Advertisement
ಇಂದಿನಿಂದ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜತೆಗೂಡಿ ಪರೀಕ್ಷೆ ಬರೆಯಲು ಭೂಮಿಕಾ ನಗರದ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಇಂದಿನಿಂದ ಪರೀಕ್ಷೆ ಆರಂಭಗೊಂಡರೂ ಪರೀಕ್ಷೆ ಕೇಂದ್ರದಲ್ಲಿ ಭೂಮಿಕಾ ಗೌಡ ಮಾತ್ರ ಒಬ್ಬಳೇ ಪರೀಕ್ಷೆ ಬರೆಯುತ್ತಿದ್ದಾಳೆ. ಖಾಸಗಿ ವಿದ್ಯಾರ್ಥಿಗಳು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಇರುವುದರಿಂದ ಅವರಿಗೆ ನಾಳೆಯಿಂದ ಪರೀಕ್ಷೆಗಳು ಆರಂಭವಾಗಲಿವೆ. ಓರ್ವ ವಿದ್ಯಾರ್ಥಿನಿ ಪರೀಕ್ಷೆಗಾಗಿ ಸುಮಾರು ಇಪ್ಪತ್ತಾರು ಜನ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಬೇಕಾಗಿದೆ.
Related Articles
Advertisement
ಪ್ರಾಚ್ಯವಸ್ತು ಪುರಾತತ್ವ ಕೋರ್ಸ್ ನಲ್ಲಿ ಆಸಕ್ತಿ: ಕೋವಿಡ್ ಮಹಾಮಾರಿಯ ಪರಿಣಾಮವಾಗಿ ಸರಕಾರ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸಿದೆ. ಆದರೆ ತಮಗೆ ಪರೀಕ್ಷೆ ಬರೆದು ಉತ್ತೀರ್ಣ ರಾಗುವ ಬಯಕೆ ಇದ್ದ ಕಾರಣ ಇದನ್ನು ಪಾಲಕರು ಮತ್ತು ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದಾಗ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆನ್ ಲೈನ್ ತರಗತಿ ಮತ್ತು ಉಪನ್ಯಾಸಕರು ನೀಡಿದ ನೋಟ್ಸ್ ಗಳಿಂದ ಮನೆಯಲ್ಲಿಯೇ ಸೆಲ್ಪ್ ಸ್ಟಡಿ ಮಾಡಿದ್ದು ಉತ್ತಮ ಅಂಕ ಬರುವ ಸಾಧ್ಯತೆ ಇದೆ.
ಸಿಇಟಿ ಹಾಗೂ ನೀಟ್ ಪರೀಕ್ಷೆ ಬರೆದು ಉತ್ತಮ ಕೋರ್ಸ್ ಸೇರುವ ಆಸಕ್ತಿ ಇದೆ. ಮುಖ್ಯವಾಗಿ ಪ್ರಾಚ್ಯವಸ್ತು ಮತ್ತು ಪುರಾತತ್ವ ಕೋರ್ಸನ್ನು ಮಾಡುವ ಬಯಕೆಯಿದೆ ಎಂದು ಭೂಮಿಕಾ ಚಂದ್ರಶೇಖರಗೌಡ ಉದಯವಾಣಿಗೆ ತಿಳಿಸಿದರು.