Advertisement

ನ.14ರವರೆಗೆ ಭೀಮ ಮಹಾ ಉತ್ಸವ

11:34 AM Oct 28, 2018 | |

ಬೆಂಗಳೂರು: ಜ್ಯುವೆಲ್ಲರಿ ಮಾರಾಟ ಕ್ಷೇತ್ರದ ಭೀಮ ಜ್ಯುವೆಲ್ಲರ್ ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ಪ್ರಯುಕ್ತ ನ.14ರವರೆಗೆ ರಾಜ್ಯದ ತನ್ನ ಎಲ್ಲ ಮಳಿಗೆಗಳಲ್ಲೂ ಭೀಮ ‘ಮಹಾ ಉತ್ಸವ’ ಆಭರಣಗಳ ಪ್ರದರ್ಶನ, ಮಾರಾಟವನ್ನು  ಹಮ್ಮಿಕೊಂಡಿದೆ.

Advertisement

ಈ ಅವಧಿಯಲ್ಲಿ ಗ್ರಾಹಕರು ಖರೀದಿಸಿದ ಆಭರಣಗಳಿಗೆ ಲಕ್ಕಿ ಡ್ರಾ ಕೂಪನ್‌ಗಳನ್ನು ನೀಡಲಾಗುವುದು. ಲಕ್ಕಿ ಡ್ರಾನಲ್ಲಿ ಬಂಪರ್‌ ಬಹುಮಾನ ವಿಜೇತ ಗ್ರಾಹಕರ ಟಾಟಾ ಟಿಯಾಗೊ ಕಾರನ್ನು ಪಡೆಯಲಿದ್ದಾರೆ. ಇಷ್ಟೇ ಅಲ್ಲದೆ, ಪ್ರತಿ ವಾರ ಟಿವಿಎಸ್‌ ಜ್ಯೂಪಿಟರ್‌ ಗೆಲ್ಲುವ ಅವಕಾಶವೂ ಇದೆ. ಈ ಮಹಾ ಉತ್ಸವ ಮಾರಾಟದಲ್ಲಿ ಒಟ್ಟು 11 ಕಾರುಗಳನ್ನು ಹಾಗೂ 55 ಸ್ಕೂಟರ್‌ಗಳನ್ನು ಇಡಲಾಗಿದೆ.

ಟಾಟಾ ಟಿಯಾಗೊ ಲಕ್ಕಿ ಡ್ರಾನಲ್ಲಿ  ಪಾಲ್ಗೊಳ್ಳಲಿಚ್ಛಿಸುವ ಗ್ರಾಹಕರು ಕನಿಷ್ಟ  50 ಸಾವಿರ ಮೌಲ್ಯದ ಆಭರಣ ಹಾಗೂ ಟಿವಿಎಸ್‌ ಜ್ಯೂಪಿಟರ್‌ ಗೆಲ್ಲುವ ಅವಕಾಶ ಪಡೆಯುವ ಗ್ರಾಹಕರು ಕನಿಷ್ಟ 25 ಸಾವಿರ ರೂ. ಮೌಲ್ಯದ ವಹಿವಾಟು ನಡೆಸಿರಬೇಕು. ಈ ಕೊಡುಗೆ ನಾಣ್ಯಗಳು, ಬಾರ್‌ಗಳು ಹಾಗೂ ಬುಲಿಯನ್‌ ಖರೀದಿಸಿದ ಗ್ರಾಹಕರಿಗೆ ಅನ್ವಯಿಸುವುದಿಲ್ಲ. 

ಇದರ ಜೊತೆಯಲ್ಲಿ ಚಿನ್ನದ ಆಭರಣಗಳ ಮೇಲೆ ಆಕರ್ಷಕ ಕೊಡುಗೆಗಳು, ವಜ್ರದ ಆಭರಣಗಳ ಪ್ರತಿ ಕ್ಯಾರೆಟ್‌ ಮೇಲೆ 7500 ರೂ. ರಿಯಾಯಿತಿ, ಸಾಲಿಟೇರ್‌ ಬ್ರಾÂಂಡ್‌ ಮೇಲೆ ಆಕರ್ಷಕ ಕೊಡುಗೆಗಳು ಹಾಗೂ ಬೆಳ್ಳಿ ಆಭರಣ ಅಥವಾ ವಸ್ತುಗಳ ಮೇಲೆ ಶೇ.5 ರಷ್ಟು ಡಿಸ್ಕೌಂಟ್‌ ಸೌಲಭ್ಯ ಸಹ ನೀಡಲಾಗುತ್ತದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಈ ಮಹಾ ಉತ್ಸವದಲ್ಲಿ ವಿಜೇತರಾದ ಗ್ರಾಹಕರು ಬಹುಮಾನಗಳನ್ನು ಸೀಕರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next