Advertisement
ನಗರದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಪ್ರಾಂಗಣದಲ್ಲಿ ಈ ಕುರಿತು ಚರ್ಚಿಸಿದ ರೈತ ಸಂಘದಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಬಿಎಸ್ ಎಸ್‌ಕೆ ಕಾರ್ಖಾನೆಗೆ ಕೂಡಲೆ 50 ಕೋಟಿ ಅನುದಾನ ಬಿಡುಗಡೆಗೊಳಿಸಿ
ಕಾರ್ಖಾನೆ ಪ್ರಾರಂಭಿಸಬೇಕು. ಬಾಕಿ ಕಬ್ಬಿನ ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಹೆಸರು ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು. ಕಳೆದ ವರ್ಷ 104 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಈ ವರ್ಷ ಕೆವಲ 40 ಕೇಂದ್ರ ತೆರೆಯುವುದು ಸರಿ ಅಲ್ಲ ಎಂದರು.
ಪ್ರಾರಂಭಿಸಿ ರೈತರ ಕಬ್ಬು ಸಾಗಿಸುವ ಕೆಲಸ ಮಾಡುತ್ತೇನೆ. ಕಬ್ಬಿನ ಬಾಕಿ ಹಣ ಕುರಿತು ಕೂಡ ಅಧಿಕಾರಿಗಳ ಜೊತೆ
ಮಾತನಾಡುತ್ತೇನೆ. ಅಲ್ಲದೆ ಹೆಸರು ಖರೀದಿ ಕೇಂದ್ರ ಕುರಿತು ಕೂಡ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ರೈತ ಸಂಘದ ಮುಖಂಡರಾದ ಸತೀಶ ನ್ನನೂರೆ, ಚಂದ್ರಶೇಖರ ಜಮಖಂಡಿ, ಶ್ರೀಮಂತ ಬಿರಾದಾರ, ಸಿದ್ದರಾಮಯ್ಯ ಅಣದೂರೆ, ವಿಠಲರೆಡ್ಡಿ ಅಣದೂರ ಇನ್ನಿತರರು ಇದ್ದರು.