Advertisement
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜ್ಯದ 20 ಜನ ಮಂತ್ರಿಗಳು ಕಾಂಗ್ರೆಸ್ಸಿನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಯಾರೊಬ್ಬ ಸಚಿವರು ಸಹ ಸ್ಪರ್ಧೆಗೆ ಧೈರ್ಯ ಮಾಡಲಿಲ್ಲ. ಕಾರ್ಯಕರ್ತರು ಸಹ ಸಿಗಲಿಲ್ಲ. ಹಾಗಾಗಿ ಗತಿ ಇಲ್ಲದೇ ಕುಟುಂಬದ ಸದಸ್ಯರ ಹೆಸರನ್ನು ಘೊಷಿಸಿದ್ದಾರೆ ಎಂದು ಹೇಳಿದರು.
Related Articles
Advertisement
ಕೆ.ಎಸ್ ಈಶ್ವರಪ್ಪ ಬಿಜೆಪಿಯ ಹಳೆ ಕಾರ್ಯಕರ್ತರು. ಯಾರೇ ಅಸಮಾಧಾನಿತರು ಸಹ ಬಿಜೆಪಿ ಪಕ್ಷ ಅಥವಾ ಪ್ರಧಾನಿಯನ್ನು ದೂಷಿಸುತ್ತಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದೇ ಅವರ ಆಶಯ. ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರಿಬ್ಬರು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿಲ್ಲ, ಅದು ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದು, ಅಲ್ಲಿಯೇ ಪರಿಹಾರವೂ ಆಗಲಿದೆ. ಒಂದು ವಾರದ ನಂತರ ಎಲ್ಲರೂ ಬಿಜೆಪಿ ಜತೆ ಇರುತ್ತಾರೆ. ಇನ್ನೂ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸುಮಲತಾ ಮತ್ತು ಕರಡಿ ಸಂಗಣ್ಣ ಅವರು ಸೋಮವಾರ ಭೇಟಿಯಾಗಲಿದ್ದು, ಅವರ ಮನವೊಲಿಕೆ ಸಫಲವಾಗಲಿದೆ. ಬೀದರ ಕ್ಷೇತ್ರದಲ್ಲಿ ಸಂಧಾನ ಮಾಡುವಂಥ ಸ್ಥಿತಿ ಏನಿಲ್ಲ, ಎಲ್ಲ ಭಿನ್ನಮತ ಶಮನವಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ, ಅವಿನಾಶ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಸುಭಾಷ ಗುತ್ತೇದಾರ್, ಎಂ.ಜಿ ಮೂಳೆ, ಅಮರನಾಥ ಪಾಟೀಲ, ಈಶ್ವರಸಿಂಗ್ ಠಾಕೂರ್ ಇದ್ದರು.