Advertisement

ಭರವಸೆಯ ಬೆಳಕು : ಕೋವಿಡ್ ಗೆದ್ದ ಭೋಸಿ ಹಳ್ಳಿ ಕಥೆ

12:43 AM May 21, 2021 | Team Udayavani |

ಮುಂಬಯಿ: ಇದು ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯ ಭೋಸಿ ಹಳ್ಳಿಯ ಜನ ಕೊರೊನಾ ಗೆದ್ದ ಕಥೆ. 6,000 ಜನಸಂಖ್ಯೆಯಿರುವ ಈ ಹಳ್ಳಿಗರು ಸರಕಾರಿ ಸಹಾಯ ಮತ್ತು ಪರಸ್ಪರ ಸಹಕಾರದಿಂದ ಪೂರ್ಣಪ್ರಮಾಣದಲ್ಲಿ ಕೋವಿಡ್ ನಿಂದ ಹೊರಬಂದಿದ್ದಾರೆ.

Advertisement

ಎರಡು ತಿಂಗಳ ಹಿಂದೆ ಹುಡುಗಿಯೊಬ್ಬಳು ಮದುವೆಗೆ ಹೋಗಿ ಕೊರೊನಾ ಅಂಟಿಸಿಕೊಂಡಿದ್ದಳು. ಅದಾದ ಕೆಲವೇ ದಿನಗಳಲ್ಲಿ ಇನ್ನೈದು ಮಂದಿಗೆ ಕೊರೊನಾ ಕಾಣಿಸಿಕೊಂಡಿತು. ಕೂಡಲೇ ಎಚ್ಚರಾದ ಆರೋಗ್ಯ ಸಚಿವಾಲಯ; ಅಲ್ಲಿನ ಗ್ರಾ.ಪಂ. ನೆರವಿನಿಂದ ಊರಿನಲ್ಲಿ ಕೂಡಲೇ ಪರೀಕ್ಷೆ ನಡೆಸಿತು. 119 ಮಂದಿಗೆ ಕೋವಿಡ್ ಖಾತ್ರಿಯಾಯಿತು. ಅಷ್ಟೂ ಮಂದಿಯನ್ನು  ಹೊಲಗಳಲ್ಲಿ ಪ್ರತ್ಯೇಕವಾಗಿರಿಸಲಾಯಿತು.

ಮುಂದಿನ 20 ದಿನಗಳಲ್ಲಿ ಅವರೆಲ್ಲ ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಈಗ ಒಂದೂವರೆ ತಿಂಗಳಲ್ಲಿ ಅಲ್ಲಿ ಯಾವುದೇ ಹೊಸ ಪ್ರಕರಣಗಳಿಲ್ಲ! ಪ್ರತ್ಯೇಕವಾಗಿ ರುವುದರಿಂದ ಕೊರೊನಾ ಹರಡುವುದನ್ನು ತಪ್ಪಿಸಬಹುದೆನ್ನುವುದು ಇದರಿಂದ ಸಾಬೀತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next