಮಾಜದ ಬಗ್ಗೆ ಕಳಕಳಿಯ ಮಾತು ಬರುವುದೆಂದರೆ ಸಾಮಾನ್ಯ ವಿಷಯವಲ್ಲ. ಈ ನಿಟ್ಟಿನಲ್ಲಿ ಹಾಲಿ ಚುನಾವಣೆಯಲ್ಲಿ ಕೋಲಿ ಸಮಾಜದ ಶೇ.95ರಷ್ಟು ಮತ ಬಿಜೆಪಿ ನೀಡಲು ಒಮ್ಮತದಿಂದ ನಿರ್ಧರಿಸಲಾಗಿದೆ ಎಂದುಘೋಷಿಸಿದರು. ಗಂಗಾಮತ ಟೋಕ್ರಿ ಕೋಲಿ ಸಮಾಜ ಕಾರ್ಯದರ್ಶಿ ದಯಾ
ನಂದ, ಉಪಾಧ್ಯಕ್ಷ ಅಶೋಕ ಹಣಕುಣಿ, ಷಣ್ಮುಖ ಕಾರಪಾಕಪಳ್ಳಿ,
ಸಮಾಜದ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಔಂಟಿ, ಅವಿನಾಶ ಮೋಲ್ದಾಸ್, ಸುನೀಲ ಭಾವಿಕಟ್ಟಿ, ಚಂದು ಹಳ್ಳಿಖೇಡಕರ್,
ಅರುಣ ಬಾವಗಿ, ಕಾಶೀನಾಥ ನಾಟಿಕಾರ, ರವೀಂದ್ರ ಜಾಲಗಾರ್, ಪಿಡ್ಡಪ್ಪ ಜಾಲಗಾರ್ ಮೊದಲಾದವರು ಇದ್ದರು.