Advertisement

ಬೀದರ: 6 ಜನ ಪಂಚಾಯತ್‌ ಸದಸ್ಯರ ಸದಸ್ಯತ್ವ ರದ್ದು

09:23 AM Sep 04, 2019 | mahesh |

ಬೀದರ: ಗ್ರಾಮ ಪಂಚಾಯತ್‌ಯಲ್ಲಿ ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಮೇರೆಗೆ ತಾಲೂಕಿನ ಕಪಲಾಪೂರ್(ಎ) ಪಂಚಾಯತ್‌ನ 6 ಜನ ಸದಸ್ಯರ ಸದಸ್ಯತ್ವವನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪನಿರ್ದೇಶಕ ಡಿ.ಜಿ ನಾರಾಯಣ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

Advertisement

ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಕಲಾ ದೇವಿದಾಸ್, ಸಂಜೀವಕುಮಾರ್ ಅಮೃತಪ್ಪ, ಆನಂದ ಚಂದ್ರಪ್ಪಾ, ಶಾಂತಕುಮಾರ್ ಶಿವರಾಜ್ ಖೆಮಶೆಟ್ಟಿ, ಮೇರಮ್ಮಾ ಈರಣ್ಣಾ, ಸುಜೀಕುಮಾರ್ ಶಿವರಾಜ್ ತಳಗಟ್ಟಿ ಅವರುಗಳ ಸದಸ್ಯತ್ವ ರದ್ದುಗೊಳಿಸಿ ಪಂಚಾಯತ್ ರಾಜ್ ಇಲಾಖೆ ಉಪನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯತ್‌ನ 13ನೇ ಹಣಕಾಸು ಯೋಜನೆ ಅಡಿಯಲ್ಲಿ ನೀರು ಸರಬರಾಜು ಯೋಜನೆಯಡಿಯಲ್ಲಿ ಸದಸ್ಯರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಚೆಕ್ ಪಡೆದು ದುರುಪಯೋಗ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧೀನಿಯಮ 1993ರ ಪ್ರಕಾರ 43(ಎ) ಮತ್ತು 48(4)ರಡಿಯಲ್ಲಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗ್ರಾಮದ ಹಣಮಂತ್ ಬಸವರಾಜ ಎಂಬುವವರು ಕಪಲಾಪುರ ಗ್ರಾಮ ಪಮಚಾಯತನ ಸದಸ್ಯರು ಹಣ ದುರುಪಯೋಗದಲ್ಲಿ ತೊಡಗಿದ್ದಾರೆ ಎಂದು ದೂರು ನೀಡಿದ್ದರು. ದೂರಿನ ಮೇರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದರು.

ಅಲ್ಲದೆ, ಈ ಪ್ರಕರಣವನ್ನು ಕಲಬುರ್ಗಿ ಪ್ರಾದೇಶಿಕ ಆಯುಕ್ತರು ವಿಚಾರಣೆ ನಡೆಸಿವಾದ ಮತ್ತು ಪ್ರತಿವಾದಗಳನ್ನು ಆಲಿಸಿ ಲಿಖಿತ ಹೇಳಿಕೆ ಕೂಡ ಪಡೆಕೊಂಡು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದರು.

Advertisement

ಸರ್ಕಾರವು ಸದರಿ 6 ಜನ ಸದಸ್ಯರು ಸೇರಿದಂತೆ ಒಟ್ಟು 10 ಜನ ಸದಸ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ಸರ್ಕಾರದ ಮಟ್ಟದಲ್ಲಿ ನಡೆದ ವಿಚಾರಣೆಯಲ್ಲಿ ಹಾಲಿ ಅಧ್ಯಕ್ಷೆ ಪ್ರಭಾವತಿ ಕಾಶಿನಾಥ್, ರುಕ್ಮಿಣಿ ವಿಜಯಕುಮಾರ್ ಧನ್ನೂರ್, ಜೈಶ್ರಿ ಸಿದ್ರಾಮ ಹಾಗೂ ಅಮೃತಪ್ಪ ವೈಜಿನಾಥ್ ಅವರ ಮೇಲಿನ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಇವರನ್ನು ಆರೋಪ ಮುಕ್ತರನ್ನಾಗಿ ಮಾಡಿ ಆದೇಶಿಸಲಾಗಿದೆ. ಸದ್ಯ ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು 6 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next