ಕೊಟ್ಟೂರು: ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆಗೆ ಬೂದಿ ರೋಗ, ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು ರೈತರಿಗೆ ನಷ್ಟದ ಭೀತಿ ಎದುರಾಗಿದೆ.
ನೀರಾವರಿ ಜಮೀನುಗಳಲ್ಲಿ ಮೆಣಸಿನಕಾಯಿ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಎಲೆಯ ಮೇಲೆ ಬೂದಿ ಚೆಲ್ಲಿದಂತಹ ರೋಗ ಲಕ್ಷಣ ಕಂಡೊಡನೆ ಎಲೆ, ಹೂ ಉದುರಲು ಆರಂಭಿಸಿ ಗಿಡಗಳು ಬರಡಾಗುತ್ತಿವೆ. ಈ ವಿಚಿತ್ರ ರೋಗದಿಂದ ಇಳುವರಿಗಣನೀಯವಾಗಿ ಕುಸಿತಗೊಳ್ಳುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನಲ್ಲಿ ಈ ವರ್ಷ 1000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆಯಾಗಿದ್ದು ಮಳೆ ಅಭಾವದಿಂದ ಖುಷ್ಕಿ ಜಮೀನಿನಲ್ಲಿ ಶೇ. 90 ರಷ್ಟು ಬೆಳೆ ಹಾನಿಗೀಡಾಗಿದೆ. ನೀರಾವರಿಪ್ರದೇಶದಲ್ಲಿನ ಬೆಳೆ ರೋಗಬಾಧೆಗೆ ತುತ್ತಾಗಿದೆ. ಮೆಣಸಿನಕಾಯಿ ಬೆಳೆಗೆ ಹಿಂದಿನ ವರ್ಷ ಸೊರಗು ರೋಗ ಮತ್ತು ಮಚ್ಚೆ ರೋಗ ಕಾಣಿಸಿಕೊಂಡು ರೈತರು ನಷ್ಟ ಅನುಭವಿಸಿದ್ದರು. ಈ ಬಾರಿಬೂದಿ ರೋಗ ಬೆನ್ನತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.
ಬೂದಿರೋಗ ಹತೋಟಿಗಾಗಿ ವಾರಕ್ಕೆ ಎರಡು ಬಾರಿಗಿಂತ ಅಧಿಕವಾಗಿ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. 2 ಎಕರೆ ಮೆಣಸಿನಕಾಯಿ ಕೃಷಿಗೆ ಈಗಾಗಲೇರೂ. 1.60 ಲಕ್ಷ ಖರ್ಚು ಮಾಡಿದ್ದೇವೆ.ರೋಗಬಾಧೆಯಿಂದ ಇಳುವರಿ ಅರ್ಧದಷ್ಟು ಕುಸಿಯುವ ಲಕ್ಷಣಗಳಿರುವುದರಿಂದ ದಿಕ್ಕುತೋಚದಂತಾಗಿದೆ ಎಂದು ರೈತ ಬಿ.ಎಸ್. ಆರ್. ಮೂಗಣ್ಣ ಅಳಲು ತೋಡಿಕೊಂಡರು.ಮೆಣಸಿನಕಾಯಿ ಕೃಷಿಗೆ ಹೆಚ್ಚು ರಸಗೊಬ್ಬರ, ಕ್ರಿಮಿನಾಶ ಬಳಸುವುದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತದೆ. ಈ ಸತ್ಯ ಗೊತ್ತಿದ್ದರೂ ಹೆಚ್ಚಿನ ಇಳುವರಿ ಪಡೆದು ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಅದರ ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದರು.
ಹಿಂದಿನ ವರ್ಷ ಎಕರೆಗೆ 15ರಿಂದ 20 ಕ್ವಿಂಟಲ್ ಇಳುವರಿ ಬಂದಿತ್ತು. ಬೆಳೆದಿದ್ದ ಬ್ಯಾಡಗಿ ತಳಿಯ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ರೂ. 15ರಿಂದರೂ. 20 ಸಾವಿರ ಬೆಲೆ ಸಿಕ್ಕಿತ್ತು. ಆದರೆ ಈ ವರ್ಷ 20 ರಿಂದ 30 ಸಾವಿರಕ್ಕೇರಿದೆ. ಮೆಣಸಿನಕಾಯಿಕೃಷಿ ಕೈಹಿಡಿದ್ದಿದರಿಂದ ಈ ವರ್ಷ 2 ಎಕರೆಯಲ್ಲಿಮೆಣಸಿನಕಾಯಿ ಬಿತ್ತನೆ ಮಾಡಿದ್ದೆ. ಆದರೆ, ಇಡೀ ಹೊಲ ರೋಗಕ್ಕೆ ತುತ್ತಾಗಿದೆ. ಬೆಳೆಯನ್ನುನಂಬಿಕೊಂಡು ಸಾಲ ಪಡೆದಿದ್ದೆ. ಈಗ ಏನುಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಉಳಿದ ರೈತರು.
ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ರೋಗಬಾಧೆಯಿಂದನೆಲಪಾಲಾಯಿತು. ಸರ್ಕಾರ ಇಂಥ ನಷ್ಟಗಳ ಪಟ್ಟಿ ಮಾಡಿ ಕಷ್ಟದಲ್ಲಿರುವ ನಮ್ಮ ಸಹಾಯಕ್ಕೆ ಬರಬೇಕು.
–ಬಿ.ಎಸ್.ಆರ್. ಮೂಗಣ್ಣ, ರೈತ, ಕೊಟ್ಟೂರು
ಮೆಣಸಿನಕಾಯಿಗೆ ಬೂದಿ ರೋಗ ಬಂದಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿ ಸಿದಂತೆ ಔಷಧ ಸಿಂಪಡಣೆಗೆಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಬೆಳೆ ನಾಶವಾಗಿರುವ ರೈತರು ಕಂಗಲಾಗದೆ ಇದಕ್ಕೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಮತ್ತುಬೆಳೆ ಸಮೀಕ್ಷೆ ನಂತರ ಪರಿಹಾರ ಒದಗಿಸಲು ಮುಂದಾಗುತ್ತೇವೆ.
–ನೀಲಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ್ಲಿಗಿ
-ರವಿಕುಮಾರ ಎಂ