Advertisement

ಬೀದರ್‌: ಕೋವಿಡ್‌ ಸೋಂಕಿಗೆ ವೃದ್ಧ ಬಲಿ

08:50 PM Jun 26, 2020 | Sriram |

ಬೀದರ್‌: ಗಡಿ ಜಿಲ್ಲೆ ಬೀದರ್‌ನಲ್ಲಿ ಜನರ ಜೀವ ಹಿಂಡುತ್ತಿರುವ ರಕ್ಕಸ ಕೋವಿಡ್‌ 19 ಸೋಂಕು ಶುಕ್ರವಾರದ ಮಟ್ಟಿಗೆ ಕೊಂಚ ತಗ್ಗಿದ್ದರೂ ವೃದ್ಧ ರೋಗಿಯನ್ನು ಬಲಿ ತೆಗೆದುಕೊಂಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 16ಕ್ಕೇರಿಕೆಯಾಗಿದೆ.

Advertisement

ಚಿಟಗುಪ್ಪ ಪಟ್ಟಣದ ಹುಸೇನಿ ಆಲಂ ಗಲ್ಲಿಯ 71 ವರ್ಷದ ವೃದ್ಧ (ಪಿ 10684) ಜೂ. 23ರಂದು ಕೆಮ್ಮು, ಉಸಿರಾಟದ ತೊಂದರೆ ಹಿನ್ನೆಲೆ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರು ಆಗಮಿಸಿ ಚಿಕಿತ್ಸೆ ನೀಡುವಷ್ಟರಲ್ಲಿ ಮೃತಪಟ್ಟಿದ್ದರು. ಮೃತ ವೃದ್ಧನ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಬಂದ ವರದಿಯಲ್ಲಿ ಪಾಸಿಟಿವ್‌ ದೃಢಪಟ್ಟಿದೆ. ಕೋವಿಡ್‌ ನಿಯಮದ ಪ್ರಕಾರ ಭಾಲ್ಕಿ ಪಟ್ಟಣದಲ್ಲಿ ವೃದ್ಧನ ಶವ ಸಂಸ್ಕಾರ ನೆರವೇರಿಸಲಾಗಿತ್ತು.

ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 538ಕ್ಕೆ ಏರಿಕೆ ಆಗಿದೆ. ಅದರಲ್ಲಿ 16 ಜನ ಸಾವನ್ನಪ್ಪಿದ್ದರೆ 396 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 126 ಸಕ್ರೀಯ ಪ್ರಕರಣಗಳಿವೆ. ಒಟ್ಟು ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

1237 ಜನರ ವರದಿ ಬಾಕಿ: ಬೀದರ ಜಿಲ್ಲೆಯಲ್ಲಿ ಕೋವಿಡ್‌ ಶಂಕಿತ 1237 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಈವರೆಗೆ 36,482 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 34,707 ಮಂದಿಯದ್ದು ನೆಗೆಟಿವ್‌ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 5309 ಮತ್ತು ದ್ವಿತೀಯ ಸಂಪರ್ಕಿತ 6417 ಜನರನ್ನು ಗುರುತಿಸಲಾಗಿದೆ ಎಂದು ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next