Advertisement

ಮೋದಿ ಚೌಕಿದಾರ ಸರಿಯಾಗಿ ನಿಭಾಯಿಸಿಲ್ಲ

02:56 PM Apr 21, 2019 | Team Udayavani |

ಬೀದರ: ಪ್ರಧಾನಿ ಮೋದಿ ತಾವು ದೇಶದ ಚೌಕಿದಾರ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರು ಚೌಕಿದಾರಿ ಸರಿಯಾಗಿ ನಿಭಾಯಿಸಿಲ್ಲ ಎಂದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸಾಲ ಪಡೆದ ನೀರವ ಮೋದಿ, ಮಲ್ಯ
ಸೇರಿದಂತೆ ಅನೇಕ ದೊಡ್ಡ ಉದ್ಯಮಿಗಳು ದೇಶ ಬಿಟ್ಟು ಹೇಗೆ ಹೋದರು ಎಂದು ಪ್ರಶ್ನಿಸಿದರು. ಫುಲ್ವಾಮ ದಾಳಿ ಸಂದರ್ಭದಲ್ಲಿ 350 ಕೆ.ಜಿ. ಆರ್‌ಡಿಎಸ್‌ ಹೇಗೆ ಬಂತು ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ ಅವರು, ಚೌಕಿದಾರಿ ಸರಿಯಾಗಿ ಮಾಡಿದ್ದರೆ ದೇಶದ 42 ಸೈನಿಕರ ಸಾವು ಸಂಭವಿಸುತ್ತಿರಲಿಲ್ಲ ಎಂದರು.

ಪ್ರತೇಕ ಲಿಂಗಾಯತ ಹೋರಾಟಕ್ಕೂ ಲೋಕಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಹೋರಾಟ ವೈಯಕ್ತಿಕ ವಿಷಯ ಎಂದು
ಸ್ಪಷ್ಟಪಡಿಸಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೂಡ ಪ್ರತ್ಯೇಕ ಲಿಂಗಾಯತ ಹೋರಾಟ ಹಾಗೂ ಚುನಾವಣೆಗೂ ಸಂಬಂಧ ಇರಲಿಲ್ಲ. ಚುನಾವಣೆಗಳು ಜಾತಿ, ಧರ್ಮಗಳ ವಿಷಯದಲ್ಲಿ ನಡೆಯದೆ ಅಭಿವೃದ್ಧಿ ವೈಫಲ್ಯಗಳ ಆಧಾರದಲ್ಲಿ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.

ಅನುಭವ ಮಂಟಪಕ್ಕಿಲ್ಲ ಅನುದಾನ: ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಅನುದಾನ ನೀಡದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಸಚಿವ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪೂರ್‌, ಶಾಸಕ ಬಿ.ನಾರಾಯಣರಾವ್‌, ಈಶ್ವರ ಖಂಡ್ರೆ ಸೇರಿ ಇತರರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಮನವರಿಕೆ ಮಾಡಲಾಗಿದೆ. ಇದೀಗ ನೀತಿ ಸಂಹಿತೆ ಇರುವುದರಿಂದ ಯಾವುದೇ ಭರವಸೆ ನೀಡುವುದು ಸೂಕ್ತ ಅಲ್ಲ. ಮುಂದಿನ ದಿನಗಳಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.

ಈಡೇರದ ಭರವಸೆ: ಕಳೆದ ಚುನಾವಣೆಯಲ್ಲಿ ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ
ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ವಿದೇಶದಲ್ಲಿನ ಕಪ್ಪು ಹಣ ತರುವುದಾಗಿ ಹೇಳಿದ್ದು ಏನಾಯಿತು, ಜನರಿಗೆ 15 ಲಕ್ಷ ಹಣ ನೀಡುವುದಾಗಿ ಕನಸು ತೋರಿಸಿದ್ದು ಏನಾಯಿತು? 15 ಲಕ್ಷ ಹಣ ಖಾತೆಗೆ ಬಂದರೆ ವಿದೇಶ ಪ್ರಯಾಣ ಮಾಡುವ ಆಸೆ ನಾನೂ ಹೊಂದಿದ್ದೆ. ಆದರೆ, ಅದನ್ನು ಈಡೇರಿಸದೇ ಜನರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.

Advertisement

ಎಲ್ಲಾ ಕಡೆಗಳಲ್ಲಿ ಮೋದಿಗೆ ನೋಡಿ ಮತ ನೀಡಿ, ದೇಶಕ್ಕಾಗಿ ಮತ ನೀಡಿ ಎಂದು ಬಿಜೆಪಿಯವರು ಮತಯಾಚನೆ ಮಾಡುತ್ತಿದ್ದಾರೆ. ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಮತಯಾಚನೆ
ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ
ಚುನಾವಣೆಯಲ್ಲಿ ಮತದಾರರು ಜಾಗೃತರಾಗಿದ್ದಾರೆ.

ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಭರವಸೆ
ಇದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ
ಖಾಶೆಂಪೂರ್‌, ಸಚಿವರಾದ ರಾಜಶೇಖರ ಪಾಟೀಲ,
ರಹೀಮ್‌ ಖಾನ್‌ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next