Advertisement

ಬೀದರ್ ಕೋವಿಡ್ ಸೋಂಕಿಗೆ 2 ಸಾವು, 48 ಹೊಸ ಪ್ರಕರಣ ಪತ್ತೆ

09:16 PM Jul 30, 2020 | sudhir |

ಬೀದರ್ : ಗಡಿನಾಡು ಬೀದರ್ ನಲ್ಲಿ ಹೆಮ್ಮಾರಿ ಕೋವಿಡ್ ಮತ್ತೆ ಅಬ್ಬರಿಸಿದ್ದು, ಗುರುವಾರ ಮತ್ತಿಬ್ಬರು ಸೋಂಕಿತರನ್ನು ಬಲಿ ಪಡೆದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಈಗ 74ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ ಇಂದು 48 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Advertisement

ಬೀದರ್ ಹೊರವಲಯದ ಮಾಮನಕೇರಿಯ 85 ವರ್ಷದ ವೃದ್ಧೆ ಹಾಗೂ ಭಾಲ್ಕಿ ಪಟ್ಟಣದ ಹಿರೇಮಠ ಗಲ್ಲಿಯ 75 ವರ್ಷದ ವೃದ್ಧ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಅದಿಕ ರಕ್ತದೊತ್ತಡದಿಂದ ಬಳುತ್ತಿದ್ದ ಅವರಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಪಲಿಸದೇ ಜು. 28 ರಂದು ಇಬ್ಬರು ಕೊನೆಯುಸಿರೆಳೆದಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳ ಪೈಕಿ ಬೀದರ್ ನಗರ ಮತ್ತು ತಾಲೂಕಿನಲ್ಲೇ ಅತಿ ಹೆಚ್ಚು 23 ಕೇಸ್‌ಗಳು ಪತ್ತೆಯಾಗಿವೆ. ಇನ್ನುಳಿದಂತೆ ಔರಾದ ತಾಲೂಕು 8, ಭಾಲ್ಕಿ ಮತ್ತು ಹುಮನಾಬಾದ್ ತಾಲೂಕಿನಲ್ಲಿ 7, ಬಸವಕಲ್ಯಾಣ ತಾಲೂಕಿನಲ್ಲಿ 3 ಸೋಂಕಿತರ ಪ್ರಕರಣಗಳು ವರದಿಯಾಗಿವೆ.

ಇಂದಿನ 48 ಪಾಸಿಟಿವ್ ಕೇಸ್‌ಗಳೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2071ಗೆ ಏರಿಕೆಯಾಗಿದೆ. ಗುರುವಾರ 44 ಜನ ಸೇರಿ ಈವರೆಗೆ 1409 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 584 ಸಕ್ರೀಯ ಪ್ರಕರಣಗಳಿವೆ.

ಎಲ್ಲೇಲ್ಲಿ ಪ್ರಕರಣಗಳು:
ಬೀದರ ನಗರದ ಎಸ್‌ಪಿ ಕಚೇರಿ 6, ಬ್ರಿಮ್ಸ್ 4, ನಗರ 3, ಅಬ್ದುಲ್ ಪೈಯಜ್ ದರ್ಗಾ ಕ್ವಾಟರ‍್ಸ್ 2, ನೌಬಾದ್, ಆದರ್ಶ ಕಾಲೋನಿ, ಮೈಲೂರು ಕ್ರಾಸ್, ಚಿಲ್ಲರ್ಗಿ, ಅಲಿಯಂಬರ್, ಆದರ್ಶ ಕಾಲೋನಿ, ಆಣದೂರ, ಲಾಡಗೇರಿ ಎಸ್ಪಿ ಕಚೇರಿಯಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ಔರಾದ ತಾಲೂಕಿನ ಮಸ್ಕಲ್ 2, ಡೋಣಗಾಂವ್, ಸಿದ್ದಾಪುರ, ರಕ್ಷಾಳ, ಚಿಂತಾಕಿ, ನಾಗಮಾರಪಳ್ಳಿ ಮತ್ತು ಸುಂಕನಾಳದಲ್ಲಿ ತಲಾ 1 ಕೇಸ್, ಭಾಲ್ಕಿ ತಾಲೂಕಿನ ಬೀರಿ (ಕೆ) 2, ನಿಟ್ಟೂರು (ಬಿ), ಬರ್ದಾಪುರ, ಆಳಂದಿ, ಪಟ್ಟಣದ ಪೋಸ್ಟ್ ಆಪೀಸ್, ಲೆಕ್ಚರರ್ ಕಾಲೋನಿಯಲ್ಲಿ ತಲಾ 1, ಬಸವಕಲ್ಯಾಣ ನಗರದಲ್ಲಿ 3 ಜನ, ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) 5 ಮತ್ತು ಜನತಾನಗರ ಹುಡಗಿಯಲ್ಲಿ 2 ಸೋಂಕು ಪ್ರಕರಣ ದೃಢಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next