ಮುಂಬಯಿ: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆ ಬಲ್ ಟ್ರಸ್ಟ್ ಇದರ ನೆರೂಲ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ನೆರೂಲ್ ದೇವಾಡಿಗ ಭವನದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ನಡೆಯಿತು.
ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಕಡಂದಲೆ ಪ್ರಕಾಶ್ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉದಯೋನ್ಮುಖ ಯಕ್ಷಗಾನ ಕಲಾವಿದರಾದ ಪ್ರಭಾಕರ ಎಸ್. ದೇವಾಡಿಗ ಅವರಿಗೆ ಯಕ್ಷಭಾÅಮರಿ ಪ್ರಶಸ್ತಿ, ಸಹನಾ ಭಾರದ್ವಾಜ್ ಅವರಿಗೆ ಭ್ರಮರ ಚೇತನ ಪ್ರಶಸ್ತಿ, ಕು| ತೃಷಾ ಜಿ. ಭಟ್ ಮತ್ತು ಕು| ಪಲ್ಲವಿ ಎಸ್. ಭಟ್ ಅವರಿಗೆ ಭ್ರಮರ ಚೇತನ ಪುರಸ್ಕಾರವನ್ನಿತ್ತು ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ, ಶ್ರೀ ಶನೀಶ್ವರ ಮಂದಿರ ನೆರೂಲ್, ಶ್ರೀ ಗಣಪತಿ, ಅಯ್ಯಪ್ಪ, ದುರ್ಗಾದೇವಿ ಕ್ಷೇತ್ರದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ ಪಡೆದ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಅತಿಥಿ-ಗಣ್ಯರು ಗಳಾಗಿ ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಜೋತಿಷಿ, ಪುರೋಹಿತ ವೇದ ಮೂರ್ತಿ ದಿನೇಶ್ ಉಪರ್ಣ, ಜಗದೀಶ್ ಶೆಟ್ಟಿ ನಂದಿಕೂರು, ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ದೇವಾಡಿಗ ಸಂಘ ಮುಂಬಯಿ ಇದರ ಹಿರಿಯಡ್ಕ ಮೋಹನ್‌ದಾಸ್, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ದೇವಾಡಿಗ, ಹಿರಿಯ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ, ಜನಾರ್ದನ ದೇವಾಡಿಗ, ಸತೀಶ್ ಆರ್. ಶೆಟ್ಟಿ, ರೂಪಾ ಶೆಟ್ಟಿ, ಹರೀಶ್ ಪೂಜಾರಿ, ರಂಗಕರ್ಮಿ ವಿ. ಕೆ. ಸುವರ್ಣ, ರಾಜಾರಾಮ್ ಆಚಾರ್ಯ, ಕೃಷ್ಣ ಪೂಜಾರಿ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಜಯಂತಿ ಮೊಲಿ, ಜಯರಾಮ ಆಚಾರ್ಯ, ಪೂರ್ಣಿಮಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗುರು ಕಟೀಲು ಸದಾನಂದ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.