Advertisement

ಗಾಂಧಿ ಚಿತ್ರ ಪ್ರದರ್ಶನಕ್ಕೆ ಸಾಹಿತಿ-ಕಲಾವಿದರ ಮೆಚ್ಚುಗೆ

03:16 PM Nov 01, 2019 | Naveen |

ಬೀದರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಅವರ ಅಪೂರ್ವ ಛಾಯಾಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ನಗರದ ಸಾಹಿತಿಗಳು ಮತ್ತು ಕಲಾವಿದರು ಕೂಡ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದರು. ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ, ಜಾನಪದ ವಿದ್ವಾಂಸ ಜಗನ್ನಾಥ ಹೆಬ್ಟಾಳೆ, ರಂಗಕರ್ಮಿ ಎಂ.ಎಸ್‌.ಮನೋಹರ, ಸಾಹಿತಿ ಅತಿವಾಳೆ, ಜಾನಪದ ಕಲಾವಿದ ಸುನೀಲ್‌ ಕಡ್ಡೆ, ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಲೇಖಕಿ ಪಾರ್ವತಿ ಸೋನಾರೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ|ರಾಜಕುಮಾರ ಹೆಬ್ಟಾಳೆ ಹಾಗೂ ಇತರರು ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ
ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಜೀವನ ದರ್ಶನಕ್ಕೆ ಏರ್ಪಡಿಸಿರುವ ಸಾಕ್ಷéಚಿತ್ರ ಪ್ರದರ್ಶನ ಗಾಂಧಿ ಸಂದೇಶ ವಾಹಿನಿಯಾಗಿದೆ. ಅಹಿಂಸೆಯ ಸಂದೇಶ ಜ್ವಲಿಸುವ ಪ್ರಪಂಚಕ್ಕೆ ತೋರ್ಬೆರಳಾಗಿದೆ. ಸರ್ವಧರ್ಮ ಸಾಮರಸ್ಯದಿಂದ ಮಾನವ ಪ್ರೀತಿಗೆ ನೆಲೆ, ಬೆಲೆ. ಎಲ್ಲಾ ಪ್ರಾರ್ಥನೆಗಳ ಸಾರ ಸತ್ಯ. ಸತ್ಯವೇ ದೇವರೆಂದ ಮೇಲೆ ಜಗಳಕ್ಕೆ ಮಾರ್ಗವಿಲ್ಲ. ವಿಶ್ವ ಶಾಂತಿಗೆ, ಗ್ರಾಮ ಜೀವನದ ಪುನರುಜ್ಜೀವನಕ್ಕೆ ಮಹಾತ್ಮ ಗಾಂಧಿ ಸಂದೇಶ ಎಂದೆಂದೂ ಪ್ರಸ್ತುತ. ಹೃದಯ ನ್ಯಾಯಾಲಯಕ್ಕೆ ಮಿಗಿಲಾದದ್ದು ಏನಿದೆ?, ಗಾಂಧಿ  ಸಂದೇಶ ಆಂತರಿಕ ಶುದ್ಧಿಗೆ ಮಾರ್ಗ ತೆರೆಯುತ್ತದೆ. ಸ್ವಚ್ಛ ಭಾರತಕ್ಕೂ ಮಹಾತ್ಮ ಗಾಂ ಧಿ ಜೀವನ ಸಂದೇಶ ಪೂರಕವಾಗಿದೆ ಎಂದು ಚಿಂತಕ ಗಂಗನಪಳ್ಳಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಜೀವನ ಮತ್ತು ಸಾಧನೆ ಕುರಿತು ಏರ್ಪಡಿಸಿದ ಈ ಛಾಯಾಚಿತ್ರ ಪ್ರದರ್ಶನವು ಇಂದಿನ ಪೀಳಿಗೆಗೆ ಉತ್ತಮ ಸಂದೇಶವಾಗಿದೆ. ಇಂದನ ಯುವಪೀಳಿಗೆ ತಪ್ಪು ಮಾರ್ಗದಲ್ಲಿ ನಡೆಯುತ್ತಿದೆ ಎಂದು ಹಿರಿಯರು ಹೇಳುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಯುವಜನತೆಗೆ ಉತ್ತಮ ಸಂದೇಶಗಳನ್ನು ನೀಡುತ್ತವಲ್ಲದೇ ಪರಿಣಾಮಕಾರಿಯಾಗಿಯೂ ಇರುತ್ತವೆ. ಇಡೀ ಜಗತ್ತಿನ ಕಣ್ಮನ ಸೆಳೆದ ಮಹಾತ್ಮ ಗಾಂಧಿ ಅವರ ಜೀವನ ಚರಿತ್ರೆಯನ್ನು ಎಲ್ಲರೂ ಓದುವುದು ಮತ್ತು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಇಂದಿನ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ಸಂದೇಶಗಳನ್ನು ಮುಟ್ಟಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಂತಹ ಕೆಲಸವನ್ನು ವಾರ್ತಾ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಎಂದು ಲೇಖಕಿ ಪಾರ್ವತಿ ಸೋನಾರೆ ತಿಳಿಸಿದರು.

Advertisement

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಎನ್‌ಈಕೆಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next