Advertisement

ಚಿತ್ರೀಕರಣ ಮುಗಿಸಿದ ಪೃಥ್ವಿ – ಪ್ರಮೋದ್ ಸಿನಿಮಾ

01:02 PM Jan 10, 2024 | Team Udayavani |

ನಟರಾದ ಪ್ರಮೋದ್‌ ಹಾಗೂ ಪೃಥ್ವಿ ಅಂಬಾರ್‌ ನಾಯಕರಾಗಿ ಅಭಿನಯಿಸುತ್ತಿರುವ “ಭುವನಂ ಗಗನಂ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿತು. ಬೆಂಗಳೂರಿನ ಹೆಸರಘಟ್ಟದಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್‌ನಲ್ಲಿ “ಭುವನಂ ಗಗನಂ’ ಸಿನಿಮಾದ ಅಂತಿಮ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿಕೊಂಡಿತು.

Advertisement

ಇದೇ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಪ್ರಮೋದ್‌ ಮಾತನಾಡಿ, “ಸಿನಿಮಾದಲ್ಲಿ ನನ್ನ ಭಾಗದ ಶೂಟಿಂಗ್‌ ಕಳೆದ ಅಕ್ಟೋಬರ್‌ ತಿಂಗಳಲ್ಲಿಯೇ ಮುಗಿದಿತ್ತು. ಅದ್ಭುತ ಸೆಟ್‌ನಲ್ಲಿ ಇಡೀ ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ನಾನು ಸ್ಟೈಲೀಶ್‌ ಆಗಿ, ಲವ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ಮತ್ತೂಬ್ಬ ನಟ ಪೃಥ್ವಿ ಅಂಬಾರ್‌ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡಲು ಒಬ್ಬ ಸ್ಟ್ರಾಂಗ್‌ ಪ್ರೊಡ್ಯೂಸರ್‌ ಸಿಗುವುದು ಕಷ್ಟ. ಆದರೆ ಈ ಸಿನಿಮಾಕ್ಕೆ ಒಬ್ಬ ಸ್ಟ್ರಾಂಗ್‌ ಪ್ರೊಡ್ನೂಸರ್‌ ಸಿಕ್ಕಿದ್ದಾರೆ. ಸಿನಿಮಾದ ಕಂಟೆಂಟ್‌ ಗೆ ಏನು ಬೇಕೋ ಅದೆಲ್ಲವನ್ನೂ ಮನಸಾರೆ, ತುಂಬಾ ಪ್ರೀತಿಯಿಟ್ಟು ಕೊಟ್ಟಿದ್ದಾರೆ. ಇಲ್ಲಿಯವರೆಗೆ ನಾನು ಕಾಣಿಸಿಕೊಂಡಿರದ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ’ ಎಂದರು.

ಇದನ್ನೂ ಓದಿ:Ballari municipal corporation; ಇಬ್ಬರಿಂದ ನಾಮಪತ್ರ ವಾಪಸ್; ಮೇಯರ್ ಆಗಿ ಶ್ವೇತಾ ಆಯ್ಕೆ

Advertisement

ನಿರ್ದೇಶಕ ಗಿರೀಶ್‌ ಮೂಲಿಮನಿ, ನಿರ್ಮಾಪಕ ಎಂ. ಮುನೇಗೌಡ ಸಿನಿಮಾದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಸುಮಾರು 75 ದಿನಗಳ ಕಾಲ ಮೈಸೂರು, ಹಾವೇರಿ, ಕುದುರೆಮುಖ, ಕಳಸ, ಕನ್ಯಾಕುಮಾರಿ. ಬೆಂಗಳೂರು ಮುಂತಾದ ಕಡೆಗಳಲ್ಲಿ “ಭುವನಂ ಗಗನಂ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.  ಲವ್‌, ರೋಮ್ಯಾನ್ಸ್‌, ಫ್ಯಾಮಿಲಿ ಎಮೋಷನ್‌ ಕಥಾಹಂದರ ಹೊಂದಿರುವ “ಭುವನಂ ಗಗನಂ’ ಸಿನಿಮಾದಲ್ಲಿ ನಾಯಕರಾದ ಪ್ರಮೋದ್‌ ಮತ್ತು ಪೃಥ್ವಿ ಅವರಿಗೆ ರೆಚೆಲ್‌ ಡೇವಿಡ್‌, ಅಶ್ವಥಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ, ಪ್ರಕಾಶ್‌ ತುಮ್ಮಿನಾಡು, ಸಿದ್ಲಿಂಗು ಶ್ರೀರ್ಧ, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್‌ ಶೆಟ್ಟಿ, ಚೇತನ್‌ ದುರ್ಗ ಮುಂತಾ ದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಹಾಡುಗಳಿಗೆ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜಿಸಿದ್ದು, ಉದಯ್‌ ಲೀಲಾ ಛಾಯಾಗ್ರಹಣ, ಸುನೀಲ್‌ ಕಶ್ಯಪ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next