ಹೋಟೆಲ್‌ಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ವಿನ್ಯಾಸಗೊಳಿಸಿರುವುದನ್ನು ನೀವು ನೋಡಿರಬಹುದು. ಆಧುನಿಕ ಇಂಟೀರಿಯರ್ ಡಿಸೈನ್‌ಗಳನ್ನು ಹೊಂದಿರುವ ಐಷಾರಾಮಿ ರೆಸ್ಟೋರೆಂಟುಗಳ ನಡುವೆ ಸಿಕ್ಲೋ ಕೆಫೆ ವಿಭಿನ್ನವಾಗಿ ತೋರುತ್ತದೆ. ಏಕೆಂದರೆ ಇಲ್ಲಿನ ಒಳಾಂಗಣ ಸೈಕಲ್‌ಪ್ರಿಯರಿಗೆ ಹೇಳಿ ಮಾಡಿಸಿದ ಹಾಗಿದೆ. ಇಲ್ಲಿನ ಗೋಡೆಗಳ ಮೇಲೆ ಸೈಕಲ್ ಬಿಡಿಭಾಗಗಳು, ಚಕ್ರ ಮುಂತಾದ ಸ್ಪೇರ್ ಪಾರ್ಟುಗಳೇ ಇವೆ.
ಹಾಗೆಂದು ಈ ಹೋಟೆಲ್‌ನಲ್ಲಿ ಸೈಕಲ್ ಬಿಡಿಭಾಗಗಳು ಮಾತ್ರ ಸಿಗುತ್ತವೆ ಎಂದುಕೊಳ್ಳದಿರಿ. ಖಾದ್ಯಗಳಿಗೂ ಈ ಕೆಫೆ ಹೆಸರುವಾಸಿ. ವಾರಾಂತ್ಯದಂದು ಇಲ್ಲಿಗೆ ಭೇಟಿ ನೀಡಿದರೆ ನಗರದ ಸೈಕಲ್‌ಪಟುಗಳು ತಮ್ಮ ಸೈಕಲ್ ಗ್ಯಾಂಗ್‌ಗಳ ಜೊತೆಗೂಡಿ ಇಲ್ಲಿ ಹರಟೆ, ಚರ್ಚೆಯಲ್ಲಿ ತೊಡಗಿರುವುದನ್ನು ನೋಡಬಹುದು.
ಇಂಡಿಯನ್, ಚೈನೀಸ್, ಯುರೋಪಿಯನ್, ಅಮೆರಿಕನ್, ಸ್ಪ್ಯಾನಿಶ್ ಮುಂತಾದ ಅನೇಕ ಶೈಲಿಯ ಸಸ್ಯಾಹಾರಿ- ಮಾಂಸಾಹಾರಿ ಆಹಾರವನ್ನು ರುಚಿಕಟ್ಟಾಗಿ ತಯಾರಿಸುತ್ತಾರೆ. ಕೆಫೆ ಇರುವ ಕಟ್ಟಡದಲ್ಲಿಯೇ ಸೈಕಲ್ ಮಾರಾಟ ಮಳಿಗೆಯೂ ಇದ್ದು ಸೈಕ್ಲಿಂಗ್‌ಗೆ ಸಂಬಂಧಿಸಿದ ಸಾಮಗ್ರಿಯನ್ನು ಇಲ್ಲಿಂದ ಖರೀದಿಸಬಹುದು.
ಎಲ್ಲಿ?: ನಂ.948, 12ನೇ ಮುಖ್ಯರಸ್ತೆ, ಎಚ್.ಎ.ಎಲ್ 2ನೇ ಹಂತ, ಇಂದಿರಾನಗರ
ಉತ್ತಮ ಆರೋಗ್ಯ ಹೊಂದಬೇಕಾದರೆ ಸೈಕ್ಲಿಂಗ್ ಅಭ್ಯಾಸ ಮಾಡಬೇಕು. ನಮ್ಮ ಕೆಫೆಗೆ ಬರುವ ಗ್ರಾಹಕರಿಗೆ ಸೈಕ್ಲಿಂಗ್ ಬಗ್ಗೆ ಅರಿವು ಮೂಡಿಸಲು ಹೋಟೆಲನ್ನು ಸೈಕಲ್‌ನ ಬಿಡಿಭಾಗಗಳಿಂದ ಅಲಂಕರಿಸಿದ್ದೇನೆ.
-ಅಶೀಶ್ ತಡಾನೀ, ಕೆಫೆ ಮಾಲೀಕ
* ಭರತ್