ಎಚ್.ಡಿ.ಕೋಟೆ: ಕಳೆದ 3-4ದಿನಗಳ ಹಿಂದೆಯಷ್ಟೇ ಕೊಟ್ಟಿಗೆಯಲ್ಲಿ ಕಟ್ಟಿದ್ದ12ರಾಸುಗಳನ್ನು ಕಳ್ಳರು ಕದ್ದೊಯ್ದರೂ ಇತರೆ ಮಾಲಿಕರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ರಾಸುಗಳು ತಿರುಗುತ್ತಿದ್ದು ನಿತ್ಯ ಸವಾರರಿಗೆ ಕಂಟಕವಾಗಿವೆ.
ಪಟ್ಟಣದ ಸಾರ್ವಜನಿಕ ರಸ್ತೆಗಳು ಅದರಲ್ಲೂ ವಿಶೇಷವಾಗಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ, ಸಂತೆ ಮೈದಾನ, ಹಳೆಯ ಆಸ್ಪತ್ರೆ ಆವರಣ, ಹೌಸಿಂಗ್ ಬೋರ್ಡ್ ಮೊದಲಾದದ ಕಡೆಎಲ್ಲೆಂದರಲ್ಲಿ ಹಗಲು-ಇರುಳೆನ್ನದೆ ಬಿಡಾಡಿ ರಾಸುಗಳು ಸಂಚರಿಸುತ್ತಿವೆ.
ಕಳೆದ 3-4ದಿನಗಳ ಹಿಂದಷ್ಟೇ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 5ಕಿ.ಮೀ.ಅಂತರದಎಚ್.ಮಟಕೆರೆ ಗ್ರಾಮದ ಅಯ್ಯಂಗಾರ್ ಎಂಬವರ ಮನೆ ಕೊಟ್ಟಿಗೆಯಲ್ಲಿ ಕಟ್ಟಿದ್ದ 12ರಾಸುಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದು ಸಾಗಿಸಿದ್ದರು. ಈ ಕುರಿತು ಎಚ್.ಡಿ.ಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇಷ್ಟಾದರೂ ಎಚ್ಚೆತ್ತುಕೊಳ್ಳದ ಮಾಲಿಕರು, ರಾಸುಗಳನ್ನು ನಗರದಲ್ಲಿ ಸಂಚರಿಸಲು ಬಿಟ್ಟಿದ್ದಾರೆ.ಇಡೀ ದಿನ ಅಲೆದಾಡಿ ಹೊಟ್ಟೆ ತುಂಬಿಸಿಕೊಂಡು ಕತ್ತಲಾಗುತ್ತಿದ್ದಂತೆಯೇ ರಸ್ತೆ ಬದಿ ರಾತ್ರಿಕಳೆಯುತ್ತಿವೆ. ಇದರಿಂದ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನು ಬಿಡಾಡಿ ರಾಸುಗಳ ಪೈಕಿ ಹಲವು ಗೂಳಿಗಳೂ ಬೀದಿಗಳಲ್ಲೇ ದಿನ ಕಳೆಯುತ್ತಿದ್ದು ಪಾದಚಾರಿಗಳಲ್ಲಿ ಭಯ ಹುಟ್ಟಿಸಿವೆ.
ಎಚ್ಚೆತ್ತುಕೊಳ್ಳಿ: ಹಲವು ತಿಂಗಳ ಹಿಂದೆ ಬಿಡಾಡಿ ರಾಸುಗಳು ಸಂತೆ ಮೈದಾನದಲ್ಲಿ ಮಲಗಿದ್ದಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಕ್ಕೆಸಿಲುಕಿ ಸ್ಥಳದಲ್ಲಿಯೇ 4-5 ರಾಸುಮೃತಪಟ್ಟಿದ್ದವು. ರಾಸು ಕಳುವಾದ ಮೇಲೆ ಮತ್ತು ಏನಾದರೂ ಅವಘಡ ಸಂಭವಿಸಿ ಮೃತಪಟ್ಟಮೇಲೆ ರಾಸುಗಳಿಗೆ ಪರಿಹಾರ ನೀಡುವಂತೆಮತ್ತು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡುವ ಮಾಲಿಕರು ಮೊದಲೇ ಎಚ್ಚೆತ್ತುಕೊಂಡು ಅವರವರ ರಾಸುಗಳ ರಕ್ಷಣೆಗೆ ಮುಂದಾಗದಿರುವುದು ವಿಪರ್ಯಾಸ.
ಮಾಲಿಕರು ರಾಸುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಕಳುವಾದ ಬಳಿಕಅಥವಾ ಅವಘಡ ಸಂಭವಿಸಿದ ನಂತರದೂರು ನೀಡುವ ಮುನ್ನ ಜಾಗ್ರತೆವಹಿಸಬೇಕು. ಜಾನುವಾರುಗಳನ್ನು ರಸ್ತೆಗೆ ಬಿಡದೇ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
– ಬಸವರಾಜು, ಸರ್ಕಲ್ ಇನ್ಸ್‌ಪೆಕ್ಟರ್
ಪಟ್ಟಣದ ಮುಖ್ಯರಸ್ತೆಗಳಲ್ಲೇ ಬಿಡಾಡಿ ದನಗಳು ಸಂಚರಿಸುತ್ತಿವೆ. ರಾತ್ರಿಯಿಡೀ ರಸ್ತೆಗಳಲ್ಲಿ ಜಾನುವಾರುಗಳು ನಿಲ್ಲುವುದರಿಂದ ಸಂಚರಿಸುವ ಸವಾರರಿಗೆತೊಂದರೆ ಆಗಲಿದೆ. ಕೂಡಲೇ ಮಾಲಿಕರು, ಜಾನುವಾರುಗಳನ್ನು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು.
– ಪ್ರದೀಪ್, ಸ್ಥಳೀಯ
-ಎಚ್.ಬಿ.ಬಸವರಾಜು