Advertisement
‘ಭೀಮ್ ಕುಂಡ್’ ಅನ್ನು ‘ನೀಲ ಕುಂಡ್’ ಎಂದೂ ಕರೆಯುತ್ತಾರೆ. ಈ ಕೊಳವನ್ನು ಬಂಡೆಕಲ್ಲುಗಳ ಗುಹೆಯ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಈ ಸ್ಥಳವನ್ನು ಆಧ್ಯಾತ್ಮಿಕ ಸ್ಥಳವೆಂದು ಪರಿಗಣಿಸಲಾಗಿದೆ. ಅಲ್ಲದೆ ಅನೇಕ ಋಷಿ ಮುನಿಗಳು ಮತ್ತು ತಪಸ್ವಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಥಳವನ್ನು ಭಾರತದ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.
Related Articles
Advertisement
ಯಾರಿಗೂ ತಿಳಿದಿಲ್ಲ ಕೆರೆಯ ಆಳ:ಈ ಕೆರೆಯ ರಹಸ್ಯವೆಂದರೆ ಕೆರೆ ಎಷ್ಟು ಆಳವಿದೆ ಎಂದು ತಿಳಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಅಲ್ಲದೆ ಈ ನಿಗೂಢ ಕೊಳದ ಆಳವನ್ನು ಕಂಡುಹಿಡಿಯಲು ಸ್ಥಳೀಯ ಆಡಳಿತದಿಂದ ವಿದೇಶಿ ವಿಜ್ಞಾನಿಗಳು ಮತ್ತು ಡಿಸ್ಕವರಿ ಚಾನೆಲ್ ಸೇರಿದಂತೆ ಹಲವು ತಂಡ ಪ್ರಯತ್ನ ಮಾಡಿತ್ತು ಅಲ್ಲದೆ ವಿದೇಶಿ ವಿಜ್ಞಾನಿಗಳ ತಂಡವೂ ಈ ಕೆರೆಯ ಅಳವನ್ನು ಪತ್ತೆಹಚ್ಚುವ ಕಾರ್ಯ ನಡೆಸಿತ್ತು ಆದರೆ 200 ಮೀಟರ್ ಆಳಕ್ಕೆ ಹೋದ ತಂಡ ಮತ್ತೆ ವಾಪಸ್ಸಾಗಿದೆ. ಇನ್ನೊಂದು ವಿಚಾರ ಏನೆಂದರೆ ಕೆರೆಯ ಆಳಕ್ಕೆ ಹೋದಂತೆ ನೀರಿನ ಸೆಳೆತ ಹೆಚ್ಚಿದೆ ಎಂದು ಹೇಳಲಾಗಿದೆ ಇದರಿಂದ ಕೆರೆಯ ತಳಕ್ಕೆ ಹೋಗಲು ಯಾರಿಂದಲೂ ಸಾಧ್ಯವಾಗಿಲ್ಲ. ಈಗಲೂ ಈ ಕೆರೆಯಲ್ಲಿ ಅನ್ವೇಷಣೆಗಳು ನಡೆಯುತ್ತಿರುತ್ತವೆ ಎಂದು ಹೇಳಲಾಗುತ್ತಿದೆ.
ಈ ಕೆರೆಯಲ್ಲಿ ಎಲ್ಲಾ ಸಮಯದಲ್ಲೂ ನೀರು ಒಂದೇ ಮಟ್ಟದಲ್ಲಿ ಇರುತ್ತದೆಯಂತೆ ಒಂದು ವೇಳೆ ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪ ನಡೆಯುತ್ತದೆ ಎಂದಾದರೆ ಈ ಕೆರೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆಯಂತೆ ಇದಕ್ಕೆ ಉದಾಹರಣೆ 2004 ರಲ್ಲಿ ಸುನಾಮಿ ಸಂಭವಿಸಿದಾಗ, ಅನೇಕ ಜನರು ಪ್ರಾಣ ಕಳೆದುಕೊಂಡರು. ಆದರೆ 2004ರ ಸುನಾಮಿಗೂ ಮುನ್ನ ಭೀಮಕುಂಡದ ನೀರಿನ ಮಟ್ಟ ಏಕಾಏಕಿ ಸುಮಾರು 15 ಮೀಟರ್‌ಗಳಷ್ಟು ಹೆಚ್ಚಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಷ್ಟುಮಾತ್ರವಲ್ಲದೆ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಭೀಮಕುಂಡದ ನೀರಿನ ಮಟ್ಟ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ. ಮೃತದೇಹ ಮೇಲೆ ಬರಲ್ಲ:
ಸಾಮಾನ್ಯವಾಗಿ ಕೆರೆ ಅಥವಾ ಬಾವಿಗಳಲ್ಲಿ ಮುಳುಗಿ ಮೃತಪಟ್ಟರೆ ಅವರ ದೇಹ ಎರಡು ಮೂರೂ ದಿನಗಳಲ್ಲಿ ನೀರಿನಿಂದ ಮೇಲಕ್ಕೆ ಬರುತ್ತದೆ ಆದರೆ ಈ ಕೆರೆಯಲ್ಲಿ ಆ ರೀತಿ ನಡೆಯುವುದಿಲ್ಲ ಎನ್ನುತ್ತಾರೆ ಇಲ್ಲಿನ ಜನ ಬದಲಾಗಿ ದೇಹ ನೀರಿನ ಆಳಕ್ಕೆ ಹೋಗುತ್ತದೆಯಂತೆ.
ಭೀಮಕುಂಡ್ ಮಧ್ಯಪ್ರದೇಶದ ಛತ್ತರ್‌ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಛತ್ತರ್‌ಪುರದಿಂದ ಬಾಡಿಗೆ ವಾಹನಗಳನ್ನು ಗೊತ್ತುಪಡಿಸಿ ಭೀಮಕುಂಡ್ ತಲುಪಬಹುದು ಅಥವಾ ಛತ್ತರ್‌ಪುರದಿಂದ ಬಸ್ ಮೂಲಕವೂ ಬರಬಹುದು. ವಿಮಾನ ಹಾಗೂ ರೈಲಿನ ಮೂಲಕ ಬರುವವರು ಖಜುರಾಹೊ ಮೂಲಕ ಬರಬಹುದು ಇಲ್ಲಿಂದ 75 ಕಿಮೀ ದೂರದಲ್ಲಿದೆ. ಭೇಟಿ ನೀಡಲು ಉತ್ತಮ ಸಮಯ:
ಭೀಮಕುಂಡ್‌ಗೆ ಭೇಟಿ ನೀಡಲು ಫೆಬ್ರವರಿ-ಜೂನ್ ಉತ್ತಮ ಸಮಯವಾಗಿದ್ದು ಇದಲ್ಲದೆ ಅಕ್ಟೋಬರ್-ನವೆಂಬರ್ ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. *ಸುಧೀರ್, ಪರ್ಕಳ