Advertisement

ಬಂಗಾಳಿ ನಟಿ ಅನುಸ್ಮತಿ ಜತೆ ಭುವಿ ಡೇಟಿಂಗ್‌?

07:00 AM Oct 05, 2017 | |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ವೇಗಿ ಭುವನೇಶ್ವರ್‌ ಕುಮಾರ್‌ ಬೆಂಗಾಳಿ-ತೆಲುಗು ನಟಿ ಅನುಸ್ಮತಿ ಸರ್ಕಾರ್‌ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಗಾಸಿಪ್‌ ಸುದ್ದಿ ಹುಟ್ಟಿಕೊಂಡಿದೆ. ಇದಕ್ಕೆಲ್ಲ ಕಾರಣವಾಗಿದ್ದು, ಭುವನೇಶ್ವರ್‌ ಕುಮಾರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೋ!

Advertisement

ಇದಕ್ಕೂ ಮುನ್ನ ಭುವನೇಶ್ವರ್‌ ಕುಮಾರ್‌ ನಟಿ ಜತೆ ಭೋಜನ ಮಾಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ “ಎದುರಿಗೆ ಯಾರಿದ್ದಾರೆ ಎನ್ನುವ ಬಗ್ಗೆ ಶೀಘ್ರದಲ್ಲಿ ತಿಳಿಸುತ್ತೇನೆ’ ಎಂದು ಬರೆದಿದ್ದರು. ಇದಾಗಿ 5 ತಿಂಗಳ ಅನಂತರ ಭುವಿ ಪೂರ್ಣ ಪ್ರಮಾಣದ ಫೋಟೋವನ್ನು ಹಾಕಿದ್ದಾರೆ. ತನ್ನ ಭುವಿ ಜತೆ ಡಿನ್ನರ್‌ ಮಾಡುತ್ತಿರುವವರು ನಟಿ ಅನುಸ್ಮತಿ ಸರ್ಕಾರ್‌ ಆಗಿದ್ದಾರೆ ಎನ್ನುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next