Advertisement

ಮಗಳು ಹುಟ್ಟಿದ್ದಕ್ಕೆ ಉಚಿತ ಪಾನಿಪುರಿ ಹಂಚಿದ ತಂದೆ

07:47 PM Sep 13, 2021 | Team Udayavani |

ಭೋಪಾಲ್‌: ಮಗಳು ಹುಟ್ಟಿದಳೆಂಬ ಸಂತಸಕ್ಕೆ  ಬೀದಿ ಬದಿ ವ್ಯಾಪಾರಿ ಅಂಚಲ್‌ ಗುಪ್ತಾ ಸಾರ್ವಜನಿಕರಿಗೆ ಉಚಿತವಾಗಿ ಪಾನಿ ಪುರಿ ನೀಡಿ ಸಂತಸ ಹಂಚಿಕೊಂಡಿದ್ದಾರೆ.

Advertisement

ಭೋಪಾಲ್‌ನ ಕೋಲಾರ ಎಂಬಲ್ಲಿ  20 ವರ್ಷಗಳಿಂದ ಪಾನಿಪುರಿ ಅಂಗಡಿ ನಡೆಸುತ್ತಿರುವ ಅಂಚಲ್‌ ಗುಪ್ತಾ(30) ಕುಟುಂಬದಲ್ಲಿ ಆ.17ರಂದು ಮಗಳು ಜನಿಸಿದ್ದಾಳೆ. ಮದುವೆಯಾದಾಗಿನಿಂದಲೂ ಆತ ಹೆಣ್ಣು ಮಗುವೇ ಆಗಬೇಕೆಂದು ಕನಸು ಕಂಡಿದ್ದನಾದರೂ ಎರಡು ವರ್ಷ ಹಿಂದೆ ಆತನ ಪತ್ನಿಗೆ ಮೊದಲು ಮಗ ಜನಿಸಿದ್ದ.

ಮಗಳು ಹುಟ್ಟಿದ ಸಂತಸದಲ್ಲಿ ಅಂಚಲ್‌ ಮಗನ 2ನೇ ವರ್ಷದ ಜನ್ಮದಿನವಾದ ಸೆ.12ರಂದು ಎಲ್ಲರಿಗೂ ಉಚಿತವಾಗಿ ಪಾನಿಪುರಿ ಹಂಚಿದ್ದಾರೆ. ಮಗಳಿದ್ದರೆ ಭವಿಷ್ಯವಿದೆ ಎಂದು ಎಲ್ಲರಿಗೂ ಹೇಳುತ್ತಾ, ಪಾನಿಪುರಿ ಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next