Advertisement

ಭೋವಿ ಜನರು ಕಾಯಕಜೀವಿಗಳು

10:48 AM Feb 04, 2019 | |

ಮಸ್ಕಿ: ಭೋವಿ (ವಡ್ಡರ) ಸಮಾಜದವರು ಹಿಂದಿನಿಂದಲೂ ಕಷ್ಟಪಟ್ಟು ದುಡಿದು ಬದುಕುತ್ತಿದ್ದು, ಕಾಯಕ ಜೀವಿಗಳಾಗಿದ್ದಾರೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

Advertisement

ಭೋವಿ ಸಮಾಜದಿಂದ ಪಟ್ಟಣದ ಭ್ರಮರಾಂಬದೇವಿ ದೇವಸ್ಥಾನದ ಆವರಣದ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 847ನೇ ಜಯಂತಿ ಹಾಗೂ 17ನೇ ವಾರ್ಷಿಕೋತ್ಸವ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ಬದುಕಿನಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ಇದೆ. ಸಮಾಜದವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಹಿಂದುಳಿದಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಶಿವಯೋಗಿ ಸಿದ್ಧರಾಮೇಶ್ವರರು ಪವಾಡ ಪುರುಷರಾಗಿದ್ದು, ಅನೇಕ ವಚನಗಳನ್ನು ರಚಿಸಿದ್ದಾರೆ. ಅವರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಭೋವಿ ಸಮಾಜದ ಹೆಸರಿನಲ್ಲಿ ಕೆಲ ಅನ್ಯಜಾತಿಯವರು ಸುಳ್ಳು ದಾಖಲಾತಿಗಳನ್ನು ನೀಡಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಖಂಡನೀಯ. ಇದರ ವಿರುದ್ಧ ಸಮಾಜ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಮಾತನಾಡಿ, ಭೋವಿ ಸಮಾಜ ಗುಡ್ಡಗಾಡು ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಿದ್ದು ನಿಜವಾಗಿಯೂ ಕಷ್ಟಪಟ್ಟು ಬದುಕುವ ಸಮಾಜವಾಗಿದೆ. ಸಮಾಜದ ಪ್ರಗತಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸುವುದಾಗಿ ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಮಾತನಾಡಿ, ಇಂದಿನ ದಿನಮಾನದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಸಬಲರಾದಾಗ ಮಾತ್ರ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಭೋವಿ ಸಮಾಜದವರು ಮಕ್ಕಳ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಶಾಸಕ ಪ್ರತಾಪಗೌಡ ಪಾಟೀಲ, ಒಸಿಸಿಐ ರಾಜ್ಯ ಕಾರ್ಯದರ್ಶಿ ಅಶೋಕ ಲಿಂಬಾವಳಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ, ಇರಕಲ್‌ ಬಸವಯೋಗ ಮಂಟಪದ ಬಸವಪ್ರಸಾದ ಶ್ರೀಗಳು ಮಾತನಾಡಿದರು.

ಮುಖಂಡರಾದ ಕೆ. ವೀರನಗೌಡ, ಮಹಾದೇವಪ್ಪಗೌಡ, ಬಸನಗೌಡ ತುರ್ವಿಹಾಳ, ಶಿವಶಂಕರಪ್ಪ ಹಳ್ಳಿ, ಅಂದಾನೆಪ್ಪ ಗುಂಡಳ್ಳಿ, ಜಿಪಂ ಸದಸ್ಯೆ ರೇಣುಕಮ್ಮ, ಭೋವಿ ಸಮಾಜ ತಾಲೂಕು ಅಧ್ಯಕ್ಷ ದುರಗಪ್ಪ ಚಿಗರಿ, ಮಲ್ಲಯ್ಯ ಗುಡಸಲಿ, ಸಾರಪ್ಪ ಬಂಗಾಲಿ, ಮಲ್ಲಯ್ಯ ನಾಗರಾಳ, ರವಿ ಚಿಗರಿ, ತಿಮ್ಮಣ್ಣ ಗುಡಸಲಿ, ರಂಗಪ್ಪ ಅರಕೇರಿ, ದುರಗಪ್ಪ, ಶೇಖರಪ್ಪ ಬೆಳಗಲ್ಲ ಸೇರಿ ಭೋವಿ ಸಮಾಜದ ನೂರಾರು ಜನ ಭಾಗವಹಿಸಿದ್ದರು.

ಅದ್ಧೂರಿ ಮೆರವಣಿಗೆ: ಜಯಂತ್ಯುತ್ಸವ ನಿಮಿತ್ತ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಇರಕಲ್‌ ಬಸವಯೋಗ ಮಂಟಪದ ಬಸವಪ್ರಸಾದ ಶ್ರೀಗಳು ಮತ್ತು ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ನೂರಾರು ಸುಮಂಗಲೆಯರು ಕಳಶ, ಕನ್ನಡಿಯೊಂದಿಗೆ ಮತ್ತು ಗೊಂಬೆ ಕುಣಿತ, ನಂದಿಕೋಲು, ವಿವಿಧ ವಾದ್ಯಮೇಳದವರು ಭಾಗವಹಿಸಿದ್ದರು.

ಮೆರವಣೆಗೆಗೆ ಜಿಪಂ ಮಾಜಿ ಸದಸ್ಯ ಕೆ. ವೀರನಗೌಡ ಚಾಲನೆ ನೀಡಿದರು. ಸಮಾಜದ ಅಧ್ಯಕ್ಷ ದುರಗಪ್ಪ ಚಿಗರಿ, ಮಲ್ಲಯ್ಯ ಗುಡಿಸಲಿ, ವೀರೇಶ ಆನೆಹೊಸೂರು, ಶೇಖರಪ್ಪ ಬೆಳಗಲ್‌, ಆನಂದ ಬನಗಲ್‌, ರಮೇಶ ಮ್ಯಾಗೇರಿ ಇತರರು ಪಾಲ್ಗೊಂಡಿದ್ದರು.

ವಿಶೇಷ ಪೂಜೆ: ಜಯಂತ್ಯುತ್ಸವ ನಿಮಿತ್ತ ಸಿದ್ದರಾಮೇಶ್ವರ ದೇವಾಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next