Advertisement
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಬಿದನಗೆರೆ ಎಂದರೆ ಅದು ಐತಿಹಾಸಿಕ ಶ್ರೀ ಸತ್ಯಶನೇಶ್ಚರಸ್ವಾಮಿ ದೇವಾಲಯವಿರುವ ಪುಣ್ಯ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಇದರ ಜೊತೆಗೆ ಉದ್ಬವ ಬಸವ, ಪಂಚಮುಖೀ ಆಂಜನೇಯಸ್ವಾಮಿಯ ದೇಗುಲಗಳೂ ಇಲ್ಲಿವೆ. ಅರಸಿ ಬಂದ ಭಕ್ತರ ಕಷ್ಟನಿವಾರಣೆ ಇಲ್ಲಿ ಸಾಧ್ಯ ಎನ್ನುವ ನಂಬಿಕೆ ಎಲ್ಲೆಡೆ ಹರಡಿರುವುದರಿಂದ ಈ ಕ್ಷೇತ್ರದಲ್ಲಿ ನಿತ್ಯ ಜನಸಾಗರ.
ಸುಮಾರು 200 ವರ್ಷಗಳ ಹಿಂದೆ ಬಿದನಗೆರೆಯ ಕುರುಬರಹಟ್ಟಿ ಗ್ರಾಮದ ಬಸವಣ್ಣನ ಕಟ್ಟೆಯಲ್ಲಿ ಉದ್ಬವ ಬಸವಣ್ಣನನ್ನು ಗ್ರಾಮದ ಜನರು ಪ್ರತಿಷ್ಠಾಪಿಸಿ, ಆರಾಧ್ಯ ದೆ„ವವಾಗಿ ಪೂಜಿಸುತ್ತಿದ್ದರಂತೆ. ಈ ಬಸವಣ್ಣನ ಮೂರ್ತಿ ಚಾಲುಕ್ಯರ ಶೆ„ಲಿಯ ಕೆತ್ತನೆ ರೂಪದಲ್ಲಿ ಇತ್ತು. ಹೀಗಿರುವಾಗಲೇ ಅದೊಮ್ಮೆ ಭೀಕರ ಬರಗಾಲ ಎದುರಾಯಿತು. ಪರಿಣಾಮ, ಜನರು ತಮ್ಮ ಗ್ರಾಮವನ್ನು ತೊರೆದು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಯಿತು. ಊರು ಬರಿದಾದ ಮೇಲೆ, ಆದರೆ ಪ್ರಾಕೃತಿಕ ಹೊಡೆತಕ್ಕೆ ಸಿಲುಕಿದ ಬಸವಣ್ಣನ ಮೂರ್ತಿ ಮಣ್ಣಿನಲ್ಲಿ ಮುಚ್ಚಿಹೊಯಿತು. ವರ್ಷಗಳು ಉರುಳಿದಂತೆ ಮಳೆಯ ನೀರು ಹರಿದು ಮಣ್ಣು ಕರಗಿ ಬಸವಣ್ಣನ ಮೂರ್ತಿ ಕಾಣಿಸತೊಡಗಿತು. ಇದನ್ನು ಬಿದನಗೆರೆ ಗ್ರಾಮದ ಡಾ.ಧನಂಜಯ್ಯಸ್ವಾಮೀಜಿ ಗಮನಿಸಿ, ಮಣ್ಣಿನಿಂದ ಬಸವಣ್ಣನನ್ನು ಹೊರತೆಗೆದು ಪೂಜಿಸಲು ಶುರುಮಾಡಿದರು. ಜೊತೆಗೆ ಶ್ರೀ ಸತ್ಯ ಶನೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿ ಅಲ್ಲೊಂದು ದೇವಾಲಯವನ್ನು ನಿರ್ಮಿಸಿದರು ಎನ್ನುತ್ತದೆ ಇತಿಹಾಸ.
Related Articles
Advertisement
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ದೇವಾಲಯದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿದೆ. ಈಗ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಸಹಾಸ್ರರು ಭಕ್ತರ ಅರಾಧ್ಯ ದೆ„ವವಾಗಿದೆ.
ಜಾತಿ, ಭಾಷೆ, ವರ್ಗ ಎನ್ನದೆ ಮದುವೆಯಾಗಲು ಇಚ್ಛಿಸುವ ವಧುವರರಿಗೆ ಶ್ರೀ ಕ್ಷೇತ್ರದಲ್ಲಿ ಸರಳ ವಿವಾಹ ನಡೆಯುತ್ತದೆ. ಆಡಳಿತ ಮಂಡಳಿಯಿಂದ ವಧು ಹಾಗೂ ವರನಿಗೆ ಮಾಂಗಲ್ಯ, ಕಾಲುಂಗರ, ವಸ್ತ್ರಗಳನ್ನು ಉಚಿತವಾಗಿ ನೀಡುತ್ತಾರೆ. ಈಗಾಗಲೇ 169 ಹೆಚ್ಚು ಜೋಡಿಗಳು ಇಲ್ಲಿ ಸಪ್ತಪದಿ ತುಳಿದಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಶ್ರೀ ಕ್ಷೇತ್ರದಲ್ಲಿ ನುರಿತ ತಜ್ಞ ವೈದ್ಯರಿಂದ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೀಗೆ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳೂ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ದೇವಾಲಯವು ತುಮಕೂರು ಜಿಲ್ಲಾ ಕೇಂದ್ರದಿಂದ 38 ಕಿ.ಮೀ ಹಾಗೂ ಕುಣಿಗಲ್ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಇದೆ. ಬಿದನಗೆರೆ ತಲುಪಲು ಕುಣಿಗಲ್‌ನಿಂದ ಸಾಕಷ್ಟು ಬಸ್ ಹಾಗೂ ಆಟೋಗಳ ವ್ಯವಸ್ಥೆ ಇರುತ್ತದೆ.
ಲೋಕೇಶ್