Advertisement
ನಗರದ ಶಾರದಾ ಆರ್‌ಸಿಟಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಅಗ್ರ ಬ್ಯಾಂಕ್ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೋನ್ ಕುರಿತ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ಪ್ಯಾಕೇಜ್‌ನಿಂದ ಕಾರ್ಮಿಕರಿಗೆ ಮತ್ತೇ ಕಾರ್ಖಾನೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ನೀಡಬಹುದಾಗಿದೆ ಎಂದರು. ಎಸ್‌ಬಿಐ ವ್ಯವಸ್ಥಾಪಕ ಸುರೇಶ ಮತ್ತು ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ. ಭಾಗವತ್ಮಾತನಾಡಿ, ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೋನ್‌ಗೆ ಯಾವುದೇ ಹೆಚ್ಚುವರಿ ಭದ್ರತೆ, ಪ್ರೊಸೆಸಿಂಗ್ ಫೀ ಇರುವುದಿಲ್ಲ. ಮರುಪಾವತಿಗೆ ನಾಲ್ಕು ವರ್ಷ ಅವಧಿ ಇದೆ. ಒಂದು ವರ್ಷ ಮೋರೆಟೋರಿಯಮ್ ಅವಧಿ ಇರುತ್ತದೆ. ಈ ವಿಶೇಷ ಪ್ಯಾಕೇಜ್‌ನಲ್ಲಿ ಔಟ್ ಸ್ಟಾಸ್ಟ್ಯಾಂಡಿಂಗ್ ಸಾಲದ ಮೇಲೆ ಶೇ.20 ರಷ್ಟು ಹೆಚ್ಚುವರಿ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು.