Advertisement
ನಗರದ ರಾಮ ಮಂದಿರ ಸೇರಿದಂತೆ ವಿವಿಧ ದೇಗುಲಗಳು ವಿದ್ಯುತ್ ದೀಪಾಲಂಕಾರ, ಭಗವಾ ಧ್ವಜದಿಂದ ಕಂಗೊಳಿಸುತ್ತಿದ್ದವು. ರಾಮ-ಹನುಮಾನ ವೃತ್ತ ಹಾಗೂ ಅನೇಕ ಮನೆಗಳ ಮೇಲೆಯೂ ಧ್ವಜಗಳು ಹಾರಾಡಿದವು. ಮಂದಿರ ಮತ್ತು ಮನೆಗಳಲ್ಲಿ ಭಕ್ತರುಮರ್ಯಾದೆ ಪುರುಷೋತ್ತಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ರಾಮ-ಹನುಮ ದೇವರ ಜಯ ಘೋಷಗಳು ಮೊಳಗಿದವು. ಹನುಮಾನ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್‌ನ ಕಾರ್ಯದರ್ಶಿ ಸತೀಶ ನೌಬಾದೆ ಮತ್ತು ಬಜರಂಗ ದಳದ ಸಂಯೋಜಕ ಸುನೀಲ ದಳವೆ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಜರುಗಿದವು. ಎನ್.ಆರ್.ವರ್ಮಾ, ಬಾಬುರಾವ ಕಾರಬಾರಿ, ಗುರುನಾಥ್ ಜಾತೀಕರ, ಅಶೋಕ ಹೊಕ್ರಾಣೆ, ಹಣಮಂತ ಬುಳ್ಳಾ, ರಾಜಕುಮಾರ ಚಿದ್ರಿ ಇತರರಿದ್ದರು. ನಗರದ ಸಿದ್ಧಾರೂಢ ಮಠದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶ್ರೀ ಶಿವಕುಮಾರ ಸ್ವಾಮಿಗಳು ಪೂಜೆ ಸಲ್ಲಿಸಿ ಸಿಹಿ ಹಂಚಿದರು. ನಗರದ ನೌಬಾದ ಬಸವೇಶ್ವರ ವೃತ್ತದಲ್ಲಿ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಭಗವಾ ಧ್ವಜ ಹಾರಿಸಿ ಜಯ ಘೋಷ
ಮೊಳಗಿಸಲಾಯಿತು. ಶ್ರೀ ದಯಾನಂದ್ ಸ್ವಾಮಿ, ಶಿವರಾಜ ಮಾಳಗೆ, ಸೋಮನಾಥ ಭಂಗೂರೆ ಮತ್ತಿತರರಿದ್ದರು. ವಿಎಚ್
ಪಿಯಿಂದ ನಗರದ ವಿವಿಧ ಕಡೆ ಮತ್ತು ಸುತ್ತಲಿನ ಗ್ರಾಮಗಳಾದ ವಿದ್ಯಾನಗರ ಕಾಲೋನಿ, ಕುಂಬಾರವಾಡಾ, ಹಳ್ಳದಕೇರಿ, ಮೈಲೂರ್, ಯದಲಾಪೂರ, ರೇಕುಳಗಿ, ವಾಲದೊಡ್ಡಿ, ದದ್ದಾಪೂರ, ಚಿಟ್ಟಾ, ಘೋಡಂಪಳ್ಳಿ, ಮರಖಲ್ ಮತ್ತು ಅಲಿಯಂಬರ್‌ನಲ್ಲಿ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮಗಳು ನಡೆದವು.