Advertisement

ಗೆಳೆಯನಿಂದ ಮೋಸ: ಭೋಜ್ ಪುರಿ ನಟಿ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣು

05:44 PM Aug 07, 2020 | Nagendra Trasi |

ಮುಂಬೈ:ಇತ್ತೀಚೆಗೆ ಸಿನಿಮಾ ರಂಗ ನಟ, ನಟಿಯರ ಸಾವಿನ ಪ್ರಕರಣ ಹೆಚ್ಚುತ್ತಲೇ ಇದ್ದು, ಇದೀಗ ಭೋಜ್ ಪುರಿ ಸಿನಿಮಾ ನಟಿ ಅನುಪಮಾ ಪಾಠಕ್ ಮುಂಬೈ ನಿವಾಸದಲ್ಲಿ ಸಾವಿಗೀಡಾಗಿರುವ ಘಟನೆ ಶುಕ್ರವಾರ(ಆ.07-2020) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಮೀರಾ ರೋಡ್ ಪ್ರದೇಶದಲ್ಲಿನ ಬಾಡಿಗೆ ಫ್ಲ್ಯಾಟ್ ನಲ್ಲಿ ಅನುಪಮಾ(40ವರ್ಷ) ವಾಸವಾಗಿದ್ದು, ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟಿ ಪಾಠಕ್ ಬಿಹಾರ ಮೂಲದವರಾಗಿದ್ದು, ಹಲವಾರು ಭೋಜ್ ಪುರಿ ಹಾಗೂ ಟಿವಿ ಶೋಗಳಲ್ಲಿ ಅಭಿನಯಿಸಿದ್ದರು ಎಂದು ವರದಿ ತಿಳಿಸಿದೆ.

ಭೋಜ್ ಪುರಿ ನಟಿ ಸಾಯುವ ಮೊದಲು ಫೇಸ್ ಬುಕ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ತಾನು ಮೋಸ ಹೋಗಿದ್ದು, ಯಾರನ್ನೂ ನಂಬದಿರುವ ಸ್ಥಿತಿಗೆ ಬಂದಿದ್ದೇನೆ ಎಂದು ಅಲವತ್ತುಕೊಂಡಿದ್ದಾರೆ. ಪತಿ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿ ತಾನು ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದು, ಸೂಸೈಡ್ ನೋಟ್ ಸಿಕ್ಕಿರುವುದಾಗಿ ಹೇಳಿದರು.

ಗೆಳೆಯನೊಬ್ಬ ಮೋಸ ಮಾಡಿದ್ದು, ಆತ ತನ್ನ ದ್ವಿಚಕ್ರ ವಾಹನ ಮರಳಿಸಿಲ್ಲ ಎಂದು ನಟಿ ದೂರಿದ್ದಾರೆ. ಅಲ್ಲದೇ ಆಕೆ ಬಳಿ ಇದ್ದ ಹಣವೆಲ್ಲಾ ಖಾಲಿಯಾಗಿದ್ದು, ಕೋವಿಡ್ 19ನ ಲಾಕ್ ಡೌನ್ ನಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next