Advertisement

ಐಪಿಎಲ್ ನಿಂದ ಅಮಿತ್‌ ಮಿಶ್ರಾ ಮತ್ತು ವೇಗಿ ಭುವನೇಶ್ವರ್‌ ಕುಮಾರ್‌ ಔಟ್!

03:21 PM Oct 06, 2020 | keerthan |

ದುಬಾೖ: ಗಾಯದ ಸಮಸ್ಯೆಗೆ ಸಿಲುಕಿರುವ ಹಿರಿಯ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಮತ್ತು ವೇಗಿ ಭುವನೇಶ್ವರ್‌ ಕುಮಾರ್‌ ಅವರು ಐಪಿಎಲ್‌ ಕೂಟದ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಭುವನೇಶ್ವರ್‌ ವರ್ಷಾಂತ್ಯದ ಆಸ್ಟ್ರೇಲಿಯ ಪ್ರವಾಸವನ್ನು ಕಳೆದು ಕೊಳ್ಳುವ ಸಾಧ್ಯತೆಯಿದೆ.

Advertisement

ಕೋಲ್ಕತಾ ತಂಡದೆದುರಿನ ಪಂದ್ಯದ ವೇಳೆ ಫೀಲ್ಡಿಂಗ್‌ ಮಾಡುವಾಗ ಡೆಲ್ಲಿ ಮಿಶ್ರಾ ಅವರ ಉಂಗುರ ಬೆರಳಿಗೆ ತೀವ್ರ ಗಾಯವಾಯಿತು. ಅವರು ಆಡಿದ ಮೂರು ಪಂದ್ಯಗಳಲ್ಲಿ ಮೂರು ವಿಕೆಟ್‌ ಪಡೆದಿದ್ದರು. ಬೆರಳಿಗೆ ಗಾಯ ಮಾಡಿಕೊಂಡ ಮಿಶ್ರಾ ಇನ್ನುಳಿದ ಪಂದ್ಯಗಳಲ್ಲಿ ಆಡದಿರುವುದು ಬೇಸರದ ವಿಷಯವಾಗಿದೆ. ಅವರು ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು ಎಂದು ತಂಡ ವ್ಯವಸ್ಥಾಪಕರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ತಜ್ಞರ ಸಲಹೆ ಪಡೆದು ಗಾಯಕ್ಕೆ ಚಿಕಿತ್ಸೆ ಪಡೆಯಲಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಒಬ್ಬಂಟಿ ಹೋರಾಟ : ರಬಾಡ, ಪಟೇಲ್ ದಾಳಿಗೆ ಬೆದರಿದ RCBಗೆ 59 ರನ್ ಸೋಲು

ಭುವಿಗೂ ಗಾಯ
ಚೆನ್ನೈ ವಿರುದ್ಧದ ಪಂದ್ಯದ ವೇಳೆ ಭುವನೇಶ್ವರ್‌ ತೊಡೆ ಸ್ನಾಯುವಿನ ಗಾಯಕ್ಕೆ ಒಳಗಾದರು. ಅವರಿಗೆ ಆಯ ಗಾಯದ ತೀವ್ರತೆ ಎಷ್ಟೆಂಬುದು ಖಚಿತವಾಗಿಲ್ಲ. ಆದರೆ ಪೂರ್ಣವಾಗಿ ಚೇತರಿಸಿಕೊಳ್ಳಲು 6ರಿಂದ 8 ವಾರ ಬೇಕಾಗಬಹುದೆಂದು ನಂಬಲಾಗಿದೆ. ಹೀಗಾಗಿ ಅವರು ಭಾರತದ ಆಸ್ಟ್ರೇಲಿಯ ಪ್ರವಾಸದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರುತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next