Advertisement

ಸಿಎಎ ವಿರೋಧಿ ಪ್ರತಿಭಟನೆ; ಭೀಮ್ ಆರ್ಮಿ ಮುಖ್ಯಸ್ಥ ಆಜಾದ್ ಗೆ ಷರತ್ತುಬದ್ಧ ಜಾಮೀನು

09:10 AM Jan 16, 2020 | Nagendra Trasi |

ನವದೆಹಲಿ: ದಿಲ್ಲಿಯ ದರ್ಯಾಗಂಜ್ ಪ್ರದೇಶದಲ್ಲಿ ಡಿಸೆಂಬರ್ 20ರಂದು ಪೌರತ್ವ ತಿದ್ದುಪಡಿ ಕಾಯ್ದೆಇ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಸಂಭವಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಗೆ ಬುಧವಾರ ತೀಸ್ ಹಜಾರಿ ಕೋರ್ಟ್ ಜಾಮೀನು ನೀಡಿದೆ.

Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಆಜಾದ್ ಪ್ರಚೋದನಕಾರಿ ಭಾಷಣ ಮಾಡಿರುವುದಾಗಿ ಆರೋಪಿಸಿ ದಿಲ್ಲಿ ಪೊಲೀಸರು ಬಂಧಿಸಿದ್ದರು.

ಭೀಮ್ ಆರ್ಮಿ ಮುಖ್ಯಸ್ಥ ಆಜಾದ್ ಗೆ ಅಡಿಷನಲ್ ಸೆಷನ್ಸ್ ಜಡ್ಜ್ ಕಾಮಿನಿ ಲಾವೂ ಅವರು ಕೆಲವೊಂದು ಕಠಿಣ ಷರತ್ತಿನ ಆಧಾರದ ಮೇಲೆ ಜಾಮೀನು ನೀಡಿದ್ದಾರೆ. ಆಜಾದ್ ನಾಲ್ಕು ವಾರಗಳ ಕಾಲ ದಿಲ್ಲಿಯಲ್ಲಿ ವಾಸ್ತವ್ಯ ಹೂಡುವಂತಿಲ್ಲ. ಫೆಬ್ರುವರಿ 16ರವರೆಗೆ ಯಾವುದೇ ಧರಣಿ (ಪ್ರತಿಭಟನೆ) ಕೈಗೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿ 25 ಸಾವಿರ ರೂಪಾಯಿ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿದೆ ಎಂದು ವರದಿ ತಿಳಿಸಿದೆ.

ಆಜಾದ್ ಜಾಮೀನು ಅರ್ಜಿ ವಿಚಾರಣೆ ವೇಳೆ ವಕೀಲ ಮಹಮೂದ್ ಪ್ರಾಚಾ ಅವರು, ತಮ್ಮ ಕಕ್ಷಿದಾರ ಆಜಾದ್ ಗೆ ಉತ್ತರಪ್ರದೇಶದಲ್ಲಿ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿದರು. ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಚಾರ್ಜ್ ಶೀಟ್ ಹಾಕುವವರೆಗೆ ಪ್ರತಿ ಶನಿವಾರ ಆಜಾದ್ ಉತ್ತರಪ್ರದೇಶದ ಸಹರಾನ್ ಪುರ್ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂದು ಕೋರ್ಟ್ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next