Advertisement

ಬಿದ್ಕಲ್‌ಕಟ್ಟೆ : ಶಿಥಿಲಗೊಂಡ ಮೀನು ಮಾರುಕಟ್ಟೆ

09:37 PM Nov 02, 2020 | mahesh |

ತೆಕ್ಕಟ್ಟೆ: ಇಲ್ಲಿನ ಹಾರ್ದಳ್ಳಿ- ಮಂಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ ಪ್ರಮುಖ ಭಾಗದಲ್ಲಿರುವ ಮೀನು ಮಾರುಕಟ್ಟೆಯ ಕಟ್ಟಡ ಶಿಥಿಲಗೊಂಡಿದ್ದು, ಮೀನು ಮಾರಾಟಕ್ಕೆ ಅಡಚಣೆ ಉಂಟಾಗಿದೆ.

Advertisement

ದಶಕಗಳ ಹಿಂದೆ ನಿರ್ಮಾಣಗೊಂಡಿ ರುವ ಈ ಮೀನು ಮಾರುಕಟ್ಟೆ ಕಟ್ಟಡದ ಸೂರು ಹಾನಿಗೊಳಗಾಗಿದೆ. ಗ್ರಾಮೀಣ ಭಾಗದ ಮೊಳಹಳ್ಳಿ, ಗಾವಳಿ, ಜನ್ನಾಡಿ, ಗುಡ್ಡೆ ಅಂಗಡಿಯ ಜನರು ಇಲ್ಲಿಗೆ ಬರುತ್ತಿದ್ದರೂ ಕಟ್ಟಡದ ಸ್ಥಿತಿ ಮಾತ್ರ ಸುಧಾರಣೆ ಕಂಡಿಲ್ಲ. ಸದ್ಯಕ್ಕೆ ಛಾವಣಿಗೆ ಟಾರ್ಪಾಲು
ಗ್ರಾಮ ಪಂಚಾಯತ್‌ ಕಚೇರಿಯ ಅನತಿ ದೂರದಲ್ಲೇ ಈ ಕಟ್ಟಡ ಇದೆ. ವರ್ಷಗಳು ಉರುಳಿದರೂ ಇದು ದುರಸ್ತಿ ಕಂಡಿಲ್ಲ. ಸದ್ಯ ಛಾವಣಿಗೆ ಟಾರ್ಪಾಲು ಹಾಕಲಾಗಿದೆ. ಅದೂ ಹರಿದು ಹೋಗಿದೆ. ಮಳೆ ಬರುವ ವೇಳೆ ನೀರು ಸೋರುತ್ತದೆ.

ಹಲವು ವರ್ಷಗಳಿಂದ ಮೀನು ಮಾರುಕಟ್ಟೆ ನಿರ್ವಹಣೆ ಇಲ್ಲದೆ ಸೊರಗಿದೆ. ಬಿದ್ಕಲ್‌ಕಟ್ಟೆ ಗ್ರಾಮಕ್ಕೆ ಸುವ್ಯವಸ್ಥಿತ ಮೀನು ಮಾರುಕಟ್ಟೆ ಅನಿವಾರ್ಯವಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮಹಿಳೆಯರು ಸ್ವೋದ್ಯೋಗ ಸೃಷ್ಟಿ
ಯಾಗಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರಾದ ಚಂದ್ರಶೇಖರ್‌ ಅವರು ಹೇಳುತ್ತಾರೆ.

ಪ್ರಸ್ತಾವ ಬಂದಿಲ್ಲ
ಈ ಮಾರುಕಟ್ಟೆ ನವೀಕರಣದ ಬಗ್ಗೆ ಈ ವರೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ . ಈಗಾಗಲೇ ರಸ್ತೆ ವಿಸ್ತರಣೆ ನಿಯಮದಂತೆ ಹಳೆ ಮೀನುಗಾರಿಕೆ ಕಟ್ಟಡ ತೆರವುಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಬಂದಾಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ರೇಖಾ, ಪಿಡಿಒ, ಗ್ರಾ.ಪಂ.ಹಾರ್ದಳ್ಳಿ -ಮಂಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next