Advertisement
ಕೈಗಾರಿಕಾ ಪ್ರದೇಶದಿಂದ ಹೊರ ಬರುವ ನೂರಾರು ಲಾರಿಗಳು ಈ ಹೊಂಡ ಗುಂಡಿಯಲ್ಲಿ ಚಲಿಸಿ ಮೇಲೆ ಬರಲು ಸಾಧ್ಯವಾಗದೆ ಕೆಟ್ಟು ನಿಲ್ಲುತ್ತಿವೆ. ಕೂಳೂರಿನಿಂದ ಬರುವ ಬೃಹತ್ ಕಂಟೈನರ್ಗಳು, ಲಾರಿಗಳು ಬೈಕಂಪಾಡಿ ಜಂಕ್ಷನ್ನಲ್ಲೇ ತಿರುವು ಪಡೆಯುತ್ತಿದ್ದು, ಈ ಹೊಂಡಕ್ಕೆ ಬಿದ್ದ ವಾಹನಗಳು ಮೇಲೇಳದೆ ಟ್ರಾಫಿಕ್ ಜಾಮ್ಗೂ ಕಾರಣವಾಗುತ್ತಿದೆ.
Related Articles
Advertisement
ಬೈಕಂಪಾಡಿ ಜಂಕ್ಷನ್, ಪಣಂಬೂರು ರಿಲಯನ್ಸ್ ಪೆಟ್ರೋಲ್ ಬಂಕ್ ಮುಂಭಾಗ, ಎನ್ಎಂಪಿಟಿ ಮಲ್ಯ ಗೇಟ್, ಎನ್ಎಂಪಿಟಿ ಸರ್ವಿಸ್ ರಸ್ತೆಗಳು ದ್ವಿಚಕ್ರ ಸವಾರರಿಗೆ ಹಾಗೂ ಸಣ್ಣ ವಾಹನಗಳಿಗೆ ಅಪಾಯವನ್ನು ಒಡ್ಡುತ್ತಿರುವ ಪ್ರಮುಖ ಸ್ಥಳಗಳು. ಇದನ್ನು ತತ್ಕ್ಷಣ ದುರಸ್ತಿ ಪಡಿಸಿ ಹೆದ್ದಾರಿ ಸಂಚಾರದಲ್ಲಿ ಪ್ರಾಣ ಭೀತಿಯನ್ನು ಇಲಾಖೆಯ ಅಧಿಕಾರಿಗಳು ನಿವಾರಿಸಬೇಕಿದೆ.