Advertisement

ಬೀದರ್ –ಬೆಂಗಳೂರು ವಿಮಾನಯಾನ ಆರಂಭ

07:17 PM May 25, 2020 | sudhir |

ಬೀದರ್: ಲಾಕ್‌ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ದೇಶಿಯ ವಿಮಾನಯಾನ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವುದರಿಂದ ಮೊದಲ ದಿನವಾದ ಸೋಮವಾರದಿಂದ ಬೆಂಗಳೂರು ಮತ್ತು ಬೀದರ್ ನಡುವೆ ವಿಮಾನ ಹಾರಾಟ ಪ್ರಾರಂಭವಾಗಿದೆ.

Advertisement

ಫೆ. 7ರಂದು ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ನಂತರ ಕೋವಿಡ್ ಲಾಕ್‌ಡೌನ್ ಕಾರಣ ಕಳೆದ ಎರಡು ತಿಂಗಳಿಂದ ಸೇವೆ ಸ್ಥಗಿತಗೊಂಡಿತ್ತು. ಸೋಮವಾರದಿಂದ ವಿಮಾನಯಾನ ಆರಂಭಗೊಂಡಿದ್ದು, 70 ಸೀಟಿನ ಆಸನವುಳ್ಳ ಟ್ರೂಜೆಟ್ ಸಂಸ್ಥೆಯ ವಿಮಾನ ಬೆಳಿಗ್ಗೆ ಬೆಂಗಳೂರಿನಿಂದ ಬೆಳಿಗ್ಗೆ 11.45ಕ್ಕೆ ಹೊರಟು ನಗರದ ಹೊರವಲಯದ ಚಿದ್ರಿ ಬಳಿಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1.25ಕ್ಕೆ ಬಂದಿಳಿಯಿತು. ಒಟ್ಟು 8 ಜನರು ಪ್ರಯಾಣ ಮಾಡಿದರು.

ಇನ್ನೂ ಇದೇ ವಿಮಾನ ಮರಳಿ ಮಧ್ಯಾಹ್ನ 2 ಗಂಟೆಗೆ  ಬೀದರ್ ನಿಂದ ಬೆಂಗಳೂರಿಗೆ ಹೊರಟು ಮಧ್ಯಾಹ್ನ 3.40ಕ್ಕೆ ತಲುಪಿತು.  ಬೀದರ್ ನಿಂದ 11 ಜನರು ರಾಜಧಾನಿಗೆ ಪ್ರಯಾಣ ಬೆಳೆಸಿರು. ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಯಿತು. ಮಾಸ್ಕ್‌ಗಳ ಬಳಕೆ ಕಡ್ಡಾಯ ಮಾಡಲಾಗಿದ್ದು, ಜಿಎಂಆರ್ ಸಂಸ್ಥೆ ಸಿಬ್ಬಂದಿಗಳು ಎಲ್ಲ ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next