ಶಿರಸಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಕೇವಲ ರಾಜಕೀಯ ವ್ಯಕ್ತಿ ಅಲ್ಲ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕ್ರತಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ಇರುವ ಅವರೇ ಮೇಲ್ಮನೆಗೆ ಆಯ್ಕೆ ಆಗಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಭರವಸೆ ವ್ಯಕ್ತಪಡಿಸಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಕಾಂಗ್ರೆಸ್ ಮಡಿಲಿನಲ್ಲೇ ವಿಧಾನ ಪರಿಷತ್ ಇರುವ ಕ್ಷೇತ್ರ. ಈ ಬಾರಿ ಕೂಡ ಭೀಮಣ್ಣ ಅವರ ಗೆಲುವು ಖಚಿತ. ಹಿಂದಿನ ಶಾಸಕರು ಒಮ್ಮನಿಸಿನಿಂದ ಗೆಲ್ಲುತ್ತದೆ. ದೇಶಪಾಂಡೆ ಅವರೂ 1ನೇ ತಾರೀಖಿನಿಂದ ಓಡಾಟ ಮಾಡುತ್ತಿದ್ದಾರೆ. ಎಲ್ಲರೂ ಒಂದಾಗಿ ಕೆಲಸ ಕೇಳುತ್ತಿದ್ದಾರೆ ಎಂದರು.
ಪಂಚಾಯತ್‍ಗೆ ಶಕ್ತಿಯನ್ನು ವಿಕೇಂದ್ರೀಕರಣ ಅವಕಾಶದ ಮೂಲಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಜಾರಿಗೆ ತಂದರೂ ಅದನ್ನು ರಾಷ್ಟ್ರಮಟ್ಟದಕ್ಕೆ ಜಾರಿಗೆ ತಂದವರು ರಾಜೀವಗಾಂಧಿ ಹಾಗೂ ಆಗಿನ ಕಾಂಗ್ರೆಸ್ ಸರಕಾರ. ಕೇಂದ್ರ, ರಾಜ್ಯ ಸರಕಾರದ ವೈಫಲ್ಯ ಇಟ್ಟುಕೊಂಡು ಮತ ಕೇಳುತ್ತೇವೆ. ಕಾಂಗ್ರೆಸ್ ಹಾಗೂ ಭೀಮಣ್ಣ ನಾಯ್ಕ ಅವರ ವಯುಕ್ತಿಕ ಬಳಕೆ ಗೆಲುವಿಗೆ ಕಾರಣವಾಗಲಿದೆ.
ಇದನ್ನೂ ಓದಿ:ಶಾಂತಿಯುತ ಸಮಾಜಕ್ಕೆ ಕಾನೂನು ಅರಿಯಿರಿ
ಮೇಲ್ಮನೆ ಎಂಬುದು ಪ್ರಬುದ್ದರ ತಾಣ. ಇದು ಮತದಾರರಿಗೆ ಗೊತ್ತು. ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಭೀಮಣ್ಣ ಸೀಮಿತವಾದವರಲ್ಲ. ದೇಶಪಾಂಡೆ, ಬಂಗಾರಪ್ಪ ಅವರ ಜೊತೆಗಿನ ಅನುಭವ ಇದೆ. ಈ ಜಿಲ್ಲೆಯ ಧ್ವನಿಯಾಗಿ ಕೂಡ ಕಾರ್ಯ ಮಾಡುತ್ತಾರೆ ಎಂದರು.
ಗ್ರಾಮ ಪಂಚಾಯತ್ ಗಳಿಗೆ ಅನುದಾನ ಕೊರತೆ ಇದೆ. ಕಾಂಗ್ರೆಸ್ ಜಾರಿಗೆ ತಂದ ಉದ್ಯೋಗ ಖಾತ್ರಿಯಿಂದಲೇ ಪಂಚಾಯತ ನಡೆಯುತ್ತಿದೆ ಎಂದರು.
ಈ ವೇಳೆ ಜಗದೀಶ ಗೌಡ, ಶ್ರೀಪಾದ ಹೆಗಡೆ, ಬಸವರಾಜ್ ದೊಡ್ಮನಿ, ಸತೀಶ ನಾಯ್ಕ, ಕುಮಾರ ಜೋಶಿ, ನಾಗರಾಜ ಮಡಿವಾಳ, ರಂಜನಾ ಚನ್ನಯ್ಯ, ಗಣೇಶ ದಾವಣಗೆರೆ ಇತರರು ಇದ್ದರು