Advertisement

ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ 12ಕ್ಕೆ

07:11 PM Jan 10, 2020 | Naveen |

ಬೀದರ: ನಾಟ್ಯಶ್ರೀ ನೃತ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ. 12ರಂದು ನಗರದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾ ಸಂಭ್ರಮೋತ್ಸವದಲ್ಲಿ ಕರಾವಳಿಯ ಕಲಾ ಪ್ರತಿಭೆ ರಾಣಿ ಸತ್ಯಮೂರ್ತಿ ಅವರ ನಿರ್ದೇಶನದಲ್ಲಿ ಭರತನಾಟ್ಯ, ಕಥಕ್‌ ನೃತ್ಯ, ಕೂಚಿಪುಡಿ ನೃತ್ಯ, ಜಾನಪದ ನೃತ್ಯ, ಸಂಗೀತ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10:30ಕ್ಕೆ ನಡೆಯಲಿರುವ “ಶಾಸ್ತ್ರೀಯ ನೃತ್ಯ ವೈಭವ’ದಲ್ಲಿ ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಭರತನಾಟ್ಯ ಪ್ರದರ್ಶಿಸಲಿದ್ದಾರೆ.

ಶ್ವೇತಾ ವಿ. ಅವರ ನಿರ್ದೇಶನದಲ್ಲಿ ಪೌರಾಣಿಕ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಮಧ್ಯಾಹ್ನ 12:30ಕ್ಕೆ ಶಾಸ್ತ್ರೀಯ ನೃತ್ಯ ಮತ್ತು ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸ ಜರುಗಲಿದೆ. ಉಡುಪಿಯ ಕೊಡವೂರು ನೃತ್ಯ
ನಿಕೇತನದ ನಿರ್ದೇಶಕ ಕೆ. ಸು ಧೀರರಾವ್‌ ಉಪನ್ಯಾಸ ನೀಡುವರು. ಜಾನಪದ ಅಕಾಡೆಮಿ ಸದಸ್ಯ ಡಾ| ರಾಜೇಂದ್ರ ಯರನಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹಾಗೂ ಹಿರಿಯ ಸಾಹಿತಿ ಪ್ರೊ| ಶಿವಕುಮಾರ ಕಟ್ಟೆ ಉಪಸ್ಥಿತರಿರುವರು ಎಂದು ಹೇಳಿದರು.

ಮಧ್ಯಾಹ್ನ 2:45ಕ್ಕೆ ನಡೆಯಲಿರುವ “ಶಾಸ್ತ್ರೀಯ ನೃತ್ಯ ಕೂಚಿಪುಡಿ’ಯಲ್ಲಿ ಬಳ್ಳಾರಿಯ ಖ್ಯಾತ ಅಂತಾರರಾಷ್ಟ್ರೀಯ ಕಲಾವಿದ ಮಯೂರಿ ಬಸವರಾಜ ಅವರು “ತರಂಗಂ’ ಮತ್ತು “ಭಾಮಾಕಲಾಪ’ ಕೂಚಿಪುಡಿ ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 3:30ಕ್ಕೆ ವಿಜಯಪುರದ ಖ್ಯಾತ ಅಂತಾರಾಷ್ಟ್ರೀಯ ಕಲಾವಿದ ರಂಗನಾಥ ಬತ್ತಾಸಿ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ ಕಥಕ್‌ ಜರುಗಲಿದೆ. ಕಲಾವಿದರಾದ ಶಂಭುಲಿಂಗ ವಾಲೊªಡ್ಡಿ, ಭಾನುಪ್ರಿಯಾ ಅರಳಿ, ಮಹೇಶ ಕುಂಬಾರ, ಮಹೇಶ್ವರಿ ಪಾಂಚಾಳ, ರೇಣುಕಾ ಎನ್‌.ಬಿ., ಪ್ರವೀಣಕುಮಾರ, ಇಮಾನುವೆಲ್‌, ಶೈಲಜಾ ದಿವಾಕರ್‌, ಭಾಗ್ಯಲಕ್ಷ್ಮೀ ಗುರುಮೂರ್ತಿ ಹಾಗೂ ರಮ್ಯ ಜೋಶಿ ಅವರು ಜಾನಪದ ಗೀತೆ, ದಾಸರ ಪದ, ಸುಗಮ ಸಂಗೀತ ಹಾಗೂ ವಚನ ಗಾಯನ ನಡೆಸಿಕೊಡುವರು ಎಂದು ವಿವರಿಸಿದರು.

Advertisement

ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಚಾಲನೆ ನೀಡುವರು. ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಸಂಸದ ಭಗವಂತ ಖೂಬಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ, ರಾಯಚೂರು ಕೃಷಿ ವಿವಿಯ ಡಾ| ಕೆ. ಭವಾನಿ, ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಪ್ರೊ| ಪಿ.ಎನ್‌. ದಿವಾಕರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಉಡುಪಿಯ ಕೊಡವೂರು ನೃತ್ಯ ನಿಕೇತನದ ನಿರ್ದೇಶಕ ಕೆ. ಸುಧೀರರಾವ್‌ ಉಪಸ್ಥಿತರಿರುವರು. ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ವಿಜಯಪುರದ ಕಥಕ್‌ ನೃತ್ಯ ಕಲಾವಿದ ರಂಗನಾಥ ಬತ್ತಾಸಿ ಅವರಿಗೆ 2020ನೇ ಸಾಲಿನ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿಯು ರೂ. 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು. ಸಂಜೆ 5:30ಕ್ಕೆ ಜನಪದ ಸಂಭ್ರಮ ನಡೆಯಲಿದ್ದು, ನಾಟ್ಯಶ್ರೀ ನೃತ್ಯಾಲಯದ ಕಲಾವಿದರಿಂದ ವೈವಿಧ್ಯಮಯ ಸಮೂಹ ನೃತ್ಯ, ಶಾಂಭವಿ ತಂಡದಿಂದ ನೃತ್ಯ ರೂಪಕ ಹಾಗೂ ನಾಟ್ಯಶ್ರೀ ನೃತ್ಯಾಲಯದ ಪಾಲಕರಿಂದ ಕೋಲಾಟ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷ ಸತ್ಯಮೂರ್ತಿ ಹಾಗೂ ಪ್ರತಿಭಾ
ಚಾಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next