Advertisement
ಅಂದಹಾಗೆ, ಗುರುಕಿರಣ್ ಹೀಗೆ ಬರೆದುಕೊಳ್ಳಲು ಬಲವಾದ ಕಾರಣವೂ ಇದೆ. ಏಕೆಂದರೆ, ಉಪೇಂದ್ರ ಮತ್ತು ಗುರುಕಿರಣ್ ಇಬ್ಬರೂ ಸಾಕಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಬಂದವರು.ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಸಾಕಷ್ಟು ಶ್ರಮಿಸುವುದಕ್ಕೆ, ಹೋರಾಟ ಮಾಡುವುದಕ್ಕೆ ಗಾಂಧಿನಗರದ ವಾಡಿಕೆಯಲ್ಲಿ ಸೈಕಲ್ ಹೊಡೆಯುವುದು ಎನ್ನಲಾಗುತ್ತದೆ. ಹೀಗೆ
ಗಾಂಧಿನಗರದಲ್ಲಿ ಇಬ್ಬರೂ ಸಾಕಷ್ಟು ಸೈಕಲ್ ಹೊಡೆದು, ಕಷ್ಟಪಟ್ಟು , ಸಕ್ಸಸ್ ಕಂಡು ಇದೀಗ ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ. “ಎ’ ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ
ಇಬ್ಬರೂ ಕೆಲಸ ಮಾಡಿದ್ದರು. ಇನ್ನು ಗುರುಕಿರಣ್ ಸಂಗೀತ ನಿರ್ದೇಶಕರಾಗುವ ಮುನ್ನ ಹಲವು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅವರ
ಸಂಗೀತಾಸಕ್ತಿ ಮತ್ತು ಪ್ರತಿಭೆ ನೋಡಿದ್ದ ನಟ ಕಂ ನಿರ್ದೇಶಕ ಉಪೇಂದ್ರ ಅವರನ್ನು “ಎ’ ಚಿತ್ರಕ್ಕೆ ಸಂಗೀತ ನಿರ್ದೇಶಕನನ್ನಾಗಿ ಆಯ್ಕೆ ಮಾಡುತ್ತಾರೆ. ಬಳಿಕ ಈ ಜೋಡಿ
ಮಾಡಿದ ಕಮಾಲ್ ಇಡೀ ಚಿತ್ರರಂಗಕ್ಕೆ ಗೊತ್ತೇ ಇದೆ. ಹೀಗೆ ಚಿತ್ರರಂಗದಲ್ಲಿ ಒಂದು ಗಟ್ಟಿಸ್ಥಾನ ಪಡೆಯುವುದಕ್ಕೆ ಉಪೇಂದ್ರ ಮತ್ತು ಗುರುಕಿರಣ್ ಸಾಕಷ್ಟು ಸೈಕಲ್ ಹೊಡೆದಿದ್ದು, ಈಗಲೂ ಇಬ್ಬರೂ ಮರೆತಿಲ್ಲ.