Advertisement
2020 ನವೆಂಬರ್ 2 ರಂದು ನಡೆದಿದ್ದ ಭೀಮಾ ತೀರದ ಇನ್ನೋರ್ವ ನಟೋರಿಯಸ್ ರೌಡಿಶೀಟರ್ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶಸ್ತ್ರಾಸ್ತ್ರ ದಾಳಿ ಪ್ರಕರಣದ ಪ್ರಮುಖ ಆರೋಪಿ ವಿಮಲಾಬಾಯಿ ಚಡಚಣ ಹಾಗೂ ಸಹಚರ ಸೋನ್ಯಾ ರಾಠೋಡ ನ್ಯಾಯಾಲಯಕ್ಕೆ ಶರಣಾದ ಆರೋಪಿಗಳು.
Related Articles
Advertisement
ಇದನ್ನೂ ಓದಿ: ಲಾನ್ ಬೌಲ್ಸ್: ದ. ಆಫ್ರಿಕಾ ವಿರುದ್ಧ ವನಿತಾ ತಂಡದ ಚಿನ್ನದ ಬೇಟೆ
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಭೈರಗೊಂಡ ಮೇಲಿನ ದಾಳಿ ಪ್ರಕರಣದಲ್ಲಿ ವಿಮಲಾಬಾಯಿ ಎರಡನೇ ಆರೋಪಿಯಾಗಿದ್ದು, ಘಟನೆ ಬಳಿಕ 39ನೇ ಆರೋಪಿ ಸೋನ್ಯಾ ರಾಠೋಡ ಸೇರಿ ಇತರೆ ಆರೋಪಿಗಳೊಂದಿಗೆ ಪರಾರಿಯಾಗಿ, ತಲೆ ಮರೆಸಿಕೊಂಡಿದ್ದಳು.
ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಾವು ನಡೆಸಿದ ಶಾಂತಿಸಭೆಯಲ್ಲಿ ಚಡಚಣ ದಂಪತಿ ಶರಣಾಗತಿಗೆ ತಾಕೀತು ಮಾಡಿದ್ದರು.
ಇದರ ಬೆನ್ನಲ್ಲೇ ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಿದ್ದ ಎಸ್ಪಿ ಆನಂದಕುಮಾರ, ತುರ್ತಾಗಿ ಶರಣಾಗದಿದ್ದರೆ ಚಡಚಣ ಕುಟುಂಬದ ವಿಮಲಾಬಾಯಿ ಹಾಗೂ ಮಲ್ಲಿಕಾರ್ಜುನ ದಂಪತಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ನೀಡಿದ್ದರು.
ಎಸ್ಪಿ ಅವರ ಎಚ್ಚರಿಕೆ ಬೆನ್ನಲ್ಲೇ ಸಹಚರ ಸೋನ್ಯಾ ರಾಠೋಡ ಜೊತೆ ವಿಮಲಾಬಾಯಿ ಮಂಗಳವಾರ ವಿಜಯಪುರ ಜಿಲ್ಲಾ 4ನೇ ಜೆಎಂಎಫ್‌ಸಿ ಕೋರ್ಟ್‌ಗೆ ಶರಣಾಗಿದ್ದಾರೆ.