Advertisement

ಭೋವಿ ಸಮುದಾಯ ಕಡೆಗಣಿಸದಿರಿ: ವಲ್ಯಾಪುರೆ

03:02 PM Feb 11, 2017 | |

ಅಫಜಲಪುರ: ರಾಜ್ಯದಲ್ಲಿ 60 ಲಕ್ಷದಷ್ಟಿರುವ ಭೋವಿ ಸಮುದಾಯವನ್ನು ಪರಿಶಿಷ್ಟ ಜಾತಿ ಮಿಸಲಾತಿಯಿಂದ ವಂಚಿಸುವ ಸದಾಶಿವ ವರದಿ ಜಾರಿ ಗೊಳಿಸುವ ನಿಟ್ಟಿನಲ್ಲಿ ಕೆಲವರು ಪ್ರಯತ್ನಿಸುತ್ತಿದ್ದಾರೆ. ಭೋವಿ ಸಮುದಾಯ ಕಡೆಗಣಿಸಿದರೆ ಸರ್ಕಾರದ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಸುನೀಲ ವಲ್ಯಾಪುರೆ ಹೇಳಿದರು. 

Advertisement

ತಾಲೂಕಿನ ಚವಡಾಪುರದಲ್ಲಿ ನಡೆದ ಶರಣ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಮಹಾನ್‌ ಕಾಯಕ ಯೋಗಿಯಾಗಿದ್ದಾರೆ. ಅವರು ತಮ್ಮ ಕಾಯಕದ ಮೂಲಕವೇ ಜನರ ಮನ ಪರಿರ್ತನೆ ಮಾಡಿದ್ದಾರೆ. ಎಲ್ಲ ಶರಣರಿಗಿಂತ ಹೆಚ್ಚು ವಚನಗಳನ್ನು ಬರೆದಿರುವ ಖ್ಯಾತಿಯೂ ಸಿದ್ದರಾಮೇಶ್ವರರಿಗೆ ಇದೆ.

ಆದರೆ ಕೇವಲ 2 ಸಾವಿರ ವಚನಗಳಷ್ಟೆ ಸಿಕ್ಕಿವೆ. ಉಳಿದ ವಚನಗಳನ್ನು ಕಂಡು ಹಿಡಿಯುವ  ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂದು ಹೇಳಿದರು. ಭೋವಿ ಸಮುದಾಯ ತುಳಿಯುವ ಕೆಲಸ ಮಾಡಿದರೆ ಖಂಡಿತವಾಗಿಯೂ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು. 

ಭೋವಿ ಸಮಾಜದ ಕಾಂತು ಒಡೆಯರ್‌ ಮಾತನಾಡಿ, 12ನೇ ಶತಮಾನದಲ್ಲಿ ಎಲ್ಲ ಬಸವಾದಿ ಶರಣರಲ್ಲಿ ಸಿದ್ದರಾಮೇಶ್ವರರು ವಿಶಿಷ್ಟವಾಗಿ ಕಾಣುತ್ತಾರೆ. ಕೇವಲ ವಚನಗಳನ್ನು ಬರೆಯದೆ ಕೆರೆ, ಬಾವಿಗಳನ್ನು ಕಟ್ಟಿಸುವ ಮೂಲಕ ನೀರಿನ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಅಂದಿನ ಸೊನ್ನಲಗಿಯಲ್ಲಿ ಕೆರೆ ಕುಂಟೆಗಳನ್ನು ಕಟ್ಟಿಸಿದ್ದಾರೆ. 

ಸೊನ್ನಲಗಿ ಎನ್ನುವುದು ಈಗ ಸೊಲ್ಲಾಪುರವಾಗಿದ್ದು ಮಹಾರಾಷ್ಟ್ರ ರಾಜ್ಯದಲ್ಲಿದೆ ಎಂದರು. ಮಹಾರಾಷ್ಟ್ರ ಸರ್ಕಾರ ಸಿದ್ದರಾಮೇಶ್ವರರ ಕುರಿತು ಅಧ್ಯಯನ ಮತ್ತು ಅನ್ವೇಷಣಾ ಪ್ರಾಧಿಧಿಕಾರ ತೆರೆದು ಕೂಡಲ ಸಂಗಮದಂತೆ ಸೊಲ್ಲಾಪುರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.

Advertisement

ರಾಜ್ಯ ಸರ್ಕಾರ ರಾಜ್ಯದ ಯಾವುದಾದರೂ ಒಂದು ವಿ.ವಿ. ಗೆ ಸಿದ್ದರಾಮೇಶ್ವರರ ಹೆಸರಿಡಬೇಕು, ರಾಜ್ಯ ಸರ್ಕಾರ ಕಲ್ಲು ಒಡೆಯುವುದನ್ನು ನಿರ್ಬಂಧಿಧಿಸಿದ್ದರಿಂದ ಭೋವಿ ಸಮುದಾಯ ಬೀದಿಗೆ ಬಿದ್ದಂತಾಗಿದೆ. ಹೀಗಾಗಿ ಪುನಃ ಕಲ್ಲು ಒಡೆಯವುದನ್ನು ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಚಿನ್ಮಯಗಿರಿಯ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಕುಸ್ತಿ ಅಧ್ಯಕ್ಷತೆ ವಹಿಸಿದ್ದರು. ಅಣ್ಣಯ್ಯ ಮರಿದೇವರು, ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಸದಸ್ಯ ಅರುಣಗೌಡ ಪಾಟೀಲ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, 

ಗ್ರಾಪಂ ಅಧ್ಯಕ್ಷೆ ಮಹಾದೇವಿ ಜಮಾದಾರ, ಮುಖಂಡರಾದ ರಾಮಯ್ಯ ಪೂಜಾರಿ, ರಾಜು ಎಂಪುರೆ, ತಿಮ್ಮಯ್ಯ ಶಾಬಾದಕರ,  ಕಲ್ಯಾಣಿ ಜಾಧವ, ನಾಗಪ್ಪ ಮಂಜುಳಕರ, ವಿಠಲ್‌ ನೇಲೋಗಿ, ಹಣಮಂತ ದೇವಕರ, ಹರೀಶ ಸಾಸನೇಕರ ಹಾಗೂ ಸಮಾಜ ಬಾಂಧವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next