Advertisement
ಮತ ಎಣಿಕೆಯಲ್ಲಿ ಎಲ್ಲ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿರುವುದನ್ನು ಗಮನಿಸಿದ ಮುಖಂಡರಿಗೆ ಗೆಲವಿನ ಸೂಚನೆ ದೊರೆತ್ತಿತ್ತು. ಅಲ್ಲದೆ, ಮತ ಕೇಂದ್ರ ಹೊರಗಡೆ ನಿಂತ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
Related Articles
Advertisement
ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿದ ಪಕ್ಷದ ಮುಖಂಡರು ನಗರದ ಬಸವೇಶ್ವರ ವೃತ್, ಡಾ| ಬಿ.ಆರ್.ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಭಗತ್ ಸಿಂಗ್ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಗೆಲವಿನ ಸಂದೇಶ ಸಾರಿದರು.
ವಿವಿಧಡೆ ವಿಜಯೋತ್ಸವ: ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಜಿಲ್ಲಾದ್ಯಂತ ವಿಜಯೋತ್ಸವ ಆಚರಿಸಲಾಗಿದೆ. ಹುಮನಾಬಾದ, ಭಾಲ್ಕಿ, ಬಸವಕಲ್ಯಾಣ, ಔರಾದ, ಬೀದರ ಸೇರಿದಂತೆ ವಿವಿಧ ಗ್ರಾಮಗಳಲಿ ಕೂಡ ವಿಜಯೋತ್ಸ ಆಚರಿಸಲಾಗಿದೆ.
ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಎದರುಗಡೆ ಇರುವ ಅಂಗಡಿಗಳ ವ್ಯಾಪಾರ ವಹಿವಾಟು ಜೋರಾಗಿತ್ತು. ಫಲಿತಾಂಶ ಹಿನ್ನೆಲೆಯಲ್ಲಿ ನಗರಕ್ಕೆ ವಿವಿಧಡೆಯಿಂದ ಆಗಮಿಸಿದ್ದ ಕಾರ್ಯಕರ್ತರು ಮತ್ತು ವಿವಿಧ ಪಕ್ಷಗಳ ಅಭಿಮಾನಿಗಳು ಫಲಿತಾಂಶ ಮುಗಿಯುವವರೆಗೂ ತಂಪು ಪಾನೀಯ, ಮಜ್ಜಿಗೆ, ತೆಂಗಿನ ನೀರು, ಹಾಗೂ ಹೋಟೆಲ್ನಲ್ಲಿ ತಿಂಡಿ ತಿನ್ನುವ ಮೂಲಕ ದಿನ ಕಳೆದರು.
ಗಮನ ಸೆಳೆದ ಮಾಹಿತಿ ಬೋರ್ಡ್: ಲೋಕಸಭೆ ಚುಣಾವಣೆ ಬೂತ್ ಮಟ್ಟದ ಹಿಡಿದು ಮಾಹಿತಿ ನೀಡುವ ಇಲೆಕ್ಟ್ರಾನಿಕ್ ಬೋರ್ಡ್ ಪ್ರಥಮ ಬಾರಿಗೆ ಅಳವಡಿಸುರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಮತ ಎಣಿಕೆ ಕೇಂದ್ರ ಹೊರಗಡೆ ಅಳವಡಿಸಿದ್ದ ಸ್ಕ್ರೀನ್ ಬೈಕ್ ಸವಾರರು ಹಾಗೂ ಕಾರಿನಲ್ಲಿ ಸಂಚರಿಸುವ ಜನರು ತಮ್ಮ ವಾಹನ ನಿಲ್ಲಿಸಿ ಕುತೂಹಲದಿಂದ ಫಲಿತಾಂಶ ನೋಡಿ ಮುಂದೆ ಸಾಗುತ್ತಿರುವುದು ಕಂಡು ಬಂತು.