Advertisement

ಸಮರ್ಪಕ ಪಡಿತರ ವಿತರಣೆಗೆ ಸಿಎಂ ಕ್ರಮ ಕೈಗೊಳ್ಳಲಿ

02:58 PM Aug 03, 2019 | Team Udayavani |

ಬೀದರ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪಡಿತರ ಗ್ರಾಹಕರಿಗೆ ಅಕ್ಕಿ, ಗೋಧಿ, ಉಪ್ಪು, ಎಣ್ಣೆ ಮತ್ತು ಸೀಮೆ ಎಣ್ಣೆ ಸರಬರಾಜು ಮಾಡಿದಂತೆ, ಇಂದಿನ ಮುಖ್ಯಮಂತ್ರಿ ಬಿಎಸ್‌ವೈ ಅವರು ಕೂಡ ಅಕ್ಕಿ ಜೊತೆಗೆ ಗೋಧಿ, ಕಡಲೆ, ಎಣ್ಣೆ ಮತ್ತು ಸೀಮೆ ಎಣ್ಣೆ ಸರಬರಾಜು ಮಾಡಲು ಮನವಿ ಮಾಡಲಾಗಿದೆ ಎಂದು ಪಡಿತರ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದರು.

Advertisement

ನಗರದ ಮಯೂರ್‌ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಡೆದ ಪಡಿತರ ವಿತರಕರ ಜಿಲ್ಲಾ ಸಮಾವೇಶ ಹಾಗೂ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ತಮಿಳುನಾಡು, ಪಾಂಡಿಚೇರಿ ಮತ್ತು ಛತ್ತಿಸ್‌ಘಡ ರಾಜ್ಯಗಳಲ್ಲಿ ಪಡಿತರ ಫಲಾನುಭವಿಗಳಿಗೆ ನೇರವಾಗಿ ಖಾತೆಗೆ ಹಣ ಜಮೆ ಮಾಡುತ್ತಿದೆ. ಇದನ್ನು ಹಿಂದಿನಂತೆ ಪಡಿತರ ವಿತಕರಿಂದಲೇ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವಂತೆ ದೇಶದ ವಿವಿಧ 16 ರಾಜ್ಯಗಳ ಪ್ರತಿನಿಧಿಗಳ ತಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಆಹಾರ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಬಿ.ಎಸ್‌ ಯಡಿಯೂರಪ್ಪ ಅವರು, ರಾಜ್ಯದ ಪಡಿತರ ವಿತರಕರ ಸಂಘದ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳನ್ನು ವಿಧಾನ ಸೌಧಕ್ಕೆ ಕರೆದು ಸಭೆ ನಡೆಸಿ, ಪಡಿತರ ಆಹಾರ ಸರಬರಾಜು ಕುರಿತು ಸುದೀರ್ಘ‌ ಚರ್ಚೆ ನಡೆಸಿದ್ದರು. ಇದೀಗ ಮತ್ತೆ ಮುಖ್ಯಮಂತ್ರಿಯಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ಇದೆ ಎಂದರು.

ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯ ಪೈಕಿ 4 ಕೋಟಿ ಜನಸಂಖ್ಯೆಗೆ ಪಡಿತರ ಆಹಾರ ವಿತರಣೆ ಮಾಡಲಾಗುತ್ತಿದೆ. ಇದು ನಮಗೆ ದೇವರು ಕೊಟ್ಟ ಭಾಗ್ಯ. ಅನ್ನ ಭಾಗ್ಯ ಯೋಜನೆಯಡಿ ರಾಜ್ಯದ ಜನತೆಗೆ ಸಮರ್ಪಕವಾಗಿ ಪಡಿತರ ಆಹಾರ ವಿತರಣೆ ಮಾಡುತ್ತಿರುವುದು ನಿಮ್ಮೆಲ್ಲರ ಪುಣ್ಯವಾಗಿದೆ. ಈ ಹಿಂದೆ ಪಡಿತರ ವಿತರಕರಿಗೆ 20 ರೂಪಾಯಿ ಕಮಿಷನ್‌ ಕೊಡಲಾಗುತಿತ್ತು. ಈಗ ಕಮಿಷನ್‌ 128 ರೂ.ಗೆ ಏರಿಕೆಯಾಗಿದೆ. ಬರುವ ಒಂದು ವರ್ಷದಲ್ಲಿ ಇನ್ನೂ 25 ರೂಪಾಯಿ ಕಮಿಷನ್‌ ಏರಿಕೆಗೆ ಪ್ರಯತ್ನ ಮಾಡಲಾಗುವುದು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಜಿಲ್ಲಾ ಶಾಖೆ ಅಧ್ಯಕ್ಷ ಸುಧಾಕರ ರಾಜಗೀರಾ, ಕರ್ನಾಟಕ ಆಹಾರ ನಿಗಮ ಮಂಡಳಿ ಜಿಲ್ಲಾ ವ್ಯವಸ್ಥಾಪಕರಾದ ಗುರುರಾಯ, ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಲ್. ರಾಮಚಂದ್ರು, ಚೆನ್ನಕೇಶವ ಗೌಡ್ರು, ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಮೆಂಡೋಳೆ, ಸಂಘದ ರಾಜ್ಯ ಕಾರ್ಯದರ್ಶಿ ಎಂ.ಕೆ. ರಾಮಚಂದ್ರ, ರಾಜ್ಯ ಖಜಾಂಚಿ ನಟರಾಜ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವಿಜಯಕುಮಾರ ಸುಗಂಧೆ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಅಶೋಕ ಲೋಖಂಡೆ, ಜಿಲ್ಲಾ ಆಹಾರ ಸಾಗಾಣಿಕೆದಾರರಾದ ಸೋಮಶೇಖರ ಪಾಟೀಲ ಗಾದಗಿ, ಶ್ರೀನಿವಾಸ ರೇಜಂತಲ್, ಭರತ ಎಸ್‌. ಬೌದ್ಧೆ, ಶಿವಶರಣಪ್ಪ ಪಾಟೀಲ, ಕಂಟೆಪ್ಪ ಪಾಟೀಲ, ಹುಲ್ಲೆಪ್ಪಾ ಠಾಕೂರ, ಬಾಪೂರಾವ್‌ ಹೊಕ್ಕನಾರೆ, ಮಹೇಶ ಪಾಲಂ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next