Advertisement
ಪ್ರತಿದಿನ ಬೆಳಗ್ಗೆ 6.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆಯಲಿದ್ದು, ಪರಿಸರದಲ್ಲಿ ಪ್ರಸಿದ್ಧಿ ಪಡೆದು ವಿಜೃಂಭಣೆಯಿಂದ ಜರಗುವ ಉತ್ಸವ ಇದಾಗಿದೆ. 5 ದಿನಗಳ ಉತ್ಸವದ ಈ ಸಂದರ್ಭದಲ್ಲಿ ಬ್ರಹ್ಮದೇವರು ಭೂಮಿಗಿಳಿದು ಎಲ್ಲ ದೇವತೆಗಳ ಜತೆಗೆ ಶ್ರೀ ಬಾಲಾಜಿಯ ಉತ್ಸವವನ್ನು ವೀಕ್ಷಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಆರಂಭದ ದಿನ ಗರುಡ ಲಾಂಛನದ ಧ್ವಜಾರೋಹಣ ನಡೆಯಿತು.
Related Articles
Advertisement
ನೆರೂಲ್ ಶ್ರೀ ಲಕ್ಷ್ಮೀನರಸಿಂಹ ಸಭಾ 1999 ಎಪ್ರಿಲ್ ಅಕ್ಷಯ ತೃತೀಯದಂದು ಸ್ಥಾಪನೆಗೊಂಡಿದ್ದು ಇಲ್ಲಿ ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳು ನಿರಂತರವಾಗಿ ಕ್ಷೇತ್ರದಲ್ಲಿ ನೋಂದಣಿಗೊಂಡ ಪಬ್ಲಿಕ್ ಟ್ರಸ್ಟಿನ ಮೂಲಕ ಜರಗುತ್ತಿದೆ. 1999ರಲ್ಲಿ ಭಗವಾನ್ ಶ್ರೀ ಬಾಲಾಜಿ ಮಂದಿರವನ್ನು ಹಾಗೂ ಮಂದಿರದ ಪರಿಸರದಲ್ಲಿ ಭಗವಾನ್ ಶ್ರೀ ಬಾಲಾಜಿ ಜತೆಗೆ ಪದ್ಮಾವತಿ ಶ್ರೀ ದೇವಿ, ಶ್ರೀ ವಿದ್ಯಾಗಣಪತಿ, ಶ್ರೀ ಲಕ್ಷ್ಮೀನರಸಿಂಹ ಶ್ರೀ ರಾಮಾನುಜ ಶ್ರೀ ಯೋಗ ಆಂಜನೇಯ ಮೊದಲಾದ ಸುಂದರವಾದ ಉಪ ಮಂದಿರಗಳನ್ನು ನಿರ್ಮಿಸಲಾಗಿದೆ. ಸುಂದರವಾದ ರಾಜಗೋಪುರ ದೊಂದಿಗೆ ಭಕ್ತಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಕೊರೊನಾ ಮಾರ್ಗಸೂಚಿಗಳಿಗೆ ಅನುಗು ಣವಾಗಿ ನಡೆಯಲಿರುವ ಈ ಉತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗುವಂತೆ ಮಂದಿರದ ಪ್ರಕಟನೆ ತಿಳಿಸಿದೆ.