Advertisement

ಛತ್ತೀಸ್‌ಗಡಕ್ಕೆ ಬಘೇಲ್‌ ಸಾರಥ್ಯ

06:00 AM Dec 17, 2018 | Team Udayavani |

ರಾಯು³ರ/ಹೊಸದಿಲ್ಲಿ: ಸತತ 5 ದಿನಗಳ ಸಸ್ಪೆನ್ಸ್‌ಗೆ ಕೊನೆಗೂ ತೆರೆಬಿದ್ದಿದ್ದು, ಛತ್ತೀಸ್‌ಗಡದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಹಿರಿಯ ನಾಯಕ ಭೂಪೇಶ್‌ ಬಘೇಲ್‌ ನೇಮಕಗೊಂಡಿದ್ದಾರೆ. 

Advertisement

ನಾಲ್ವರು ಸಿಎಂ ಆಕಾಂಕ್ಷಿಗಳೊಂದಿಗೆ ನಡೆದ ಹಲವು ಸುತ್ತಿನ ಮಾತುಕತೆಗಳ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭೂಪೇಶ್‌ ಹೆಗಲಿಗೆ ಛತ್ತೀಸ್‌ಗಡದ ಹೊಣೆಯನ್ನು ವಹಿಸಿದ್ದಾರೆ.

ರಾಯು³ರದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಬಳಿಕ ಪಕ್ಷದ ನಾಯಕ ಮಲ್ಲಿ ಕಾರ್ಜುನ ಖರ್ಗೆ ಅವರು ಈ ಘೋಷಣೆ ಮಾಡಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಬಘೇಲ್‌ ಅವರು ಮುಖ್ಯಮಂತ್ರಿ ಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಬೇರೆ ಯಾವ ಸಚಿವರೂ ಪ್ರಮಾಣ ವಚನ ಸ್ವೀಕ ರಿಸುವುದಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.

ಟಿ.ಎಸ್‌.ಸಿಂಗ್‌ ದೇವ್‌, ಚರಣ ದಾಸ್‌ ಮಹಾಂತ್‌, ತಾಮ್ರಧ್ವಜ ಸಾಹೂ ಹಾಗೂ ಬಘೇಲ್‌ ನಡುವೆ ಸಿಎಂ ಹುದ್ದೆಗೆ ತೀವ್ರ ಪೈಪೋಟಿ ಇದ್ದ ಕಾರಣ, ನೇಮಕ ವಿಳಂಬ ವಾಯಿತು. ನಾಲ್ವರು ನಾಯಕರೂ ಪಕ್ಷ ಕ್ಕಾಗಿ ಸಮಾನ ಕೊಡುಗೆ ನೀಡಿದ್ದಾರೆ. ಹೀಗಾಗಿ ಆಯ್ಕೆ ಕಷ್ಟವಾಯಿತು ಎಂದು ಖರ್ಗೆ ಹೇಳಿದ್ದಾರೆ. ಸಿಎಂ ಘೋಷಣೆ ಹೊರ ಬೀಳುತ್ತಿದ್ದಂತೆ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.

ಬಳಿಕ ಮಾತನಾಡಿದ ನಿಯೋಜಿತ ಸಿಎಂ ಬಘೇಲಾ, “ಮೊದಲ ಸಂಪುಟ ಸಭೆಯಲ್ಲೇ ರೈತರ ಸಾಲ ಮನ್ನಾ ಮಾಡುವುದು ಮತ್ತು 5 ವರ್ಷಗಳ ಹಿಂದೆ ಬಸ್ತಾರ್‌ನಲ್ಲಿ ಕಾಂಗ್ರೆಸ್‌ನ ಸಂಪೂರ್ಣ ರಾಜ್ಯ ನಾಯಕರ ಸಾವಿಗೆ ಕಾರಣವಾದ ನಕ್ಸಲ್‌ ದಾಳಿಯ ತನಿಖೆ ನಡೆವುದು ಪ್ರಮುಖ ಆದ್ಯತೆ’ ಎಂದಿದ್ದಾರೆ. 

Advertisement

ಪ್ರಮಾಣ ಸ್ವೀಕಾರದಲ್ಲಿ ನಾಯ್ಡು ಭಾಗಿ?: ಸೋಮವಾರ ಮಧ್ಯಪ್ರದೇಶ ಸಿಎಂ ಆಗಿ ಕಮಲ್‌ ನಾಥ್‌, ರಾಜಸ್ಥಾನ ಸಿಎಂ ಆಗಿ ಗೆಹೊÉàಟ್‌ ಪ್ರಮಾಣವಚನ ಸ್ವೀಕರಿಸ ಲಿದ್ದು, ಈ ಕಾರ್ಯಕ್ರಮದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಭಾಗಿಯಾಗುವ ನಿರೀಕ್ಷೆಯಿದೆ. ನಾಯ್ಡು ಅವರಿಗೆ ಇಬ್ಬರು ನಾಯಕರೂ ಆಹ್ವಾನ ನೀಡಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್‌-ಆಪ್‌ ಮೈತ್ರಿ?: ಮುಂದಿನ ಲೋಕಸಭೆ ಚುನಾವಣೆ ವೇಳೆ ದೆಹಲಿಯಲ್ಲಿನ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳ ಲಿದೆಯೇ? ಎರಡೂ ಪಕ್ಷಗಳ ನಡುವೆ ಹಿಂಬಾಗಿಲ ಮಾತುಕತೆ ನಡೆಯುತ್ತಿದ್ದು, ಇದು ಸಫ‌ಲವಾದರೆ ಮೈತ್ರಿ ಖಚಿತ ಎಂದು ಮೂಲಗಳು ತಿಳಿಸಿವೆ. 

ಕಾಂಗ್ರೆಸ್‌ ಗೆಲುವಿನ ರೂವಾರಿ ಬಘೇಲ್‌
ಛತ್ತೀಸ್‌ಗಡದಲ್ಲಿ 5 ವರ್ಷಗಳ ಹಿಂದೆ ಕಾಂಗ್ರೆಸ್‌ನ ಪ್ರಮುಖ ನಾಯಕ ರೆಲ್ಲರೂ ನಕ್ಸಲರ ಭೀಕರ ದಾಳಿಗೆ ಬಲಿಯಾಗಿ, ಪಕ್ಷಕ್ಕೆ ನಾಯಕರೇ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿತ್ತು. ಇಂಥ ಕ್ಲಿಷ್ಟಕರ ಸ್ಥಿತಿಯಲ್ಲೂ ಕಾಂಗ್ರೆಸ್‌ ಅನ್ನು ಫೀನಿಕ್ಸ್‌ ನಂತೆ ಎದ್ದುಬರಲು ಸಹಾಯ ಮಾಡಿದವರಲ್ಲಿ ಭೂಪೇಶ್‌ ಬಘೇಲ್‌ ಪ್ರಮುಖರು. ಒಬಿಸಿ ಕುರ್ಮಿ ಸಮುದಾಯಕ್ಕೆ ಸೇರಿರುವ ಬಘೇಲ್‌(57), ಉತ್ತಮ ನಾಯಕತ್ವ ಗುಣ ಹೊಂದಿರುವ ಮುತ್ಸದ್ದಿ. 2014 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೇರಿದ ಅವರು, 15 ವರ್ಷಗಳ ಬಿಜೆಪಿ ಆಡಳಿತ ವನ್ನು ಕೊನೆಗಾಣಿಸು ವಲ್ಲಿ ಯಶಸ್ವಿಯಾದವರು. “ಬೀದಿ ಹೋರಾಟಗಾರ'(ಸ್ಟ್ರೀಟ್‌ ಫೈಟರ್‌) ಎಂದೇ ಖ್ಯಾತರಾಗಿರುವ ಬಘೇಲ್‌, ಸ್ವತಃ ಕಾಂಗ್ರೆಸ್‌ ಕೂಡ ಊಹಿಸದ ರೀತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ಈ ಪರಿಶ್ರಮಕ್ಕೆ ಪ್ರತಿಯಾಗಿ ಬಘೇಲ್‌ರನ್ನು ಸಿಎಂ ಎಂದು ಕಾಂಗ್ರೆಸ್‌ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next