Advertisement

14-15ರಂದು ಭೀಮಪಲಾಸ ಸಂಗೀತೋತ್ಸವ

10:19 AM May 12, 2022 | Team Udayavani |

ಹುಬ್ಬಳ್ಳಿ: ಭಾರತರತ್ನ ಪಂ| ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ಭೀಮಪಲಾಸ ಸಂಗೀತೋತ್ಸವ ಗಾಯನ-ವಾದನಗಳ ಸಮಾರಂಭ ಮೇ 14 ಹಾಗೂ 15 ರಂದು ಇಲ್ಲಿನ ಪಂ|ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಯಲಿದೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಕ್ಷಮತಾ ಸಂಸ್ಥೆ, ಜೆ.ಬಿ ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಕೇಂದ್ರ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೇ 14ರಂದು ಸಂಜೆ 5:30 ರಿಂದ ರಾತ್ರಿ 11 ಗಂಟೆಯವರೆಗೆ ಹಾಗೂ ಮೇ 15ರಂದು ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಈ ಸಂಗೀತೋತ್ಸವದಲ್ಲಿ ರಾಷ್ಟ್ರದ ಪ್ರಖ್ಯಾತ 21ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಹಿರಿಯ ಕಲಾವಿದರ ಜುಗಲ್‌ಬಂದಿ, ಸೋಲೋ ಪ್ರದರ್ಶನ ಪ್ರಮುಖ ಆಕರ್ಷಣೀಯವಾಗಿವೆ ಎಂದರು.

ಹಿರಿಯ ಕಲಾವಿದರು, ಉದಯೋನ್ಮುಖ ಹಾಗೂ ಸ್ಥಳೀಯ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಪಂ| ಗಣಪತಿ ಭಟ್ಟ ಹಾಸಣಗಿ, ಪಂ|ಜಯತೀರ್ಥ ಮೇವುಂಡಿ, ವಿದುಷಿ ಗೌರಿ ಪಠಾರೆ, ರಮಾಕಾಂತ ಗಾಯಕವಾಡ, ಆದಿತ್ಯ ಮೋಡಕ, ವಿನಾಯಕ ಹೆಗಡೆ ಅವರಿಂದ ಗಾಯನ, ವಿದುಷಿ ಕಲಾ ರಾಮನಾಥ್‌ ಅವರಿಂದ ವಯೋಲಿನ್‌, ಪಂ|ಪ್ರವೀಣ ಗೋಡಖೀಂಡಿ, ಷಡಜ್‌ ಗೋಡಖೀಂಡಿ ಅವರಿಂದ ಕೊಳಲು ವಾದನ, ವಿದ್ವಾನ್‌ ಯು. ರಾಜೇಶ ಅವರಿಂದ ಮ್ಯಾಡೋಲಿನ್‌, ವಿದುಷಿ ದೇಬಸ್ಮಿತಾ ಭಟ್ಟಾಚಾರ್ಯ ಅವರಿಂದ ಸರೋದ ವಾದನ ನಡೆಯಲಿದೆ.

ಸಹ ಕಲಾವಿದರಾದ ಪಂ|ರಘುನಾಥ ನಾಕೋಡ, ಓಜಸ್‌ ಆಧಿಯಾ, ದೇಬಜಿತ ಪಟಿತುಂಡಿ, ಶ್ರೀಧರ ಮಾಂಡ್ರೆ, ಡಾ|ಉದಯ ಕುಲಕರ್ಣಿ ತಬಲಾ ಸಾಥ್‌ ನೀಡುವರು. ಪಂ|ವ್ಯಾಸಮೂರ್ತಿ ಕಟ್ಟಿ, ಗುರುಪ್ರಸಾದ ಹೆಗಡೆ, ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್‌ ನೀಡುವರು. ರವಿವಾರ ನಿರಂತರವಾಗಿ ಕಾರ್ಯಕ್ರಮ ನಡೆಯುವ ನಿಟ್ಟಿನಲ್ಲಿ ಕಲಾಸಕ್ತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಊಟ-ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಸಂಸ್ಥೆ ನಿರ್ದೇಶಕ ಮುರಳಿಧರ ಮಾಳಗಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಪಂ| ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ 2021 ಫೆಬ್ರವರಿಯಿಂದ ಇಲ್ಲಿಯವರೆಗೆ ರಾಜ್ಯದ ಕುಮಟಾ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಶಿವಮೊಗ್ಗ, ಕುಂದಾಪುರ, ಪುತ್ತೂರು, ಉಡುಪಿ, ಗದಗ, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಇನ್ನೂ ಹಲವು ಕಡೆ ಬೇಡಿಕೆಗಳು ಬಂದಿವೆ.

ಈ ಕಾರ್ಯಕ್ರಮವನ್ನು ವಿವಿಡ್‌ಲಿಲಿಯ ಮೂಲಕ ನೇರ ಪ್ರಸಾರದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ ಸಹಾಯಕ ಚಂದ್ರಶೇಖರ ಬೆಳವಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next