ಬೀದರ: ಗಡಿ ನಾಡು ಬೀದರ ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊಂದಿರುವ ಐತಿಹಾಸಿಕ ಪ್ರವಾಸಿ ನಗರ. ಇಲ್ಲಿನ ವೈಭವ ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲ ವಿದೇಶಿಗರು ಭೇಟಿ ನೀಡುತ್ತಾರೆ. ಆದರೆ, ಗೈಡ್ ಗಳ ಕೊರತೆಯಿಂದ ಸೂಕ್ತ ಮಾಹಿತಿ ಸಿಗದಿರುವುದು ಪ್ರವಾಸಿಗರಿಗೆ ನಿರಾಶೆಯನ್ನುಂಟು ಮಾಡುತ್ತಿದೆ.
Advertisement
ಕರುನಾಡಿನ ಮುಕುಟ ಬೀದರ ಎಂದಾಕ್ಷಣ ಅದ್ಭುತ ಪ್ರವಾಸಿ ತಾಣವೆಂದು ನೆನಪಾಗುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲಿಯೂ ಒಂದಿಲ್ಲೊಂದು ಸ್ಮಾರಕಗಳು, ಅಳಿದುಳಿದ ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸ ಮತ್ತು ಅರಸರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರತಿ ತಾಣಗಳು ತನ್ನದೇಯಾದ ಕಥೆ ಹೇಳುತ್ತವೆ. ಇದನ್ನು ಅರಿತುಕೊಳ್ಳಲು ದೇಶ-ವಿದೇಶದ ಸಂಶೋಧನಾ ವಿದ್ಯಾರ್ಥಿಗಳು, ತಜ್ಞರು ಮತ್ತು ಪ್ರವಾಸಿಗರು ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಇವರಿಗೆ ಮಹತ್ವ, ಹಿನ್ನೆಲೆಯನ್ನು ತಿಳಿಸುವವರು ಯಾರೂ ಇಲ್ಲದಂತಾಗಿದೆ.
Related Articles
Advertisement
ಹಿಂದೆ ಜಿಲ್ಲಾ ಧಿಕಾರಿಯಾಗಿದ್ದ ಡಾ| ಪಿ.ಸಿ. ಜಾಫರ್ ಅವರು ಗೈಡ್‌ಗಳ ಕೊರತೆ ನೀಗಿಸಲು ಮುಂದಾಗಿದ್ದರು. ಎಸ್‌ಸಿ-ಎಸ್‌ಟಿಯ 50 ಯುವಕರಿಗೆ ಗೈಡ್‌ಗಳ ತರಬೇತಿ ಕಲ್ಪಿಸಿಕೊಟ್ಟು, ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ತರಬೇತಿ ಪಡೆದವರಲ್ಲಿ ಯಾರೂ ಗೈಡ್‌ಗಳಾಗಿ ವೃತ್ತಿ ನಡೆಸಲು ಆಸಕ್ತಿ ತೋರಲೇ ಇಲ್ಲ. ನಂತರ ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಆಗಲಿ ಇಂಥ ಯಾವುದೇ ಪ್ರಯತ್ನಕ್ಕೆ ಮುಂದಾಗಲಿಲ್ಲ. ಹಾಗಾಗಿ ಗೈಡ್‌ಗಳ ಕೊರತೆ ಹಾಗೆಯೇ ಮುಂದುವರೆದಿದೆ.
ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶ ಹೊಂದಿರುವ ಬೀದರನಲ್ಲಿ ಗೈಡ್‌ಗಳ ಕೊರತೆಯೂ ಸಹ ತೊಡಕಾಡುತ್ತಿದೆ. ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಬೀದರ ಕುರಿತು ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. ಈಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದ ಇತರ ಪಾರಂಪರಿಕ ತಾಣಗಳಂತೆ ಬೀದರನಲ್ಲೂ ಗೈಡ್‌ಗಳನ್ನು ನೇಮಿಸಬೇಕಿದೆ.