Advertisement

ಪೊರೆ ಕಳಚುವ ಬಾಲಕಿ ಸ್ಪೇನ್‌ಗೆ

08:40 AM Sep 12, 2017 | Team Udayavani |

ಭೋಪಾಲ್‌: ಹಾವು ಪೊರೆ ಕಳಚುವುದು ಗೊತ್ತು. ಅದೇ ರೀತಿ ಮಾನವರಿಗೆ ಆಗುತ್ತಾ? ಇಲ್ಲೊಂದು ಪ್ರಕರಣದಲ್ಲಿ ಆ ರೀತಿ ಆಗುತ್ತದೆ. ಮಧ್ಯಪ್ರದೇಶದ ನವ್‌ಗಾಂವ್‌ ಪಟ್ಟಣದಲ್ಲಿನ 16 ವರ್ಷದ ಶಾಲಿನಿ ಯಾದವ್‌ ಈ ಸಮಸ್ಯೆ ಎದುರಿಸುತ್ತಿದ್ದಾಳೆ.

Advertisement

ಪ್ರತಿ ಆರು ವಾರಗಳಿಗೆ ಒಮ್ಮೆ ಶಾಲಿನಿಯ ಮೈಯಿಂದ ಚರ್ಮ ಏಳುತ್ತದೆ. ಅದನ್ನು ತಡೆಯಲು ಮಾಯಿಶ್ಚರೈಸರ್‌ ಅನ್ನು ಹಚ್ಚಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ. ಈ ಮೂಲಕ ಚರ್ಮ ಹೆಚ್ಚು ಗಟ್ಟಿಯಾದಂತೆ ತಡೆಯುವ ಪ್ರಯತ್ನ ಮಾಡಲಾಗುತ್ತದೆ. ಇದೀಗ ಆಕೆಗೆ ಸ್ಪೇನ್‌ನ ಆಸ್ಪತ್ರೆಯೊಂದು ಉಚಿತವಾಗಿ ಚಿಕಿತ್ಸೆ ನೀಡಲು ಒಪ್ಪಿಕೊಂಡಿದೆ. ಸ್ಪೇನ್‌ಗೆ ಚಿಕಿತ್ಸೆಗೆ ತೆರಳುವ ಬಗ್ಗೆ ಉತ್ಸಾಹ ದಿಂದ ಮಾತನಾಡಿದ ಆಕೆ “ಆ ದೇಶದ ಬಗ್ಗೆ ಟಿವಿಯಲ್ಲಿ ನೋಡಿದ್ದೆ. ಈಗ ಅಲ್ಲಿಗೆ ಚಿಕಿತ್ಸೆಗಾಗಿ ಹೋಗುತ್ತೀದ್ದೇನೆ’ ಎಂದಿದ್ದಾಳೆ.

ವೈದ್ಯರ ಅಭಿಪ್ರಾಯವೇನು?: ಬಾಲಕಿಗೆ ಎತ್ರೋಡರ್ಮಾ ಎಂಬ ಚರ್ಮದ ಕಾಯಿಲೆ ಯಿದೆ. ಅದಕ್ಕೆ “ರೆಡ್‌ ಮ್ಯಾನ್‌ ಸಿಂಡ್ರೋಮ್‌’ ಎಂದೂ ಕರೆಯುತ್ತಾರೆ. ಅದರಿಂದಾಗಿ ಚರ್ಮವೆಲ್ಲ ಕೆಂಪು ಮತ್ತು ನೀಲಿ ಬಣ್ಣಕ್ಕೆ ತಿರುಗುತ್ತದೆ. ಜತೆಗೆ ಅದು ಪದರದಂತಾ ಗುತ್ತದೆ. ಆಕೆ ಜನಿಸಿದ ದಿನದಿಂದಲೂ 45 ದಿನಗಳಿಗೆ ಒಂದು ಬಾರಿ ಚರ್ಮ ತ್ಯಜಿಸುತ್ತಾಳೆ ಎಂದು ವೈದ್ಯಕೀಯ ವರದಿ ಹೇಳಿದೆ.

ಅದರಿಂದ ಉಂಟಾಗುವ ತೊಂದರೆ ತಪ್ಪಿಸಲು ಹಗಲು- ರಾತ್ರಿ ಗಂಟೆಗೊಮ್ಮೆ ನೀರಿನಲ್ಲಿ ದೇಹವನ್ನು ಇರಿಸಬೇಕಾಗುತ್ತದೆ. ಸ್ಥಳೀಯ ಉತ್ಸಾಹಿ ಯುವಕರು ಬಾಲಕಿಯ ಸ್ಥಿತಿಯ ಬಗ್ಗೆ ಭಾರತ ಸೇರಿದಂತೆ ವಿಶ್ವದ ಹಲವಾರು ಆಸ್ಪತ್ರೆಗಳಿಗೆ ಮಾಹಿತಿ ನೀಡಿದ್ದರು. ಅವಳ ಪ್ರಯಾಣಕ್ಕೆ ಹಣ ಸಂಗ್ರಹಿಸಿ ನೆರವನ್ನೂ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next