Advertisement

ಕೃಷಿ ಸಾಲಕ್ಕೆ ಬಂಡವಾಳ ಕೊರತೆ

04:04 PM Mar 13, 2020 | Naveen |

ಬೀದರ: ಸಹಕಾರಿ ರಂಗವು ಕೃಷಿ ಕ್ಷೇತ್ರಕ್ಕೆ ಸಾಲ ನೀಡುವ ಪ್ರಧಾನ ಬ್ಯಾಂಕಿಂಗ್‌ ವ್ಯವಸ್ಥೆಯಾಗಿ ದಶಕಗಳಿಂದ ಮುಂಚೂಣಿಯಲ್ಲಿದೆ. ಆದರೂ ರೈತರ ಬೇಡಿಕೆಗೆ ಅನುಗುಣವಾಗಿ ಸಾಲ ನೀಡಲು ಬಂಡವಾಳದ ಕೊರತೆ ಎದುರಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಆಯ್ದ ಪ್ಯಾಕ್ಸ್‌ಗಳ ಅಧ್ಯಕ್ಷರಿಗಾಗಿ ಹಮ್ಮಿಕೊಂಡಿದ್ದ ಸಾಲ ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳು ಸಹಕಾರ ವ್ಯವಸ್ಥೆಯ ಮೂಲಕ ರೈತರಿಗೆ ಕಮ್ಮಿ ಬಡ್ಡಿ ದರದಲ್ಲಿ ಸಾಲ ನೀಡಲು ಸಹಾಯ ಮಾಡುತ್ತಿದ್ದು ನಬಾರ್ಡ್‌ನಿಂದ ಬಂಡವಾಳ ಹೊಂದಿಸುತ್ತಿದೆ. ಇದರಲ್ಲಿ ಗ್ರಾಮೀಣ ಮಟ್ಟದಲ್ಲಿ ಜನರೇ ನಡೆಸುವ ಸ್ಥಳೀಯವಾಗಿ ಅಸ್ತಿತ್ವದಲ್ಲಿರುವ ಕೆಪಿಪಿಎಸ್‌ ಮೂಲಕವೇ ವ್ಯವಹಾರ ನಡೆಯುತ್ತಿದೆ ಎಂದರು.

ಪಿಕೆಪಿಎಸ್‌ಗಳಿಗೆ ಸುಮಾರು ಶೇ. 2.5 ಬಡ್ಡಿ ದರದ ಲಾಭಾಂಶ ಸಿಗುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಮೇಲ್‌ಸ್ತರದ ಬ್ಯಾಂಕುಗಳು ಹೆಚ್ಚು ಬಡ್ಡಿದರ ವಿ ಧಿಸುವುದನ್ನು ತಡೆಯಲಾಗಿದೆ. ಸರ್ಕಾರ ನಬಾರ್ಡ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳು ಹೆಚ್ಚೆಚ್ಚು ಕೃಷಿ ಸಾಲ ನೀಡುವ ನಿಟ್ಟಿನಲ್ಲಿ ಪ್ಯಾಕ್ಸ್‌ ಗಳು ತಮ್ಮ ಸ್ವಂತ ಬಂಡವಾಳ ಹೂಡುವಂತೆ ಯೋಜನೆಗಳನ್ನು ರೂಪಿಸುತ್ತಿವೆ. ಈ ನಿಟ್ಟಿನಲ್ಲಿ ಆಯ್ಕೆಯಾಗುವ ಪ್ಯಾಕ್ಸ್‌ಗಳು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬೇಕಾಗಿರುವ ಸಿದ್ಧತೆಗಳನ್ನು ಹೊಂದಬೇಕು. ಡಿಸಿಸಿ ಬ್ಯಾಂಕ್‌ ಅದಕ್ಕೆ ಬೇಕಾಗುವ ನೆರವು ನೀಡಲು ಸಿದ್ಧವಿದೆ ಊರಿನಲ್ಲಿರುವ ಎಲ್ಲ ರೈತರಿಗೂ ಸಾಲ ಸಿಗುವಂತಾಗಬೇಕು. ಬೇಡಿಕೆಯಷ್ಟು ಸಾಲ ವಿತರಿಸಬೇಕು. ಸಂಪನ್ಮೂಲಗಳ ಸದ್ಬಬಳಕೆಯಾಗಬೇಕು ಎಂದರು.

ಡಿಸಿಸಿ ಬ್ಯಾಂಕಿನಿಂದ ಜಿಲ್ಲೆಯ ಎಲ್ಲ ಪಿಕೆಪಿಎಸ್‌ ಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದ್ದು ಬ್ಯಾಂಕಿನ ನುರಿತವರಿಂದ ಸಂಘಗಳ ಸಿಬ್ಬಂದಿಗೆ ಕಂಪ್ಯೂಟರ್‌ ತರಬೇತಿ ಕೂಡ  ಡಲಾಗುವುದು. ಸದಸ್ಯರ ಸಾಮರ್ಥ್ಯ ವೃದ್ಧಿಗೆ ಮತ್ತು ಸಂಘಗಳ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಿ ಶಕ್ತಿ ತುಂಬಲು ಡಿಸಿಸಿ ಬ್ಯಾಂಕ್‌ ಹಲವು ರೀತಿಯಲ್ಲಿ ಯತ್ನಿಸುತ್ತಿದೆ ಎಂದು ಹೇಳಿದರು.

ದೂರದೃಷ್ಟಿ, ಹೊಸ ಹೊಸ ಯೋಚನೆ, ಅಭಿವೃದ್ಧಿ ಪರ ಚಿಂತನೆಗಳಿರುವುದು ಸಂಸ್ಥೆಯ ಅಧ್ಯಕ್ಷರಿಗೆ ಅವಶ್ಯಕ. ತನಗೆ ಕಾನೂನುಬದ್ಧವಾಗಿ ಪ್ರದತ್ತವಾಗಿ ಬಂದ ಅಧಿಕಾರಗಳನ್ನು ಅರಿತು ಚಲಾಯಿಸುವುದು ಕೂಡ ಅವಶ್ಯಕ. ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಬ್ಯಾಂಕಿನಲ್ಲಿ ಮಾತ್ರವಲ್ಲ, ಎಲ್ಲ ಸಂಘಗಳಲ್ಲಿ ಕಂಪ್ಯೂಟರೀಕರಣ, ಪ್ರತಿ ತಿಂಗಳು ಆಯವ್ಯಯ ತಖ್ತೆಯನ್ನು ಕಂಪ್ಯೂಟಡೀಕರಣಗೊಳಿಸಲಾಗಿದೆ. ಪ್ರತಿ ಸಂಘಗಳನ್ನು ಆಧುನಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಅನುಗುಣವಾಗಿ ಸನ್ನದುಗೊಳಿಸಲಾಗುತ್ತಿದ್ದು, ಸಂಘಗಳು ಕೇವಲ ಕೃಷಿ ಕ್ಷೇತ್ರವನ್ನಲ್ಲದೇ ಇತರ ವ್ಯಾಪಾರಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವತ್ತ ಗಮನ ಹರಿಸಬೇಕು. ಆ ಮೂಲಕ ಗ್ರಾಮದ ಸಮಾಜದ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಹೇಳಿದರು.

Advertisement

ಡಿಸಿಸಿ ಬ್ಯಾಂಕಿನ ಸಿಇಒ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ಚನಬಸಯ್ಯ ಸ್ವಾಮಿ, ವಿಠಲ ರೆಡ್ಡಿ ಯಡಮಲ್ಲೆ, ಬಸವರಾಜ ಕಲ್ಯಾಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪಿಕೆಪಿಎಸ್‌ ಅಧ್ಯಕ್ಷರಾದ ಶಂಕರಾವ್‌ ಪಾಟೀಲ, ಅಶೋಕ ಜಿ., ಓಂಕಾರ ಬಿ. ಪಟನೆ, ವಿಜಯಕುಮಾರ, ಅನೀಲಕುಮಾರ ಕೋರಿ, ಸಂಗಮೇಶ ಎಂ., ಹಣಮಂತರಾವ್‌, ರವಿ ಪಾಟೀಲ, ಮಲ್ಲಿಕಾರ್ಜುನ ಇನ್ನಿತರರು ಇದ್ದರು. ಸಹಾರ್ದ ನಿರ್ದೇಶಕ ಸುಬ್ರಮಣ್ಯ ಪ್ರಭು ಸ್ವಾಗತಿಸಿದರು. ನಾಗಶೆಟ್ಟಿ, ತನ್ವೀರ ರಜಾ, ಅನೀಲ, ಮಹಾಲಿಂಗ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next