Advertisement
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಬಿ.ಎಸ್. ಬಿರಾದಾರ, ಹಿಂದೆ ಯಾವುದೇ ವಿಶ್ವವಿದ್ಯಾಲಯಗಳಿರಲಿಲ್ಲ. ಆದರೂ ಅನಕ್ಷರಸ್ಥ ಹಿರಿಯರಿಂದ ಮೂಡಿ ಬಂದ ಶ್ರೀಮಂತ ಸಾಹಿತ್ಯವೇ ಜನಪದವಾಗಿದೆ. ಓದಲು ಬಾರದಿದ್ದರೂ ಜನಪದರು ಹೃದಯಕ್ಕೆ ತಟ್ಟುವ, ಮನಸ್ಸಿಗೆ ಮುಟ್ಟುವ ಸಾಹಿತ್ಯವನ್ನು ಈ ಲೋಕಕ್ಕೆ ನೀಡಿ ಹೋಗಿದ್ದಾರೆ ಎಂದು ಸ್ಮರಿಸಿದರು.
ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಡಾ| ಜಗನ್ನಾಥ ಹೆಬ್ಟಾಳೆ. ಮೂರು ದಿವಸಗಳ ಜಾನಪದ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಗಡಿಭಾಗದಲ್ಲಿ ಜನಪದದ ಪಾಂಚಜನ್ಯ ಮೊಳಗಿಸುತ್ತಿರುವ ಡಾ| ಹೆಬ್ಟಾಳೆದ್ವಯರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕರರಾವ ಹೊನ್ನಾ, ನಿಜಲಿಂಗಪ್ಪ ತಗಾರೆ,
ಕೆ. ಸತ್ಯಮೂರ್ತಿ, ಶಂಭುಲಿಂಗ ವಾಲೊಡ್ಡಿ, ಬಸವರಾಜ ಮೂಲಗೆ, ಡಾ| ಜಗನ್ನಾಥ ಹೆಬ್ಬಾಳೆ, ಡಾ| ರಾಜಕುಮಾರ ಹೆಬ್ಬಾಳೆ, ಪ್ರೊ| ಎಸ್.ಬಿ. ಬಿರಾದಾರ ಇದ್ದರು.
Related Articles
Advertisement
ಪ್ರೊ| ಕಂಬಾರ ರಾಷ್ಟ್ರೀಯ ಪ್ರಶಸ್ತಿ ರಾಷ್ಟ್ರೀಯ ಜಾನಪದ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರೊ| ಚಂದ್ರಶೇಖರ ಕಂಬಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾರ್ಜುನ ಪಾಟೀಲ, ಡಾ| ದಯಾನಂದ ಕಾರಬಾರಿ, ಶಿವಾನಂದ ಗುಂದಗಿ, ಶಿವರಾಜ ಖೆಲೆ, ಸಂತೋಷ ಹಡಪದ, ಗಣಪತಿ ದೇಶಪಾಂಡೆ, ಕಮಳಮ್ಮ ಸಂತಪೂರೆ, ಮಹಾದೇವಿ ಅಷ್ಟೂರೆ, ವೀರಂತರೆಡ್ಡಿ ಜಂಪಾ, ಪಂಡಿತ ಬಾಳೂರೆ, ಗಂಗಮ್ಮ ಫುಲೆ, ದೇವೇಂದ್ರ ಭೂಪಾಳೆ, ಗುರುನಾಥ ಹಲಿಂಗೆ, ಹಾವಗಿರಾವ ಕಳಸೆ, ಡಾ| ಶಶಿಕಾಂತ ಪಾಟೀಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.