Advertisement

ಭೀಷ್ಮನಿಗೆ ಬಲ ಯುದ್ಧ ಟ್ಯಾಂಕ್‌ಗೆ 3ನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ

08:00 AM Aug 21, 2017 | Harsha Rao |

ನವದೆಹಲಿ: ಗಡಿ ಪ್ರಕ್ಷುಬ್ಧತೆ, ಯುದ್ಧ ಸನ್ನದ್ಧತೆ, ನೆರೆರಾಷ್ಟ್ರಗಳೊಂದಿಗಿನ ವಾಕ್ಸಮರಗಳ ನಡುವೆಯೇ ಭೂಸೇನೆಯ ಪ್ರಮುಖ ಯುದ್ಧ ಟ್ಯಾಂಕ್‌, ಟಿ-90 “ಭೀಷ್ಮ’ನಿಗೆ ಮತ್ತಷ್ಟು ಬಲ ತುಂಬಲು ಸೇನೆ ಮುಂದಾಗಿದೆ. ಈ ಟ್ಯಾಂಕ್‌ಗಳಲ್ಲಿ ಗನ್‌ನಿಂದ ಸಿಡಿಸಲಾಗುವ ಮೂರನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. 

Advertisement

ಸದ್ಯ ಭೀಷ್ಮ ಟ್ಯಾಂಕ್‌ಗಳಲ್ಲಿ ಇನ್ವಾರ್‌ ಹೆಸರಿನ ಲೇಸರ್‌ ನಿರ್ದೇಶಿತ ಕ್ಷಿಪಣಿ ವ್ಯವಸ್ಥೆ ಇದೆ. ಇನ್ವಾರ್‌ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಳದೊಂದಿಗೆ ಮೂರನೇ ತಲೆಮಾರಿನ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನೂ ಸೇರ್ಪಡೆಗೊಳಿಸುವುದು ಗುರಿಯಾಗಿದೆ ಎಂದು ಯೋಜನೆ ಕುರಿತಂತೆ ಸೇನೆ ಮಾಹಿತಿ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶ ತೀವ್ರ ಭದ್ರತಾ ಸವಾಲುಗಳನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸೇನೆಯ ದಾಳಿ ಸಾಮರ್ಥ್ಯ ವೃದ್ಧಿಗೆ ರಕ್ಷಣಾ ಇಲಾಖೆ ತೀರ್ಮಾನಿಸಿತ್ತು. ಈಗಾಗಲೇ ಕೇಂದ್ರ ಸರ್ಕಾರ ಸುಮಾರು 10 ವಿಧದ ಅಗತ್ಯ ರಕ್ಷಣಾ ಸಲಕರಣೆ ಖರೀದಿಗೆ ಸೇನಾ ಉಪಮುಖ್ಯ ಸ್ಥರಿಗೆ ಸಂಪೂರ್ಣ ಹಣಕಾಸು ಅಧಿಕಾರವನ್ನು ನೀಡಿದೆ.

ಹೇಗಿದೆ ಕ್ಷಿಪಣಿ?: ಹೊಸ ಕ್ಷಿಪಣಿ ವ್ಯವಸ್ಥೆ ರಾತ್ರಿ, ಅತಿ ಎತ್ತರದ ಪ್ರದೇಶದಲ್ಲೂ ಕೂಡ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 8 ಕಿ.ಮೀ. ದೂರದ ಗುರಿಯನ್ನು ಕರಾರುವಕ್ಕಾಗಿ ಛೇದಿಸಬಲ್ಲದು. ಭೀಷ್ಮ ಟ್ಯಾಂಕ್‌ನ 125 ಎಂ.ಎಂ.ನ ಗನ್‌ ಬ್ಯಾರೆಲ್‌ ಮೂಲಕ ಇದನ್ನು ಉಡಾಯಿಸಲಾಗುತ್ತದೆ. ಚಲಿಸುತ್ತಿರುವ ಗುರಿಯನ್ನೂ ಛೇದಿಸಬಲ್ಲದು. ಇದರೊಂದಿಗೆ ಟ್ಯಾಂಕ್‌ಗಳ ಎಂಜಿನ್‌ ಸಾಮರ್ಥ್ಯವನ್ನೂ 1200ರಿಂದ 1500 ಅಶ್ವಶಕ್ತಿಯಷ್ಟು ಇಡಲು ತೀರ್ಮಾನಿಸಲಾಗಿದೆ.

ಲೇಹ್‌ನಲ್ಲಿ ರಾವತ್‌ ಪರಿಶೀಲನೆ: ಲಡಾಖ್‌ನ ಪನುಗಾಂಗ್‌ ಟಿಎಸ್‌ಒ ಸರೋವರ ಸನಿಹ ಚೀನ ಸೈನಿಕರು ಭಾರತದ ಗಡಿಯೊಳಕ್ಕೆ ನುಗ್ಗಿ ಕಲ್ಲೆಸೆತ ನಡೆಸಿದ ಪ್ರಕರಣದ ಬೆನ್ನಲ್ಲೇ ಸೇನಾ ಮುಖ್ಯಸ್ಥ  ಜ| ಬಿಪಿನ್‌ ರಾವತ್‌ ಅವರು ಲೇಹ್‌ನ ನೈಜ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದಾರೆ. ಜತೆಗೆ ಭದ್ರತಾ ಪರಾಮರ್ಶೆ ನಡೆಸಿದ್ದಾರೆ. ಲಡಾಖ್‌ನಲ್ಲಿ ಸುಮಾರು 800 ಕಿ.ಮೀ. ವಿಸ್ತಾರಕ್ಕೆ ಭಾರತ ಗಡಿಯನ್ನು ಚೀನದೊಂದಿಗೆ ಹಂಚಿಕೊಂಡಿದ್ದು, ಇದರ ಉದ್ದಕ್ಕೂ ಕೈಗೊಂಡ ಭದ್ರತಾ ಕ್ರಮಗಳು, ಸಿದ್ಧತೆಗಳನ್ನು ವಾಯುಪಡೆಯೊಂದಿಗೆ ಸೇನೆಯ 14 ಕಾಪ್ಸ್‌ìನ ಕಮಾಂಡರ್‌ ಅವರು ಸೇನಾ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ವಿಶೇಷ ದಳ ಸೈನಿಕರಿಗೆ ಎಸಿ ಜಾಕೆಟ್‌
ಶೀಘ್ರ ವಿಶೇಷ ದಳದ ಸೈನಿಕರಿಗೆ ಎಸಿ ಜಾಕೆಟ್‌ ಪೂರೈಕೆಯಾಗ ಲಿದೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಹೇಳಿದ್ದಾರೆ. ವಿಶೇಷ ದಳಗಳ ಕಾರ್ಯಾಚ ರಣೆ ವೇಳೆ ದೇಹದ ಉಷ್ಣತೆ ವಿಪರೀತ ಏರುತ್ತದೆ. ಇದರಿಂದ ಸೈನಿಕರಿಗೆ ಸಮಸ್ಯೆ ಯಾಗುತ್ತದೆ. ಇದನ್ನು ತಡೆಗಟ್ಟಲು ವಾತಾನು ಕೂಲಿತ ಇರುವ ಜಾಕೆಟ್‌ ಪೂರೈಸಲಾಗುತ್ತದೆ. ಈ ಕುರಿತ ಪ್ರಾ ಯೋಗಿಕ ಪರೀಕ್ಷೆಗಳು ಈಗಾಗಲೇ ನಡೆದಿವೆ ಎಂದು ಹೇಳಿದ್ದಾರೆ.

Advertisement

ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಪಾರಮ್ಯ
ಕಾಶ್ಮೀರದಲ್ಲಿ ಉಗ್ರರ ಕಾರ್ಯಾಚರಣೆ ವಿರುದ್ಧ ಭದ್ರತಾ ಪಡೆಗಳು ಪಾರಮ್ಯ ಕಾಯ್ದುಕೊಂಡಿವೆ. ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಕೇಂದ್ರ ದೃಢ ಕ್ರಮಕ್ಕೆ ಬದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್‌ ಜೇಟಿÉ ಹೇಳಿದ್ದಾರೆ. ಆದಾಗ್ಯೂ ಕಾಶ್ಮೀರ ವಿಚಾರ ಸಮಸ್ಯೆಯಿಂದ ಕೂಡಿದ್ದು, ಗಡಿಯಾಚಿನಿಂದ, ಸ್ಥಳೀಯ ರಿಂದ ಉಗ್ರರಿಗೆ ಸಿಗುತ್ತಿರುವ ಬೆಂಬಲ ಸಮಸ್ಯೆ ತಂದೊ ಡ್ಡಿದೆ ಎಂದಿದ್ದಾರೆ. ಜತೆಗೆ ಅಪಮೌಲ್ಯದ ಬಳಿಕ ಪ್ರತ್ಯೇಕತಾವಾದಿ ಗಳಿಗೆ ಹಣದ ಕೊರತೆ ಎದುರಾಗಿದೆ. ಕಾಶ್ಮೀರದ ಪ್ರತ್ಯೇಕತಾವಾದಿಗಳು, ಮಾವೋವಾದಿಗಳಿಗೆ ಹಣದ ಕೊರತೆ ತೀವ್ರವಾಗಿ ಉಂಟಾ ಗಿದ್ದು, ದೇಶ ವಿರೋಧಿ ಚಟುವಟಿಕೆಗಳು ಕಡಿಮೆಯಾಗಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next