Advertisement
ಉತ್ತರ ಪ್ರದೇಶ ಮೈನ ಪುರಿಯಲ್ಲಿ 13 ಎಕ್ರೆಯಲ್ಲಿನ ಐಷಾರಾಮಿ ಆಶ್ರಮವು ಅಮೆರಿಕದ ಶ್ವೇತಭವನವನ್ನು ಹೋಲುತ್ತದೆ! ಇದರ ಮೌಲ್ಯ 50 ಕೋಟಿ ರೂ.ಗೂ ಅಧಿಕವಿದೆ. ಸ್ವಘೋಷಿತ ದೇವಮಾನ ಭೋಲೆ ಬಾಬಾನ ಮೂಲ ಹೆಸರು ಸೂರಜ್ ಪಾಲ್ ಆಗಿದ್ದು, ಆಶ್ರಮದಲ್ಲಿ ಹಲವು ಕೋಣೆಗಳಿದ್ದು, ಬಾಬಾನಿಗೆ ಮೀಸಲಾಗಿರುವ 6 ಕೋಣೆಗಳು ಹೈಟೆಕ್ ಆಗಿವೆ. ಮತ್ತೆ 6 ಕೋಣೆಗಳನ್ನು ಸೇವಾದಾರರಿಗೆ (ಸ್ವಯಂ ಸೇವಕರು) ನೀಡಲಾಗಿದೆ. ಉ.ಪ್ರ. ಅಲ್ಲದೆ ಮಧ್ಯ ಪ್ರದೇಶ, ರಾಜಸ್ಥಾನ ಸೇರಿ ಬೇರೆ ಕಡೆಯೂ ಆಸ್ತಿ ಹೊಂದಿದ್ದಾನೆ ಎನ್ನಲಾಗಿದೆ. ಇತರ ಬಾಬಾಗಳಂತೆ ಕೇಸರಿ ಉಡುಗೆಯನ್ನು ಭೋಲೆ ಬಾಬಾ ತೊಡುವುದಿಲ್ಲ. ಯಾವಾಗಲೂ ಶುಭ್ರ ವಸ್ತ್ರಧಾರಿ ಯಾಗಿರುತ್ತಾರೆ. ಬಿಳಿ ಶೂಗಳನ್ನು ಧರಿಸುತ್ತಾರೆ ಮತ್ತು ಸತ್ಸಂಗದಲ್ಲಿ ತಮ್ಮ ಪತ್ನಿ ಜತೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಜಾಟ್ ಸಮುದಾಯಕ್ಕೆ ಸೇರಿರುವ ಬಾಬಾ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಮುಸ್ಲಿಮರೂ ಇವರು ಅನುಯಾಯಿಗಳಾಗಿದ್ದಾರೆ.
ಹಾಥರಸ್‌ನಲ್ಲಿ 121 ಜನರ ಸಾವಿಗೆ ಕಾರಣವಾದ ಕಾಲು¤ಳಿತ ಪ್ರಕರಣ ಸಂಬಂಧ ಪೊಲೀಸರು ಗುರುವಾರ 6 ಮಂದಿಯನ್ನು ಬಂಧಿಸಿದ್ದಾರೆ. ಜತೆಗೆ ಸ್ವಘೋಷಿತ ದೇವಮಾನವ ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರದ “ಮುಖ್ಯ ಸೇವಾದಾರ’ ದೇವ್ ಪ್ರಕಾಶ್ ಎಂಬವರನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದ್ದು, ಆತ ನಾಪತ್ತೆ ಯಾಗಿದ್ದಾನೆ ಎನ್ನಲಾಗಿದೆ.
Related Articles
121 ಮಂದಿಯ ಜೀವಕ್ಕೆ ಎರವಾಗಿರುವ ಭೋಲೆ ಬಾಬಾ ಜಾಲತಾಣಗಳಿಂದ ದೂರ ಇದ್ದಾನೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಯುಟ್ಯೂಬ್ ಸೇರಿ ಯಾವುದೇ ಜಾಲತಾಣಗಳಲ್ಲಿ ಖಾತೆಯನ್ನು ಹೊಂದಿಲ್ಲ ಎಂಬ ಅಂಶ ಗೊತ್ತಾಗಿದೆ.
Advertisement