Advertisement

ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ಪ್ರಶಸ್ತಿ

06:20 PM Dec 17, 2021 | Team Udayavani |

ಥಿಂಪು: ಪ್ರಧಾನಿ ನರೇಂದ್ರ ಮೋದಿ ಅವರು ಪಡೆದ “ಅತ್ಯುನ್ನತ ಪ್ರಶಸ್ತಿ’ಗಳ ಸಾಲಿಗೆ ಈಗ ಮತ್ತೂಂದು ವಿದೇಶಿ ಪ್ರಶಸ್ತಿ ಸೇರ್ಪಡೆಯಾಗಿದೆ. ಭೂತನ್‌ ಸರ್ಕಾರವು ತನ್ನ ರಾಷ್ಟ್ರೀಯ ದಿನವಾದ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಆರ್ಡರ್‌ ಆಫ್ ದಿ ಡ್ರಕ್‌ ಗ್ಯಾಲ್ಪೋ ವನ್ನು ಘೋಷಿಸಿದೆ.

Advertisement

ಭೂತಾನ್‌ ಪ್ರಧಾನಿ ಲೋಟೇ ಶೆರಿಂಗ್‌ ಈ ಬಗ್ಗೆ ಪ್ರಕಟಿಸಿದ್ದು, “ಅರ್ಹ ವ್ಯಕ್ತಿಗೆ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದೇವೆ’ ಎಂದಿದ್ದಾರೆ. ಜೊತೆಗೆ, ಎರಡೂ ದೇಶಗಳ ನಡುವಿನ ಸ್ನೇಹ, ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಬೆಂಬಲವನ್ನೂ ಅವರು ಶ್ಲಾ ಸಿದ್ದಾರೆ.

ಈವರೆಗೆ ಸಿಕ್ಕಿರುವ ಪ್ರಶಸ್ತಿಗಳು

  1. ಸೌದಿ ಅರೇಬಿಯಾವು ಮುಸ್ಲಿಮೇತರ ಗಣ್ಯರಿಗೆ ನೀಡುವ ಅತ್ಯುನ್ನತ ನಾಗರಿಕ ಗೌರವ (2016).
  2. ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ(2016)
  3. ವಿದೇಶಿ ಗಣ್ಯರಿಗೆ ಪ್ಯಾಲೆಸ್ತೀನ್‌ ನೀಡುವ ಅತ್ಯುನ್ನತ ಪ್ರಶಸ್ತಿ(2018)
  4. ಯುಎಇ ನೀಡುವ ಆರ್ಡರ್‌ ಆಫ್ ಝಯೇದ್‌ ಪ್ರಶಸ್ತಿ(2019)
  5. ರಷ್ಯಾದ ಆರ್ಡರ್‌ ಆಫ್ ಸೈಂಟ್‌ ಆ್ಯಂಡ್ರೂéಸ್‌ ಪ್ರಶಸ್ತಿ(2019)
  6. ಮಾಲ್ಡೀವ್ಸ್‌ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ (2019)
  7. ಬಹರೈನ್‌ನ ಕಿಂಗ್‌ ಹಮತ್‌ ಆರ್ಡರ್‌ ಆಫ್ ದಿ ರಿನಯಸ್ಸೆನ್ಸ್‌-ಫ‌ಸ್ಟ್‌ ಕ್ಲಾಸ್‌(2019)
  8. ಅಮೆರಿಕ ಸರ್ಕಾರದ ಸಶಸ್ತ್ರ ಪಡೆಗಳ ಪ್ರಶಸ್ತಿ ಲೀಜನ್‌ ಆಫ್ ಮೆರಿಟ್‌ (2020)

ಇದನ್ನೂ ಓದಿ:ಶರೀರ ಸೌಂದರ್ಯಕ್ಕಿಂತ ಆತ್ಮಸೌಂದರ್ಯವೇ ಮಿಗಿಲಾದುದು

ಇತರೆ ಸಂಘಸಂಸ್ಥೆಗಳು ನೀಡಿರುವ ಗೌರವಗಳು
ಸಿಯೋಲ್‌ ಶಾಂತಿ ಪ್ರಶಸ್ತಿ(2018), ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ ಚಾಂಪಿಯನ್ಸ್‌ ಆಫ್ ದಿ ಅರ್ಥ್ ಅವಾರ್ಡ್‌(2018), ಫ‌ಸ್ಟ್‌ ಫಿಲಿಪ್‌ ಕೋಟ್ಲರ್‌ ಪ್ರಸಿಡೆನ್ಶಿಯಲ್‌ ಅವಾರ್ಡ್‌(2019), ಬಿಲ್‌ ಆ್ಯಂಡ್‌ ಮಿಲಿಂಡಾ ಗೇಟ್ಸ್‌ ಪ್ರತಿಷ್ಠಾನದ ಗ್ಲೋಬಲ್‌ ಗೋಲ್‌ಕೀಪರ್‌ ಪ್ರಶಸ್ತಿ(2019) ಮತ್ತು ಕೇಂಬ್ರಿಡ್ಜ್ ಎನರ್ಜಿ ರಿಸರ್ಚ್‌ ಅಸೋಸಿಯೇಟ್ಸ್‌ ನೀಡುವ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ(2021).

Advertisement
Advertisement

Udayavani is now on Telegram. Click here to join our channel and stay updated with the latest news.

Next