Advertisement

ಬೀದರ್ ನಲ್ಲಿ 104 ಕೋವಿಡ್ ಸೋಂಕಿತರು ಪತ್ತೆ! ಓರ್ವ ಸಾವು

07:41 PM Jul 31, 2020 | sudhir |

ಬೀದರ್ : ಗಡಿ ನಾಡು ಬೀದರ್ ನಲ್ಲಿ ಶುಕ್ರವಾರ ಒಂದೇ ದಿನ ಹೆಮ್ಮಾರಿ ಕೋವಿಡ್ ಪ್ರಕರಣದಲ್ಲಿ ಶತಕ ಬಾರಿಸುವ ಮೂಲಕ ಅಟ್ಟಹಾಸವನ್ನು ಮುಂದುವರೆಸಿದ್ದು, ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 75ಕ್ಕೆ ಮತ್ತು ಪಾಸಿಟಿವ್ ಸಂಖ್ಯೆ 2175ಕ್ಕೆ ಏರಿಕೆ ಕಂಡಿದೆ.

Advertisement

ಇದೇ ಮೊದಲ ಬಾರಿಗೆ ಒಂದೇ ದಿನ 104 ಜನರಿಗೆ ಕೋವಿಡ್ ಸೋಂಕು ಒಕ್ಕರಿಸಿದ್ದು, ಇದರಲ್ಲಿ 41 ಜನರ ಸಂಪರ್ಕ ಪತ್ತೆ ಸಾಧ್ಯವಾಗಿಲ್ಲ. ಇನ್ನೂ ಒಟ್ಟು ವೈರಸ್ ಪ್ರಕರಣಗಳಲ್ಲಿ ಅರ್ದದಷ್ಟು ಬೀದರ್ ತಾಲೂಕಿನವರೇ ಸೇರಿದ್ದಾರೆ. ಬೀದರ್ ತಾಲೂಕು 52, ಹುಮನಾಬಾದ್- ಚಿಟಗುಪ್ಪ ತಾಲೂಕು 21, ಭಾಲ್ಕಿ ತಾಲೂಕು 19, ಔರಾದ್- ಕಮಲನಗರ ತಾಲೂಕು 8 ಮತ್ತು ಬಸವಕಲ್ಯಾಣ ತಾಲೂಕಿನ ಇಬ್ಬರು ಹಾಗೂ ಅನ್ಯ ರಾಜ್ಯದ ಇಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 2175 ಆಗಿದ್ದು, 1483 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 613 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯ ಒಟ್ಟು 50,130 ಜನರ ಗಂಟಲ ಮಾದರಿ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 47,231 ಮಂದಿಯದ್ದು ನೆಗೆಟಿವ್ ಬಂದಿವೆ. ಇನ್ನೂ 724 ಜನರ ವರದಿ ಬರಬೇಕಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಬೀದರ್ ಬಹುತೇಕ ಬಡಾವಣೆಗಳಿಗೆ ಕೋವಿಡ್- 19 ತನ್ನ ಕರಾಳ ಛಾಯೆ ಆವರಿಸಿದೆ. ಇಂದು ನಗರದ ನೌಬಾದ್, ಜಮಿಸ್ತಾನಪುರ, ಎಸ್ಪಿ ಕಚೇರಿ ಮಂಗಲಪೇಟ್, ಗುಂಪಾ, ಚಿದ್ರಿ ಮಲಗೊಂಡ ಕಾಲೋನಿ, ಬ್ಯಾಂಕ್ ಕಾಲೋನಿ, ಗೋಲೇಖಾನಾ, ಅಷ್ಟೂರು, ಕುಂಬಾರವಾಡಾ, ಪೋರ್ಡ್ ಶೋ ರೂಮ್ ಕಚೇರಿ ನೌಬಾದ್, ಆದರ್ಶ ಕಾಲೋನಿ, ಅಬ್ದುಲ್ ಪಯಾಜ್ ದರ್ಗಾ, ವಿದ್ಯಾನಗರ ಕಾಲೋನಿ, ಕೈಲಾಶ್ ನಗರ ಗುಂಪಾ, ಲಾಡಗೇರಿ, ಕೆಎಚ್‌ಬಿ ಕಾಲೋನಿ, ಚಿದ್ರಿ, ಬ್ಯಾಂಕ್ ಕಾಲೋನಿ, ಬ್ರಿಮ್ಸ್ ಆಸ್ಪತ್ರೆ, ಶಿವನಗರ, ಮೈಲೂರು, ಸಿದ್ದಾಪುರ, ರಂಗ ಮಂದಿರ, ಎಸ್‌ಬಿಐ ಡಿಸಿ ಕಚೇರಿ, ಮಾಧವ ನಗರ ನೌಬಾದ್, ಗಾಂದಿ ಗಂಜ್, ವೈಷ್ಣವಿ ಕಾಲೋನಿ, ನಯಾ ಕಮಾನ್, ಕೆಇಬಿ ಕಾಲೋನಿ, ತಾಲೂಕಿನ ಮರಖಲ್, ಕಮಠಾಣಾದಲ್ಲಿ ಸೋಂಕು ಕೇಸ್ ದೃಢಪಟ್ಟಿವೆ.

ಭಾಲ್ಕಿ ಪಟ್ಟಣದ ಕನಸೆ ಬಿಲ್ಡಿಂಗ್, ಐದ್ರಥ್ ನಗರ, ಲೆಕ್ಚರ್ ಕಾಲೋನಿ, ತಾಲೂಕಿನ ಆಳಂದಿ, ನಿಟ್ಟೂರು, ಮೇಹಕರ್, ಕೆಎಜಿಬಿ ಭಾತಂಬ್ರಾ, ಸಿದ್ದೇಶ್ವರ, ಜೋಳದಾಪಕಾ, ಕೊಡ್ಲಿ, ಕೋಸಂ ಗ್ರಾಮ, ಬಸವಕಲ್ಯಾಣ ತಾಲೂಕಿನ ಮುಚಳಂಬ, ತಡೋಳಾ, ಔರಾದ್ ತಾಲೂಕಿನ ಗಡಿಕುಸನೂರು, ರಕ್ಷಾಳ್ ಗ್ರಾಮ, ಚಿಟಗುಪ್ಪ ತಾಲೂಕಿನ ಮಂಗಲಗಿ, ಕೂಡಂಬಲ್ ಮತ್ತು ಕಮಲನಗರ ಪಟ್ಟಣ, ತಾಲೂಕಿನ ಮುರ್ಕಿ ತಾಂಡಾ, ಮುರ್ಕಿ, ಹಕ್ಯಾಳ್ ಗ್ರಾಮ ಹಾಗೂ ಹುಮನಾಬಾದ್ ಪಟ್ಟಣ, ತಾಲೂಕಿನ ಮಾಣಿಕನಗರ, ಘಾಟಬೋರಾಳ, ಹಳ್ಳಿಖೇಡ (ಕೆ) ವಾಡಿ, ಹುಡಗಿ, ಜಲಸಂಗಿ ಗ್ರಾಮದಲ್ಲಿ ಪ್ರಕರಣ ಕಾಣಿಸಿಕೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next